Advertisement

ಶುಚಿ-ರುಚಿ ಆಹಾರ ನೀಡಲು ಒತ್ತಾಯ

09:26 PM Apr 09, 2021 | Team Udayavani |

ಕುಷ್ಟಗಿ : ಹೊರವಲಯದ ಪರಿಶಿಷ್ಟ ವರ್ಗಗಳ ಸರ್ಕಾರಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವಸತಿ ನಿಲಯದಲ್ಲಿ ನಿತ್ಯ ಶುಚಿ-ರುಚಿ ಇಲ್ಲದ ಆಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ದಿಢೀರ್‌ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

Advertisement

ಗುರುವಾರ ಬೆಳಗ್ಗೆ ವಸತಿ ನಿಲಯದಲ್ಲಿ ಅವಲಕ್ಕಿ ವಗ್ಗರಣೆ ಚೆನ್ನಾಗಿ ಮಾಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿ ಹಾಗೂ ವಾರ್ಡನ್‌ ಜೊತೆ ವಾಗ್ವಾದಕ್ಕಿಳಿದರು. ನಂತರ ಅವಲಕ್ಕಿ ವಗ್ಗರಣೆ ಪಾತ್ರೆಯೊಂದಿಗೆ ಅನ್ನದಾನೇಶ್ವರ ನಗರದ ಪರಿಶಿಷ್ಟ ವರ್ಗ ಕಲ್ಯಾಣಾಧಿಕಾರಿಗಳ ಕಚೇರಿಗೆ ದೌಡಾಯಿಸಿದರು.

ಆ ವೇಳೆ ಅಧಿಕಾರಿ ವೀರಪ್ಪ ಛತ್ರದ ಅವರು ಬಂದಿರಲಿಲ್ಲ. ಆದರೆ ಪಿಎಸ್‌ಐ ತಿಮ್ಮಣ್ಣ ನಾಯಕ್‌ ಅವರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಮನವೊಲಿಸಿ ಪುನಃ ವಸತಿ ನಿಲಯಕ್ಕೆ ತೆರಳಲು ಸೂಚಿಸಿದರು.

ನಂತರ ಪರಿಶಿಷ್ಟ ವರ್ಗ ಕಲ್ಯಾಣಾಧಿಕಾರಿ ವೀರಪ್ಪ ಛತ್ರದ ಸಮ್ಮುಖದಲ್ಲಿ ವಸತಿ ನಿಲಯದ ಅಡುಗೆದಾರರಿಗೆ, ವಾರ್ಡನ್‌ ಕಾರ್ಯವೈಖರಿ ಸರಿಪಡಿಸಿಕೊಂಡು, ರುಚಿಕಟ್ಟಾದ ಗುಣಮಟ್ಟದ ಅಡುಗೆ ತಯಾರಿಸುವಂತೆ ಸೂಚ್ಯವಾಗಿ ಹೇಳಿದರು. ಇಂತಹ ಪ್ರಕರಣ ಪುನರಾವರ್ತನೆ ಆಗದಂತೆ ಎಚ್ಚರಿಸಿದರು. ಅಡುಗೆದಾರರಿಂದ ಅವಲಕ್ಕಿ ವಗ್ಗರಣೆ ತಯಾರಿಸಿ ವಿದ್ಯಾರ್ಥಿಗಳೊಟ್ಟಿಗೆ ಉಪಹಾರ ಸೇವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next