ದೇವನಹಳ್ಳಿ: ಜಿಲ್ಲೆಯಲ್ಲಿ ಪತ್ತೆಯಾಗಿದ್ದ 5 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಗುಣಮುಖವಾಗಿದ್ದು, ಹೊಸ ಪ್ರಕರಣಗಳು ಕಂಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರ, ಜಿಲ್ಲೆಯನ್ನು ಕೆಂಪು ವಲಯದಿಂದ ಹಸಿರು ವಲಯಕ್ಕೆ ತರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜಿಲ್ಲೆಯ ಹೊಸಕೋಟೆ ತಾಲೂಕಿನ ಬೈಲನರಸಾಪುರದಲ್ಲಿ 4 ಪ್ರಕರಣಗಳು ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಕೋಡಿಪಾಳ್ಯ ಗ್ರಾಮದಲ್ಲಿ ಒಂದು ಪ್ರಕರಣ ಕಾಣಿಸಿತ್ತು.
ಒಟ್ಟು 5 ಪ್ರಕರಣಗಳಲ್ಲಿ ಈಗಾಗಲೇ 5 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಹೀಗಿ ದ್ದರೂ ಬೆಂಗಳೂರಿಗೆ ಸಮೀಪ ಹಾಗೂ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಆಧಾರಿಸಿ, ಜಿಲ್ಲೆಯನ್ನು ಕೇಂದ್ರ ಸರ್ಕಾರ ಕೆಂಪು ವಲಯಕ್ಕೆ ಸೇರಿಸುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ 4 ತಾಲೂಕಿನ ಶಾಸಕರು ಜಿಲ್ಲಾಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಕೆಂಪು ವಲಯದಿಂದ ಹಸಿರು ವಲಯಕ್ಕೆ ಪರಿವರ್ತಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.
ಕೆಂಪು ವಲಯವಿರುವುದರಿಂದ ಅಂಗಡಿ ವ್ಯಾಪಾರ ಸ್ಥರಿಗೆ, ಬೀದಿ ವ್ಯಾಪಾರಿಗಳಿಗೆ, ನಾಗರಿಕರುಸೌಲಭ್ಯಗಳಿಂದ ವಂಚಿತ ರಾಗುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿ ಪ್ರಕಾರವಾಗಿಯೇ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಕೆಲವು ನಿಬಂಧನೆ ಪಾಲಿಸಿ ವ್ಯಾಪಾರ ವಹಿವಾಟು ನಡೆಸಲು ಆರ್ಥಿಕ ಸಂಕಷ್ಟ ಹಾಗೂ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಂಪು ವಲಯದ ದೇಶವನ್ನೇ ಅಧಿಕಾರಿಗಳು ಕಾರ್ಯಗತ ಮಾಡಿರುತ್ತಾರೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಪಾಸಿಟಿವ್ ಪ್ರಕರಣ ಇಲ್ಲದಿದ್ದರೂ ಏಕೆ ನಮ್ಮ ಜಿಲ್ಲೆಯನ್ನು ಕೆಂಪು ವಲಯಕ್ಕೆ ಸೇರಿಸಿ ಏಕೆ ಶಾಪ ಗ್ರಸ್ಥರನ್ನಾಗಿ ಮಾಡಿದ್ದೀರಿ? ಅವೈಜ್ಞಾನಿಕ ತೀರ್ಮಾನ ಕೂಡಲೇ ಕೈಬಿಡಬೇಕು. ಕೆಂಪು ವಲಯವಿದ್ದರೂ ಕ್ಷೇತ್ರದಲ್ಲಿ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ. ಸರ್ಕಾರದ ಗಮನಕ್ಕೆ ತಂದಿದ್ದಾರೆಯೋ ಇಲ್ಲವೋ ಎಂಬುವುದು ತಿಳಿಯುತ್ತಿಲ್ಲ ಎಂದು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರ ಜಿಲ್ಲೆಯನ್ನು ಕೆಂಪು ವಲಯಕ್ಕೆ ಸೇರಿಸಿರುವುದು ಖಂಡನೀಯ. ನಾಲ್ವರು ಶಾಸಕರಿಂದ ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
-ಎಲ್.ಎನ್.ನಾರಾಯಣಸ್ವಾಮಿ, ಶಾಸಕ
ಸಂವಾದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರ ಮುಖಾಂತರ ಮುಖ್ಯ ಕಾರ್ಯ ದರ್ಶಿಗೆ ಕೋವಿಡ್ 19 ಪಾಸಿಟಿವ್ ಪ್ರಕ ರಣ ಜಿಲ್ಲೆಯಲ್ಲಿಲ್ಲ ಎಂಬ ಮಾಹಿತಿ ನೀಡಲಾಗಿದೆ. ಅಲ್ಲದೇ, ಹಸಿರು ವಲಯವೆಂದು ಘೋಷಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಪಿ.ಎನ್,ರವೀಂದ್ರ, ಡೀಸಿ
* ಎಸ್.ಮಹೇಶ್