Advertisement

ರಾಷ್ಟ್ರೀಕೃತ ಬ್ಯಾಂಕ್‌ ಸಾಲ ಮನ್ನಾಕ್ಕೆ ಒತ್ತಾಯ

12:32 PM Jul 19, 2017 | |

ಕಲಬುರಗಿ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಕಲಬುರಗಿ ದಕ್ಷಿಣ ಕ್ಷೇತ್ರದ ಯುವ
ಕಾಂಗ್ರೆಸ್‌ ಕಾರ್ಯಕರ್ತರು ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದ ಬಳಿಯ ಸಿಂಡಿಕೇಟ್‌ ಎದುರು ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನಾಕಾರರು ಬ್ಯಾಂಕ್‌ ವ್ಯವಸ್ಥಾಪಕರ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿ, ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ರೈತರ ನೆರವಿಗೆ ಧಾವಿಸುವಂತೆ ಪ್ರಧಾನಿಗೆ ಮನವಿ ಮಾಡಿದರೂಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸಹಕಾರಿ ಸಂಘಗಳಲ್ಲಿನ ರೈತರ ಸಾಲವನ್ನು 50 ಸಾವಿರ ರೂ.
ವರೆಗೆ ಮನ್ನಾ ಮಾಡಿದ್ದಾರೆ. ಇದರಿಂದ 22 ಲಕ್ಷಕ್ಕೂ ಅಧಿಕ ರೈತರಿಗೆ ಸಹಾಯವಾಗಿದೆ. ರೈತ ಪರ ಎಂದು ಭಾಷಣ ಬಿಗಿಯುವ ಪ್ರಧಾನಿ ಮೋದಿ ರೈತರ ಸಂಕಷ್ಟದ ಕಡೆ ಗಮನ ನೀಡುತ್ತಿಲ್ಲ. ಬದಲಾಗಿ ಕೇಂದ್ರಸಚಿವರು ರೈತರ ಬಗ್ಗೆ ಹಗುರವಾಗಿ
ಮಾತಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಿಂದ ಆಯ್ಕೆಯಾಗಿರುವ 17 ಬಿಜೆಪಿ ಸಂಸದರು ಸಾಲ
ಮನ್ನಾ ಕುರಿತು ಒಮ್ಮೆಯಾದರೂ ಧ್ವನಿ ಎತ್ತಿಲ್ಲ. ಕೂಡಲೇ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ
ಮಾಡಬೇಕೆಂದು ಟೋಪಿ ಧರಿಸಿ, ಎತ್ತಿನ ಬಂಡಿಯೊಂದಿಗೆ ಆಗಮಿಸಿದ್ದ ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕಲಬುರಗಿ ದಕ್ಷಿಣ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಶಿವಾನಂದ ಹೊನಗುಂಟಿ, ರವೀಂದ್ರ ಕೊಲ್ಲೂರ, ಮಜಹರ್‌ ಖಾನ್‌,ಡಾ| ಕಿರಣ ದೇಶಮುಖ, ಫಾರುಖ ಮಣಿಯಾಲ್‌, ಈರಣ್ಣ ಝಳಕಿ, ಸೈಯ್ಯದ ರಿಯಾಜ್‌, ಸೈಯ್ಯದ್‌ ಫಾರುಖ್‌, ರಾಹುಲ್‌ ಸೇಡಂಕರ, ಸಚೀನ ಮೂಲಗೆ, ಶೇಖ್‌ ತಾಜುದ್ದಿನ್‌, ಓವೈಜ್‌ ಶೇಖ್‌ ಹಾಗೂ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next