Advertisement

ಎಸ್ಸಿ -ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ  

02:19 PM Apr 14, 2022 | Team Udayavani |

ಹೊಸಪೇಟೆ: ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಬೇಡಿಕೆ ಸರ್ಕಾರ ಮೀನ-ಮೇಷ ಎಣಿಸುತ್ತಿದೆ. ಸರ್ಕಾರ ಇಂಥ ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು ಎಂದು ಶಾಸಕ ಜೆ.ಎನ್‌. ಗಣೇಶ್‌ ಹೇಳಿದರು.

Advertisement

ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪ. ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಎಸ್ಸಿ, ಎಸ್ಟಿ ಸಮಾಜದವರು ನಗರದ ತಹಶೀಲ್ದಾರ್‌ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಬುಧವಾರ ಅವರು ಮಾತನಾಡಿದರು. ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಜನಸಂಖ್ಯೆ ಆಧಾರದ ಅನ್ವಯ ಮೀಸಲಾತಿ ಹೆಚ್ಚಿಸಬೇಕು. ನ್ಯಾ| ನಾಗಮೋಹನದಾಸ್‌ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸಿಎಂ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಳ ಮಾಡಬೇಕು. ಈಗಾಗಲೇ ರಾಜ್ಯ ಸರ್ಕಾರಕ್ಕೆ ನ್ಯಾ. ನಾಗಮೋಹನದಾಸ ಅವರು ವರದಿ ನೀಡಿದ್ದರೂ ಇನ್ನೊಂದು ಆಯೋಗ ರಚನೆ ಮಾಡುವುದು ಸರಿಯಲ್ಲ. ಈ ಮೂಲಕ ಈ ಸಮುದಾಯಗಳ ಬಹು ವರ್ಷಗಳ ಬೇಡಿಕೆ ಈಡೇರಿಸಬೇಕು ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಜೆಟ್‌ನಲ್ಲೂ ಎಸ್ಸಿ,ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಬೇಕು. ಜತೆಗೆ ಸ್ಥಳೀಯ ಸಂಸ್ಥೆ ಬಜೆಟ್‌ನಲ್ಲೂ ಅನುದಾನ ಮೀಸಲಿಡಬೇಕು. ದೇಶದ ಮೂಲನಿವಾಸಿಗಳು ಮೀಸಲಾತಿ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಆಳುವ ಸರ್ಕಾರಗಳು ಇತ್ತ ದೃಷ್ಟಿಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

153 ಜಾತಿಗಳನ್ನು ಒಳಗೊಂಡು ಈ ಪಂಗಡಗಳಿಗೆ ಮೀಸಲಾತಿ ಹೆಚ್ಚಿಸಲು ಮೀನ-ಮೇಷ ಎಣಿಸಲಾಗುತ್ತಿದೆ. ಎಸ್ಟಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲು ಹೆಚ್ಚಿಸಬೇಕು. ಇನ್ನೂ ಎಸ್ಸಿ ಸಮುದಾಯಕ್ಕೆ ಶೇ.17 ರಷ್ಟು ಮೀಸಲು ಹೆಚ್ಚಿಸಬೇಕು. ಮೀಸಲಾತಿ ಹೆಚ್ಚಳಕ್ಕೆ ನ್ಯಾ| ನಾಗಮೋಹನ ದಾಸ್‌ ಆಯೋಗ ಈಗಾಗಲೇ ವರದಿ ನೀಡಿದೆ. ಆದರೂ ಸರ್ಕಾರ ಮೀಸಲಾತಿ ಹೆಚ್ಚಳ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ನಗರದ ಮದಕರಿ ನಾಯಕ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಮಹಿಳಾ ಸಂಘಗಳ ಸದಸ್ಯೆಯರು ಪ್ರತಿಭಟನೆ ನಡೆಸಿದರು. ಮಹಿಳಾ ಮುಖಂಡರಾದ ಸರಳಾ, ಕಾವ್ಯ, ಅನುರಾಧಾ, ಮುಖಂಡರಾದ ಹೋರಾಟ ಕ್ರಿಯಾಸಮಿತಿ ಸದಸ್ಯರಾದ ವೀರಸ್ವಾಮಿ, ಎಂ. ಜಂಬಯ್ಯ ನಾಯಕ, ಬಿ.ಎಸ್. ಜಂಬಯ್ಯ ನಾಯಕ, ದುರ್ಗಪ್ಪ ಪೂಜಾರಿ, ಗೋಸಲ ಭರಮಪ್ಪ, ಗುಜ್ಜಲ ನಾಗರಾಜ, ಗುಜ್ಜಲ ರಘು, ಗೋವಿಂದರ ಪರಶುರಾಮ, ಪ್ರಕಾಶ ಪೂಜಾರ, ಸಣ್ಣ ಮಾರೆಪ್ಪ, ವೀರಭದ್ರ ನಾಯಕ, ನಿಂಬಗಲ್‌ ರಾಮಕೃಷ್ಣ, ಗುಂಡಿ ರಮೇಶ್‌, ಮರಿದಾಸ್‌, ಎಚ್‌. ಶೇಷು, ಮೆಶಾಕ್‌ ಅಂಕಾಳಿ, ಕಟಿಗಿ ವಿಜಯಕುಮಾರ, ಕಟಿಗಿ ಜಂಬಯ್ಯ ನಾಯಕ, ಬಿ. ತಾಯಪ್ಪ ನಾಯಕ, ಪಿ.ವಿ. ವೆಂಕಟೇಶ, ಶೇಕ್ಷಾವಲಿ, ಸಣ್ಣವೀರಪ್ಪ, ಕೆ.ಮಲ್ಲಪ್ಪ, ಗುಜ್ಜಲ ಚಂದ್ರಶೇಖರ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next