Advertisement

ಕುಂಚಾವರಂ ಸ್ವಚ್ಛತೆಗೆ ಒತ್ತಾಯ

12:21 PM Feb 14, 2022 | Team Udayavani |

ಚಿಂಚೋಳಿ: ತಾಲೂಕಿನ ಗಡಿಪ್ರದೇಶ ಕುಂಚಾವರಂ ಗ್ರಾಮದಲ್ಲಿ ಒಣ ಮತ್ತು ಹಸಿ ಕಸ ವಿಲೇವಾರಿ, ಚರಂಡಿಗಳನ್ನು ಶುಚಿಗೊಳಿಸದೇ ಇರುವುದರಿಂದ ಅನೇಕ ದಿನಗಳಿಂದ ಗಬ್ಬು ವಾಸನೆ ಬರುತ್ತಿದೆ. ಅಲ್ಲದೇ ಈ ವಾತಾವರಣ ಜನರ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದ್ದರೂ ಕುಂಚಾವರಂ ಗ್ರಾಪಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಡಿಪ್ರದೇಶದ ಸಮಾಜ ಸೇವಕ ಸುರೇಂದ್ರ ಶಿವರೆಡ್ಡಿಪಳ್ಳಿ ದೂರಿದ್ದಾರೆ.

Advertisement

ಕುಂಚಾವರಂ ಗ್ರಾಮದಲ್ಲಿ ಅನೇಕ ಗಲ್ಲಿಗಳಲ್ಲಿ ಚರಂಡಿಗಳಲ್ಲಿ ಹೊಲಸು ತುಂಬಿಕೊಂಡು ಚರಂಡಿ ಗಬ್ಬು ವಾಸನೆ ಬರುತ್ತಿವೆ. ಹರಿಜನವಾಡ, ಕೋಮಟಿಗಲ್ಲಿ, ದಾಸರಗಲ್ಲಿ, ಮುಸ್ಲಿಂ ಬಡಾವಣೆ, ಕ್ರಿಶ್ಚಿಯನ್‌ ಗಲ್ಲಿಗಳಲ್ಲಿ ಅನೇಕ ದಿನಗಳಿಂದ ಚರಂಡಿಗಳನ್ನು ಶುಚಿಗೊಳಿಸಿಲ್ಲವೆಂದು ಗ್ರಾಪಂ ಅಧ್ಯಕ್ಷರಿಗೆ, ಪಿಡಿಒಗಳಿಗೆ ತಿಳಿಸಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಕುಂಚಾವರಂ ಗ್ರಾಪಂಗೆ ಘನತ್ಯಾಜ್ಯ ವಿಲೇವಾರಿ ಮಾಡುವುದಕ್ಕಾಗಿ ವಾಹನ ನೀಡಲಾಗಿದೆ. ಆದರೆ ಡೀಸೆಲ್‌ ಖರೀದಿಸಲು ಗ್ರಾಪಂದಲ್ಲಿ ಅನುದಾನ ಇಲ್ಲವೆಂದು ಪಿಡಿಒ ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಂಚಾವರಂ-ಜಹಿರಾಬಾದ ಮುಖ್ಯರಸ್ತೆ, ಧರ್ಮಸಾಗರ, ಬಸ್‌ ನಿಲ್ದಾಣ, ಅಂಬೇಡ್ಕರ್‌ ಚೌಕ್‌, ರೆಡ್ಡಿ ಕಾಲೋನಿಗಳಲ್ಲಿ ಕಸ ವಿಲೇವಾರಿ ಆಗದೇ ಇರುವುದರಿಂದ ಹಂದಿಗಳ ಕಾಟ ಹೆಚ್ಚಾಗಿದೆ. ಕುರಿ ಕೋಳಿ ಮಾಂಸ, ಎಲುಬುಗಳನ್ನು ಧರ್ಮಸಾಗರ ರಸ್ತೆ ಮಾರ್ಗದಲ್ಲಿ ಬರುವ ತೆಗ್ಗಿನಲ್ಲಿ ಹಾಕುತ್ತಿರುವುದರಿಂದ ವನ್ಯಜೀವಿಧಾಮದ ಕಾಡು ಪ್ರಾಣಿಗಳು ಈ ಕಡೆ ಬರುತ್ತಿವೆ. ಹೀಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಲಕ್ಷ್ಯವಹಿಸುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next