Advertisement

ಹಗರಿಗೆ ಅಂತರ್ಜಲ ಜಲಾಶಯ ನಿರ್ಮಿಸಲು ಒತ್ತಾಯ

07:41 AM Feb 03, 2019 | Team Udayavani |

ಬಳ್ಳಾರಿ: ನಗರದ ರಾಘವ ಕಲಾಮಂದಿರದಲ್ಲಿ ರಾಜ್ಯ ರೈತ ಸಂಘದಿಂದ ಎರಡು ದಿನಗಳ ಕಾಲ ನಡೆದ ನಮ್ಮ ಭೂಮಿ ನಮ್ಮ ಹೋರಾಟ ಪುಸ್ತಕ ಬಿಡುಗಡೆ, ಲೇಖಕ- ಕಲಾವಿದರ ಸಂಯುಕ್ತ ಸಮಾವೇಶದ 2ನೇ ದಿನವಾದ ಶನಿವಾರ ರೈತರ ವಿವಿಧ ಸಮಸ್ಯೆಗಳ ಕುರಿತ ಸಭೆಯಲ್ಲಿ ಹಗರಿಯಲ್ಲಿ ಅಂತರ್ಜಲ ಬಳಕೆಗೆ ನೂತನ ಪದ್ಧತಿಯಲ್ಲಿ ಅಂತರ್ಜಲ ಆಣೆಕಟ್ಟು ನಿರ್ಮಿಸುವಂತೆ ಸರ್ಕಾರಕ್ಕೆ ಮತ್ತು ವಿಮ್ಸ್‌ನ್ನು ಮಾದರಿ ಆಸ್ಪತ್ರೆಯನ್ನಾಗಿ ಮಾಡುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಲು ನಿರ್ಣಯ ಕೈಗೊಳ್ಳಲಾಯಿತು.

Advertisement

ಹಗರಿಯಲ್ಲಿನ ಅಂತರ್ಜಲ ಬಳಕೆಗೆ 10 ಕೋಟಿ ರೂ. ವೆಚ್ಚದಲ್ಲಿ ನೂತನ ಪದ್ಧತಿಯ ಅಂತರ್ಜಲ ಆಣೆಕಟ್ಟು ನಿರ್ಮಾಣ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಯಿತು. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪಾಪಾÿ ನದಿಗೆ ನಿರ್ಮಾಣ ಮಾಡಿರುವ ಆಣೆಕಟ್ಟು ಮಾದರಿಯಲ್ಲಿ ಬರೀ 10 ಕೋಟಿ ರೂ. ವೆಚ್ಚದಲ್ಲಿ 58 ಕಿಮೀ ಉದ್ದದ ನದಿಗೆ ಆಣೆಕಟ್ಟು ಕಟ್ಟಿದರೆ 25 ಟಿಎಂಸಿ ನೀರು ದೊರೆಯಲಿದೆ. ಈಗಾಗಲೇ ಆಂಧ್ರಪ್ರದೇಶದಲ್ಲಿ ಅಂತರ್ಜಲ ಜಲಾಶಯ ನಿರ್ಮಿಸಿರುವ ಇಂಜಿನಿಯರ್‌ಗಳಲ್ಲಿ ಒಬ್ಬರಾದ ಇಂಜಿನಿಯರ್‌ ಪ್ರತಾಪ್‌ ಅವರು ಪ್ರೊಜೆಕ್ಟರ್‌ನಲ್ಲಿ ಪ್ರಜೆಂಟೇಷನ್‌ ಮೂಲಕ ಅಂತರ್ಜಲ ಜಲಾಶಯ ನಿರ್ಮಸುವ ಕುರಿತು ವಿವರಿಸಿದರು. ಇದನ್ನೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಜೊತೆಗೆ ವಿಮ್ಸ್‌ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆ ಮಾಡುವಂತ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ನಿರ್ಣಯ ಕೈಗೊಳ್ಳಲಾಯಿತು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಟಿ.ಜಿ.ವಿಠuಲ್‌, ಹಗರಿ ಉಳಿಸಲು ರೈತರು ಇನ್ನೊಂದು ಸುತ್ತಿನ ಉಗ್ರ ಹೋರಾಟಕ್ಕೆ ಅಣಿಯಾಗಬೇಕಿದೆ. ಹಗರಿ ಒಂದು ವಿಶೇಷ ಜಾಗವಾಗಿದೆ. ಇಲ್ಲಿ ನದಿ ನೀರು ಗುಪ್ತವಾಗಿ ಹರಿದು ಬರುತ್ತಿದೆ. ಇದರ ಮೇಲೆ ಇದೀಗ ಕೈಗಾರಿಕೋದ್ಯಮಿಗಳ ಕಣ್ಣು ಬಿದ್ದಿದೆ. ಇದನ್ನು ಉಳಿಸಿಕೊಳ್ಳಲು ನಾವೆಲ್ಲಾ ಒಂದಾಗಿ ಹೋರಾಟ ಮಾಡಬೇಕಾಗಿದೆ ಎಂದರು.

ಎಲ್ಲಿಯವರೆಗೆ ಬಹುರಾಷ್ಟ್ರೀಯ ಕಂಪನಿಗಳು ಇರುತ್ತವೆಯೋ ಅಲ್ಲಿಯವರೆಗೆ ಕೃಷಿ ಸುಭೀಕ್ಷವಾಗಿ ಇರಲು ಸಾಧ್ಯವಿಲ್ಲ. ಬಹುರಾಷ್ಟ್ರೀಯ ಕಂಪನಿಗಳು ಸದಾ ರೈತರ ಹೆಸರಲ್ಲಿ ತಾವು ಉದ್ದಾರ ಆಗುವ ದಾರಿ ಹುಡುಕುತ್ತಲೇ ಇರುತ್ತವೆ. ಇಂತಹ ಸಮಯದಲ್ಲಿ ರೈತರು ಸಂಘಟಿತರಾಗಬೇಕು. ಒಗಟ್ಟಿನಿಂದ ಹೋರಾಟದ ಹಾದಿ ತುಳಿಯಬೇಕಿದೆ ಎಂದರು. ರೈತ ಸಂಘದ ರಾಜ್ಯಾಧ್ಯಕ್ಷ ವಿ. ನಾರಾಯಣಸ್ವಾಮಿ, ಲಕ್ಷ್ಮಮ್ಮ ಚಾಗನೂರು ಅಧ್ಯಕ್ಷತೆ ವಹಿಸಿದ್ದರು.ರೈತ ಮುಖಂಡರಾದ ಬೆಳಗುರ್ಕಿ ಹುನುಮಗೌಡ, ಎಚ್.ಆದಿನಾರಾಯಣ ರೆಡ್ಡಿ, ಆರ್‌.ಮಾಧವ ರೆಡ್ಡಿ, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next