Advertisement

ಅರ್ಹ ಫಲಾನುಭವಿಗಳಿಗೆ ಮನೆ ಹಂಚಲು ಒತ್ತಾಯ

10:56 AM Jun 28, 2019 | Suhan S |

ಹೊಳೆಆಲೂರ: ನವ ಗ್ರಾಮದಲ್ಲಿ ನಿರ್ಮಿಸಿದ ಮನೆಗಳನ್ನು ಅರ್ಹ ಫಲಾನುಭವಿಗಳನ್ನು ಹಂಚಿಕೆ ಮಾಡಬೇಕು ಹಾಗೂ ಮೂಲ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಗಾಡಗೋಳಿ ಹಾಗೂ ಹೊಳೆಮಣ್ಣೂರ ನವ ಗ್ರಾಮದ ನಿವಾಸಿಗಳು ಗುರುವಾರ ಹೊಳೆಮಣ್ಣೂರ ಗ್ರಾಮ ಪಂಚಾಯತ್‌ ಮುಂದೆ ಪ್ರತಿಭಟಿಸಿದರು.

Advertisement

2009ರ ಕುಂಭದ್ರೋಣ ಮಳೆಗೆ ನಿರ್ಗತಿಕರಾಗಿ 10 ವರ್ಷ ಕಳೆದರೂ ಸರಕಾರ ನವ ಗ್ರಾಮದಲ್ಲಿ ಅರ್ಹ ಪಲಾನುಭವಿಗೆ ನಿರ್ಮಿಸಿದ ಮನೆಗಳು ಏಕೆ ಹಂಚಿಕೆ ಮಾಡುತ್ತಿಲ್ಲ? ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದರೂ ನಮ್ಮ ಗೋಳನ್ನು ಯಾರು ಕೇಳುತ್ತಿಲ್ಲ. ಮನೆ ಹಂಚಿಕೆ ಕಾರ್ಯ ಹಾಗೂ ನಮ್ಮ ಮೂಲಭೂತ ಸೌಲಭ್ಯಗಳಿಗೆ ಸ್ಪಷ್ಟ ಭರವಸೆ ಸಿಗುವವರೆಗೆ ಈ ಜಾಗದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರು ಎಚ್ಚರಿಸಿದರು.

ನೀರು, ರಸ್ತೆ, ವಿದ್ಯುತ್‌, ಅಂಗನವಾಡಿ, ಪ್ರಾಥಮಿಕ ಶಾಲೆ ಸೇರಿದಂತೆ ಸಕಲ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಜೀವನ ಸಾಗಿಸುತ್ತಿದ್ದೇವೆ. ನಾವು ವಾಸಿಸುವ ಮನೆಯ ಸುತ್ತ ಮುಳ್ಳು-ಕಂಟಿಗಳು ಬೆಳೆದು ಕ್ರಿಮಿ ಕೀಟಗಳ ಭಯದಲ್ಲಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಗ್ರಾಮ ಪಂಚಾಯತ್‌ ಅಧಿಕಾರಿಗಳಿಗೆ ಅಲವತ್ತುಕೊಂಡರು ಯಾರೂ ಕ್ಯಾರೆ ಎನ್ನುತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನೆ ಹಂಚಿಕೆಯಾಗದಿರುವುದಕ್ಕೆ ರಾಜಕೀಯ ಸಂಚು ಇದ್ದು, ಬಡವರು ಬಲಿ ಪಶುರಾಗುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಹಶೀಲ್ದಾರ್‌ ಶರಣಮ್ಮ ಕಾರಿ ಹಾಗೂ ಪಿ.ಎಸ್‌.ಐ. ಎಲ್.ಕೆ. ಜೋಲಕಟ್ಟಿ ಅವರು ವರು ಫಲಾನುಭವಿಗಳು ಹಾಗೂ ಪಿಡಿಒ ಅವರೂಂದಿಗೆ ಸಮಸ್ಯೆ ಕುರಿತು ಚರ್ಚಿಸಿದರು.

Advertisement

ಫಲಾನುಭವಿಗಳ ಭಿನ್ನಾಭಿಪ್ರಾಯದಿಂದ ಹಂಚಿಕೆ ಕಾರ್ಯ ನನೆಗುದಿಗೆ ಬಿದ್ದಿದೆ. ಆದಷ್ಟು ಶೀಘ್ರ ಪ್ರಾಮಾಣಿಕವಾಗಿ ಈ ಸಮಸ್ಯೆ ಬಗೆ ಹರಿಸಲಾಗುವುದು. ನಿಯಮಿತವಾಗಿ ಕುಡಿಯುವ ನೀರಿನ ಪೂರೈಕೆ ಹಾಗೂ ಮುಳ್ಳು-ಕಂಟಿ ತಕ್ಷಣ ಸ್ವಚ್ಛಗೊಳಿಸಲಾಗುವುದು. ಶಾಲಾ ಆರಂಭಕ್ಕೆ ಮಕ್ಕಳ ಸಂಖ್ಯೆ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿದ್ದು, ಆದಷ್ಟು ಬೇಗ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರವೀಣಕುಮಾರ ತಳವಾರ, ಮೌಲಾಸಾಬ ನದಾಫ, ಪಕೀರಪ್ಪ ತಳವಾರ, ವಿಜಯಲಕ್ಷಿ ್ಮೕ ತಳವಾರ, ನಾಗಮ್ಮ ಬೀಳಗಿ, ಮಂಜುಳಾ ಹಿರೇಗೌಡ್ರ, ಬಸವರಾಜ ತಳವಾರ, ಬೇಗಂ ನದಾಫ, ಚಿದಾನಂದ ತಳವರ, ಸುವರ್ಣವ್ವ ಚಲವಾದಿ, ಅಕ್ಕಮ್ಮ ಪೋಲಿ ಸ ಪಾಟೀಲ, ಶೈಲಾ ಭರಮಗೌಡ್ರ, ಕಾಳಮ್ಮ ಬಡಿಗೇರ, ಸುಮ್ಮಕ್ಕ ಬಡಿಗೇರ, ಹನಮಂತಪ್ಪ ತಳವಾರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next