Advertisement

ಬಿಡಕಿಬಯಲಿನ ಅಂಗಡಿ ಮರಳಿ ನೀಡಲು ಒತ್ತಾಯ

05:52 AM Jun 06, 2020 | Team Udayavani |

ಶಿರಸಿ: ಮಾರಿಕಾಂಬಾ ದೇವಿ ಜಾತ್ರೆ ವೇಳೆ ತೆರವುಗೊಳಿಸಲಾಗಿದ್ದ ನಗರದ ಹೃದಯಭಾಗವಾದ ಬಿಡಕಿಬಯಲು ಹಾಗೂ ಕೋಣನ ಬಿಡಕಿಬಯಲಿನ ಅಂಗಡಿಗಳನ್ನು ಮರಳಿ ನೀಡಲು ಅನುಮತಿ ನೀಡುವಂತೆ ನಗರಸಭೆಯು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದೆ. ಇಲ್ಲಿನ ವರ್ತಕರು ಆದಷ್ಟು ಶೀಘ್ರ ಅನುಮತಿ ನೀಡುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

Advertisement

ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯವ ಮಾರಿಕಾಂಬಾ ದೇವಿ ಜಾತ್ರೆ ಇದೇ ಬಿಡಕಿಬಯಲು ಹಾಗೂ ಜಾತ್ರೆಯ ಮನೋರಂಜನಾ ಐಟಂಗಳನ್ನು ಕೋಣನ ಬಿಡಕಿಯಲ್ಲಿ ಹಾಕಿಕೊಳ್ಳಲಾಗುತ್ತಿದ್ದವು. ಬಿಡಕಿಬಯಲು ಹಾಗೂ ಕೋಣನಬಿಡಕಿಯಲ್ಲಿ ಪ್ರತೀ ಎರಡು ವರ್ಷಕ್ಕೆ ಎರಡು ತಿಂಗಳು ತೆರವುಗೊಳಿಸಲಾಗುತ್ತಿತ್ತು. ನಗರಸಭೆ ಅಂಗಡಿಗಳನ್ನು ತೆರವುಗೊಳಿಸಿ ಮಾರಿಕಾಂಬಾ ಜಾತ್ರೆಗೆ ದೇವಾಲಯಕ್ಕೆ ಹಸ್ತಾಂತರಿಸಲಾಗುತ್ತಿದ್ದವು. ಜಾತ್ರೆ ಮುಗಿದು 15 ದಿನಗಳ ಬಳಿಕ ನಗರಸಭೆ ಅಂಗಡಿಕಾರರಿಗೆ ಮರಳಿ ನೀಡುತ್ತಿತ್ತು. ಇದ್ದ ಅಂಗಡಿಕಾರರಿಗೆ ಹಳೆ ಬಾಡಿಗೆಗೆ ಶೇ. 10ರಷ್ಟನ್ನು ಹೆಚ್ಚಳ ಮಾಡಿ ನೀಡಲಾಗುತ್ತಿತ್ತು. ಈ ಬಾರಿ ಜಾತ್ರೆ ಮಾ. 11ಕ್ಕೆ ಮುಗಿದು 25ರ ಹಾಗೆ ನೀಡಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಲಾಕ್‌ಡೌನ್‌ ಉಂಟಾಯಿತು. ಇದರಿಂದ ಈ ಪ್ರಕ್ರಿಯೆ ಕೂಡ ವಿಳಂಬವಾಯಿತು.

ನಗರಸಭೆಗೆ ಚುನಾಯಿತ ಜನಪ್ರತಿನಿಧಿಗಳ ಅಧ್ಯಕ್ಷ, ಉಪಾಧ್ಯಕ್ಷರ ಸಂಗತಿ ನ್ಯಾಯಾಲಯದಲ್ಲಿ ಇರುವ ಕಾರಣದಿಂದ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದಾರೆ. ಮೇ ಕೊನೇ ವಾರ ಜಿಲ್ಲಾಧಿಕಾರಿಗಳಿಗೆ ನಗರಸಭೆ ಮರಳಿ ಪ್ರಸ್ತಾವನೆ ಕಳಿಸಿದೆ. ಬಿಡಕಿ ಬಯಲಿನ 197 ಹಾಗೂ ಕೋಣನಬಿಡಕಿಯ 140 ಅಂಗಡಿಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ. ನಗರಸಭೆಗೆ ಎರಡು ವರ್ಷಕ್ಕೆ ಸುಮಾರು ಒಂದುವರೆ ಕೋಟಿ ರೂ. ಆದಾಯ ಬರಲಿದೆ. ಪ್ರತಿದಿನ ವಾಹನಗಳಲ್ಲಿ ಬಂದು ತಮ್ಮ ತಮ್ಮ ಅಂಗಡಿಗಳ ಜಾಗದಲ್ಲಿ ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ದಾರೆ. ತಕ್ಷಣ ಅಂಗಡಿ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಳ್ಳಲು ವರ್ತಕರು ಆಗ್ರಹಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next