Advertisement

ಅಕ್ರಮ ರೇಷ್ಮೆಗೂಡು ಬೇಯಿಸುವ ಘಟಕ ತೆರವಿಗೆ ಒತ್ತಾಯ

09:20 PM Mar 17, 2020 | Team Udayavani |

ಚಿಂತಾಮಣಿ: ನಗರದ ವಾರ್ಡ್‌ ನಂ.2 ರ ಸುದ್ದುಗುಂಟೆ ಆಶ್ರಯ ಬಡಾವಣೆಯಲ್ಲಿ ಅಕ್ರಮವಾಗಿ ರೇಷ್ಮೆ ಗೂಡಿನ ಹುಳುಗಳನ್ನು ಬೇಯಿಸುತ್ತಿರುವ ಕಾರಣ ಘಟಕದ ಸುತ್ತಮುತ್ತಲಿನ ನಿವಾಸಿಗಳು ದುರ್ವಾಸನೆ ತಾಳಲಾರದೇ ಶ್ವಾಸಕೋಶ ಮತಿತ್ತರ ಕಾಯಿಲೆಗಳಿಂದ ಬಳಲುತ್ತಿದ್ದು, ಕೂಡಲೇ ರೇಷ್ಮೆಗೂಡು ಬೇಯಿಸುವ ಘಟಕ ತೆರವುಗೊಳಿಸುವಂತೆ ಸುದ್ದುಗುಂಟೆ ನಿವಾಸಿಗಳು ಒತ್ತಾಯಿಸಿದ್ದಾರೆ.

Advertisement

ವಿಶ್ವಾದ್ಯಂತ ಕೊರೊನಾ ವೈರಸ್‌ ವ್ಯಾಪಕ ಹರಡುತ್ತಿರುವ ಹಿನ್ನೆಲೆಯಲ್ಲಿ ಜನತೆ ಭಯ ಭೀತರಾಗಿದ್ದು, ವಾರ್ಡ್‌ ನಂ 2ರ ಸುದ್ದುಗುಂಟೆ ಆಶ್ರಯ ಬಡಾವಣೆಯಲ್ಲಿ ಹಲವು ವರ್ಷಗಳಿಂದ ಜನನಿಬಿಡ ಪ್ರದೇಶದ ವಾಸದ ಮನೆಗಳ ಬಳಿ ಅಕ್ರಮವಾಗಿ ಕೆಲವರು ರೇಷ್ಮೆಗೂಡಿನಲ್ಲಿರುವ ಹುಳುಗಳನ್ನು ತಂದು ಬೇಯಿಸುತ್ತಿರುವ ಕಾರಣ ಸುದ್ದುಕುಂಟೆ ಹಾಗೂ ಆಶ್ರಯ ಬಡಾವಣೆಗಳ ನಿವಾಸಿಗಳು ವಾಸ ಮಾಡದಂತಹ ಸ್ಥಿತಿಗೆ ತಲುಪಿದ್ದಾರೆ.

ಶ್ವಾಸಕೋಶ ಸಮಸ್ಯೆ: ರೇಷ್ಮೆ ಹುಳುಗಳಿಂದ ಮಕ್ಕಳು, ವಯೋವೃದ್ಧರಿಗೆ ಶ್ವಾಸಕೋಶ ಮತಿತ್ತರ ಕಾಯಿಲೆ ಹರಡುತ್ತಿರುವುದರ ಜೊತೆಗೆ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್‌ನಿಂದ ಜನರು ಭಯಭೀತರಾಗಿದ್ದಾರೆ.

ಗಮನಕ್ಕೆ ತಂದರೂ ಪ್ರಯೋಜನವಿಲ್ಲ: ಅಕ್ರಮವಾಗಿ ನಡೆಸುತ್ತಿರುವ ರೇಷ್ಮೆ ಹುಳು ಬೇಯಿಸುವ ಗುಂಡಿಯನ್ನು ಮುಚ್ಚುವಂತೆ ಹಲವು ಬಾರಿ ಸಂಬಂಧಪಟ್ಟ ನಗರಸಭೆ, ಜನಪ್ರತಿನಿಧಿಗಳು ಹಾಗೂ ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದರೂ, ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸುದ್ದುಗುಂಟೆ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲಾಕಾರಿಗಳ ಕಛೇರಿಗೆ ಮುತ್ತಿಗೆ: ರೇಷ್ಮೆ ಹುಳುವಿನ ವಾಸನೆಯಿಂದ ಕೊರೋನಾ ಮತ್ತಿತ್ತರ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜನತೆ ಇದ್ದು, ಸಂಬಂದಪಟ್ಟವರು ಆಕ್ರಮವಾಗಿ ನಡೆಸುತ್ತಿರುವ ರೇಷ್ಮೆ ಹುಳುವಿನ ಗುಂಡಿಯನ್ನು ತೇರವುಗೊಳಿಸದಿದ್ದರೇ ಸುದ್ದುಗುಂಟೆ ನಿವಾಸಿಗಳೆಲ್ಲಾ ಸೇರಿ, ನಗರಸಭೆ ಹಾಗೂ ಜಿಲ್ಲಾದಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

Advertisement

ಸುದ್ದುಕುಂಟೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ರೇಷ್ಮೆಹುಳು ಬೇಯಿಸುವ ಘಟಕವನ್ನು ಈ ಹಿಂದೆ ಒಂದು ಬಾರಿ ಖುದ್ದು ನಾವೇ ಸ್ಥಳಕ್ಕೆ ತೆರಳಿ, ಸ್ಥಳೀಯರ ಸಮ್ಮುಖದಲ್ಲಿಯೇ ತೆರವುಗೊಳಿಸಲಾಗಿತ್ತು. ಇದೀಗ ಮತ್ತೆ ಘಟಕವನ್ನು ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ತೆರವುಗೊಳಿಸಲು ಮುಂದಾಗುತ್ತೇವೆ.
-ಹರೀಶ್‌, ನಗರಸಭೆ ಪೌರಾಯುಕ್ತ ಚಿಂತಾಮಣಿ

Advertisement

Udayavani is now on Telegram. Click here to join our channel and stay updated with the latest news.

Next