Advertisement

ಶ್ರೀಸಿಮೆಂಟ್‌ ಅಧಿಕಾರಿಗಳನ್ನು ಬಂಧಿಸಲು ಕರವೇ ಒತ್ತಾಯ

11:16 AM Dec 16, 2018 | Team Udayavani |

 ಸೇಡಂ: ಶ್ರೀಸಿಮೆಂಟ್‌ ಕಾರ್ಖಾನೆಯಲ್ಲಿ ಶುಕ್ರವಾರ ನಡೆದ ಬೆಲ್ಟ್ ದುರಂತಕ್ಕೆ ಕಾರಣರಾದ ಕಾರ್ಖಾನೆ ಅಧಿಕಾರಿಗಳನ್ನು ಬಂಧಿಸಬೇಕು ಮತ್ತು ಗಾಯಗೊಂಡವರ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರವೇ (ನಾರಾಯಣಗೌಡ) ಕಾರ್ಯಕರ್ತರು ಕಾರ್ಖಾನೆ ಗೇಟ್‌ ಬಂದ್‌ ಮಾಡಿ ಪ್ರತಿಭಟಿಸಿದರು.

Advertisement

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಮಹೇಶ ಕಾಶಿ ಕಾರ್ಖಾನೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಘಟನೆ ಸಂಭವಿಸಿದ್ದು, ಪ್ರತಿ ಬಾರಿಯೂ ಕಾರ್ಮಿಕರೇ ಬಲಿಯಾಗುತ್ತಿದ್ದಾರೆ. ಅವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಕಾರ್ಮಿಕರು ಮೃತಪಟ್ಟರೂ ಕಿಂಚಿತ್ತೂ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಿಕೊಳ್ಳದೇ ಮೀನಾಮೇಷ ಎಣಿಸಲಾಗುತ್ತಿದೆ ಎಂದು ಆಪಾದಿಸಿದರು.

ಕೂಡಲೇ ಘಟನೆಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಎಂಟು ದಿನಗಳ ಒಳಗಾಗಿ ಕಾರ್ಖಾನೆ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು. ನಂತರ ಸ್ಥಳದಲ್ಲೇ ಇದ್ದ ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಸುಶೀಲಕುಮಾರ ಹಾಗೂ ಕಾರ್ಖಾನೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ತಾಲೂಕು ಅಧ್ಯಕ್ಷ ಅಂಬರೀಶ ಊಡಗಿ, ವಿಜಯಕುಮಾರ ಕುಲಕರ್ಣಿ, ಇಲಿಯಾಸ್‌ ಪಟೇಲ, ಅನೀಲಕುಮಾರ ಹಳಿಮನಿ, ಸತೀಶ ದುದನಿ, ಶಿವಪ್ಪ ಜುಲ್ಪಿ, ಜನಾರ್ಧನರೆಡ್ಡಿ ತುಳೇರ್‌, ರವಿ ರಾಠೊಡ, ಆನಂದಕುಮಾರ, ಮಲ್ಲಿಕಾರ್ಜುನ, ಶಿವಾಜಿ, ಹಣಮಂತ, ಸಂತೋಷ ನಾಮವಾರ, ರಾಹುಲ ಪಾಟೀಲ ದುದನಿ, ಸಂತೋಷ ಕುರಕುಂಟಾ, ಮಹ್ಮದ ತೈಬರ್‌, ಮಹಾಂತೇಶ ಊಡಗಿ, ರಾಘವೇಂದ್ರ ಕುರಕುಂಟಾ, ಕೈಲಾಸಲಿಂಗ ಪಾಟೀಲ, ಶರಣು ಚಂದಾಪುರ ಇನ್ನಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next