Advertisement

ಬೇಡಿಕೆ ಈಡೇರಿಕೆಗೆ ಒತ್ತಾಯ

03:11 PM Jun 19, 2019 | Team Udayavani |

ಬ್ಯಾಡಗಿ: ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಘೋಷಣೆ ಮಾಡಿ 6ನೇ ವೇತನ ತಾರತಮ್ಯ ನಿವಾರಣೆಯೊಂದಿಗೆ ಇತರೆ ಎಲ್ಲ ಸೌಲಭ್ಯವನ್ನುದೊರಕಿಸಿಕೊಡುವಂತೆ ಆಗ್ರಹಿಸಿ ಸಾರಿಗೆ ಸಿಬ್ಬಂದಿ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಪ್ರತಿಭಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ನೌಕರರು ರಾಜ್ಯದಲ್ಲಿ ಒಟ್ಟು 4 ಸಾರಿಗೆ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ವಾಕರಸಾ, ಕರಾರಸಾ, ಬಿಎಂಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆಯಲ್ಲಿ ಒಟ್ಟು 1.25 ಲಕ್ಷ ಸಾರಿಗೆ ನೌಕಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದಲ್ಲಿಯೇ ಕರ್ನಾಟಕ ಸಾರಿಗೆ ವ್ಯವಸ್ಥೆ ಉತ್ತಮ ಹೆಸರು ಪಡೆದುಕೊಂಡಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ. ಈ ಸಾಧನೆ ಹಿಂದೆ ಲಕ್ಷಾಂತರ ಸಾರಿಗೆ ನೌಕರರ ಶ್ರಮವಿದ್ದು, ನಮ್ಮನ್ನು ಸರಕಾರಿ ನೌಕರರೆಂದು ಘೋಷಣೆ ಮಾಡುವಂತೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next