Advertisement

ಜಾಮೀನು ರಹಿತ ಸಾಲಕ್ಕೆ ಒತ್ತಾಯ

12:44 PM Jul 07, 2019 | Team Udayavani |

ಮಂಡ್ಯ: ಭಾರತಿಯ ರಿಸರ್ವ್‌ ಬ್ಯಾಂಕ್‌ ನಿರ್ದೇಶನದಂತೆ ಗ್ರಾಮಿಣ ಪ್ರದೇಶದ ಜನರಿಗೆ ಸ್ವಂತ ಉದ್ದಿಮೆ ಪ್ರಾರಂಭಿಸಲು 1 ಲಕ್ಷ ರೂ.ವರೆಗೆ ಜಾಮೀನು ರಹಿತ ಸಾಲ ನೀಡಬೇಕು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ನಗರದ ಬ್ಯಾಂಕ್‌ ಆಫ್ ಇಂಡಿಯಾ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

Advertisement

ದೇಶದಲ್ಲಿ ಬಡವರ್ಗದ ಯುವಜನತೆ ಹಾಗೂ ಮಹಿಳೆಯರಿಗೆ ಹೈನುಗಾರಿಕೆ, ಕುರಿ ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆ ಮೂಲಕ ಸ್ವಂತ ಉದ್ದಿಮೆ ಮಾಡಬಹುದು. ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ವಂತ ಉದ್ದಿಮೆ ಪ್ರಾರಂಭಿಸಲು ಅರ್ಹರಿಗೆ ಜಾಮೀನು ರಹಿತವಾಗಿ 1 ಲಕ್ಷ ರೂ.ಗಳವರೆಗೆ ಸಾಲ ನೀಡುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ಆದರೂ ಬ್ಯಾಂಕುಗಳು ಅರ್ಜಿ ಸಲ್ಲಿಸಿದ ಅರ್ಹ ಸಾರ್ವಜನಿಕರಿಗೆ ಸಾಲ ನೀಡದೆ ಆರ್‌ಬಿಐ ನಿರ್ದೇಶನವನ್ನು ಗಾಳಿಗೆ ತೂರುತ್ತಿವೆ. ಈ ಮೂಲಕ ಯುವಜನರು ಹಾಗೂ ಬಡಜನರನ್ನು ಬಡವರಾಗಿಯೇ ಸಾಯುವಂತೆ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಬೀರಗೌಡನಹಳ್ಳಿ ಕೃಷಿ ಕಾರ್ಮಿಕರು ಆರ್ಥಿಕವಾಗಿ ಹಿಂದುಳಿದಿದ್ದು, ಸರ್ಕಾರದ ಸೌಲಭ್ಯ ಸಿಗದೆ ವಂಚಿತರಾಗಿದ್ದಾರೆ. ತಾಲೂಕಿನ ವಿವಿಧ ಬ್ಯಾಂಕ್‌ಗಳಲ್ಲಿ ಸ್ವಂತ ಉದ್ದಿಮೆ ಸಾಲ ನೀಡುವಂತೆ ಅರ್ಜಿ ಸಲ್ಲಿಸಿದ್ದರೂ, ಜಾಮೀನು ರಹಿತವಾಗಿ ಯಾವುದೇ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಕೂಡಲೆ ಸಾಲಕ್ಕೆ ಅರ್ಜಿ ಸಲ್ಲಿಸಿದ ಅರ್ಹ ಫ‌ಲಾನುಭವಿಗಳಿಗೆ ಸಾಲ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಹನುಮೇಶ್‌, ಮುಖಂಡರಾದ ನಾಗರಾಜು, ರಾಜು, ತಿಮ್ಮೇಗೌಡ, ಅವಿನಾಶ್‌, ರೂಪ, ಸವಿತಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next