Advertisement

ಮದ್ಯದಂಗಡಿ ಪರವಾನಗಿ ರದ್ದತಿಗೆ ಒತ್ತಾಯ

02:53 PM Jul 19, 2019 | Suhan S |

ಹಾರೂಗೇರಿ: ಸ್ವಾಮಿ ವಿವೇಕಾನಂದ ನಗರಕ್ಕೆ ಹೊಂದಿಕೊಂಡಿರುವ ಮುಖ್ಯರಸ್ತೆಯಲ್ಲಿ ಮದ್ಯದಂಗಡಿ ಪ್ರಾರಂಭಿಸಲು ಅನುಮತಿ ನೀಡಬಾರದೆಂದು ಆಗ್ರಹಿಸಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಮುಖ್ಯಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.

Advertisement

ಸ್ವಾಮಿ ವಿವೇಕಾನಂದ ನಗರದಲ್ಲಿ ಶ್ರೀರಾಘವೇಂದ್ರಸ್ವಾಮಿ ದೇವಸ್ಥಾನ, ಮಾಡರ್ನ್ ಕಾಲೇಜು, ಮಕ್ಕಳು ಹಾಗೂ ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಿಗೆ ತೆರಳುವ ಪ್ರಮುಖ ರಸ್ತೆಯಾಗಿದೆ. ಈ ಭಾಗದ ಮಹಿಳೆಯರು ಪಟ್ಟಣದ ಮಾರುಕಟ್ಟೆ, ದೇವಸ್ಥಾನಗಳಿಗೆ ಸಂಚರಿಸಲು ಮದ್ಯದಂಗಡಿಯಿಂದ ತೊಂದರೆಯಾಗಲಿದೆ. ನಿರಂಜನ ಶಿವಪ್ಪ ಬಾಗೇವಾಡಿ ಕಟ್ಟಡದಲ್ಲಿ ಪ್ರಾರಂಭವಾಗುತ್ತಿರುವ ಬಾರ್‌ ಮತ್ತು ರೆಸ್ಟೋರೆಂಟ್ನಿಂದ ಮಹಿಳೆಯರು ಮತ್ತು ಮಕ್ಕಳು ಭಯಭೀತರಾಗಿದ್ದಾರೆ. ಪುರಸಭೆ ಹಾಗೂ ಮೇಲಧಿಕಾರಿಗಳು ಕೂಡಲೇ ಮದ್ಯದಂಗಡಿ ಪರವಾನಿಗೆಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದರು.

ಶ್ರೀರಾಮಸೇನಾ ವಿಭಾಗೀಯ ಪ್ರಮುಖ ಗೋಪಾಲ ನಾಯಿಕ ಮಾತನಾಡಿ, ರಾಜ್ಯ ಹೆದ್ದಾರಿಯಿಂದ ಕನಿಷ್ಠ ಅರ್ಧ ಕಿಮೀ ಅಂತರದಲ್ಲಿ ಮದ್ಯದಂಗಡಿಗಳಿಗೆ ಅನುಮತಿ ನೀಡಬೇಕೆಂದು ಕಾನೂನವಿದ್ದರೂ ಮುಖ್ಯರಸ್ತೆ ಪಕ್ಕದಲ್ಲೇ ಪರವಾನಿಗೆ ನೀಡಲಾಗುತ್ತಿದೆ. ಒಂದು ವೇಳೆ ಅನುಮತಿ ನೀಡಿ, ಮದ್ಯದಂಗಡಿ ಪ್ರಾರಂಭವಾದಲ್ಲಿ ಸಾರ್ವಜನಿಕರೆಲ್ಲ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯೆ ಲಲಿತಾ ಬದ್ನಿಕಾಯಿ, ಹವಶವ್ವ ಬದ್ನಿಕಾಯಿ, ಶಾಂತಾ ಆಲಗೂರ, ಸರಸ್ವತಿ ಶಿರಗಾಂವಕರ, ಸುರೇಖಾ ಹಿಪ್ಪರಗಿ, ಗಂಗವ್ವ ಸದಲಗಿ, ಸಿದ್ದವ್ವ ಯಲಶೆಟ್ಟಿ, ಬಾಳವ್ವ ಬಾಡಗಿ, ಶಿವಲೀಲಾ ಸಾಲಿಮಠ, ವೀಣಾ ಪಾಟೀಲ, ಕಸ್ತೂರಿ ಪತ್ತಾರ, ಸುಧಾ ದೇಶಪಾಂಡೆ, ಭೀಮು ಭಂಡಾರಿ, ಹಣಮಂತ ಯಲಶೆಟ್ಟಿ, ರಮೇಶ ನಾಟಿಕರ, ಶ್ರೀಕಾಂತ ದಟವಾಡ, ಸುರೇಶ ಶೇಡಬಾಳ, ಜೀವನ ಮಾನಕಾಪೂರೆ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next