Advertisement

ಅಂಡರ್‌ಪಾಸ್‌ ಬ್ರಿಡ್ಜ್ ನಿರ್ಮಾಣಕ್ಕೆ ಒತ್ತಾಯ

02:38 PM Nov 09, 2019 | Suhan S |

ಬಂಕಾಪುರ: ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಿರುವ ಹಿಂದೂ ಸ್ಮಶಾನಕ್ಕೆ ತೆರಳಲು ಹಳ್ಳಿಕೇರಿ ಬಸವೇಶ್ವರ ದೇವಸ್ಥಾನದ ಹತ್ತಿರ ಅಂಡರ್‌ ಪಾಸ್‌ ಬ್ರಿಡ್ಜ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಪಟ್ಟಣದ ಸಾರ್ವಜನಿಕರು ಉಪತಹಶೀಲ್ದಾರ್‌ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.

Advertisement

ಪಟ್ಟಣ 40 ಸಾವಿರಕ್ಕಿಂತಲೂ ಅ ಧಿಕ ಜನಸಂಖ್ಯೆ ಹೊಂದಿದೆ. ಹಿಂದೂಗಳು ಶವ ಸಂಸ್ಕಾರಕ್ಕೆ ಹಳ್ಳಿಕೇರಿ ಬಸವೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಧಿಕವಿದ್ದು, ಶವ ಸಂಸ್ಕಾರಕ್ಕೆ ತೆರಳುವ ಸಾರ್ವಜನಿಕರಿಗೆ ಹಾಗೂ ಚಕ್ಕಡಿ ಎತ್ತುಗಳನ್ನು ತೆಗೆದುಕೊಂಡು ಹೊಲಕ್ಕೆ ಹೋಗುವ ರೈತರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂತಾಗಿದೆ.

ಇಗಾಗಲೇ ಹೆದ್ದಾರಿ ದಾಟುವಾಗ ಜನ, ಜಾನುವಾರಗಳ ಸಾಕಷ್ಟು ಸಾವು ನೋವುಗಳು ಸಂಭವಿಸಿರುವ ಉದಾಹರಣೆಗಳಿವೆ. ಆದ್ದರಿಂದ ಶ್ರೀ ಹಳ್ಳಿಕೇರಿ ಬಸವೇಶ್ವರ ದೇವಸ್ಥಾನದ ಹತ್ತಿರ ಅಂಡರ್‌ ಬ್ರಿಡ್ಜ್ ಮಾಡಿ ಸಾರ್ವಜನಿಕರಿಗೆ ಅನಕೂಲಮಾಡಿಕೊಡುವಂತೆಸಾರ್ವಜನಿಕರು ಆಗ್ರಹಿಸಿದರು. ನಮ್ಮ ಈ ಹೋರಾಟ 2013 ಚತುಬುಜ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭವಾದಾಗಿನಿಂದಲೂ ಇಂದಿನ ವರೆಗೂ ನಡೆದುಕೊಂಡು ಬಂದಿದ್ದು, ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಬಂದಿದ್ದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಅ ಧಿಕಾರಿಗಳು ನೀಡಿದ ಭರವಸೆ ಈಡೇರಿಲ್ಲ. ನೆಲೋಗಲ್‌ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ರಾಷ್ಟ್ರೀಯ ಹೆದ್ದಾರಿ ದಾಟಿ ರುದ್ರ ಭೂಮಿಗೆ ತೆರಳಲು ಅಂಡರ್‌ ಬ್ರಿಡ್ಜ್ಮಾ ಡಿ ಅನಕೂಲ ಮಾಡಿಕೊಟ್ಟಂತೆ ಬಂಕಾಪುರ ಜನತೆ ಮನವಿಗೂ ಸ್ಪಂದಿಸಬೇಕು. ಮನವಿಗೆ ಸ್ಪಂದಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಅನಿ ರ್ಧಿಷ್ಟ ಕಾಲ ವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಮೂಲಕ ಎಚ್ಚರಿಸಿದ್ದಾರೆ.

ಮುಖಂಡರಾದ ಅಬ್ದುಲ್‌ರಜಾಕ್‌ ತಹಶೀಲ್ದಾರ, ರಾಮಣ್ಣ ರಾಣೋಜಿ, ಮಂಜುನಾಥ ಕೂಲಿ, ಬಸವರಾಜ ನಾರಾಯಣಪುರ, ಸತೀಶ ಆಲದಕಟ್ಟಿ, ಅಶೋಕ ನರೇಗಲ್‌,ಗುರು ಕೆಂಡದಮಠ, ಲಿಂಗರಾಜ ಹಳವಳ್ಳಿ, ಶಂಬಣ್ಣ ವಳಗೇರಿ, ಚನ್ನಕುಮಾರ ದೇಸಾಯಿ, ನಿಂಗನಗೌಡ್ರ ಪಾಟೀಲ, ಬಾಪುಗೌಡ್ರ ಪಾಟೀಲ, ಸುರೇಶ ಗಾಳೆಮ್ಮನವರ, ಕಲ್ಲಪ್ಪ ಹರವಿ, ರಾಜು ಕಮ್ಮಾರ, ಕೊಟೆಪ್ಪ ಸಕ್ರಿ, ಮುಖೇಶ ಜೈನ, ಶಂಬು ತಳವಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next