Advertisement

ಐಪಿಎಲ್‌ ಫೈನಲ್‌ಗ‌ೂ ಮುನ್ನ ಇನ್‌ಸೈಡರ್‌ ಫ‌ಲಿತಾಂಶ!

11:38 AM May 24, 2017 | |

ಹೊಸದಿಲ್ಲಿ: ರವಿವಾರ ಮುಕ್ತಾಯವಾದ ಐಪಿಎಲ್‌ ಅಂತಿಮ ಪಂದ್ಯದ ಫ‌ಲಿತಾಂಶ ಮೊದಲೇ ಫಿಕ್ಸ್‌ ಆಗಿತ್ತೇ? ಇಂಥದೊಂದು ಅನುಮಾನಕ್ಕೆ ಕಾರಣವಾಗು ವಂತಹ ಸರಣಿ ಟ್ವೀಟ್‌ಗಳು ಬೆಳಕಿಗೆ ಬಂದಿವೆ.

Advertisement

ಆದರೆ ಸ್ವತಃ ಟ್ವೀಟ್‌ ಮಾಡಿದ ವ್ಯಕ್ತಿಯೇ ಫಿಕ್ಸಿಂಗ್‌ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಕ್ರಿಕೆಟ್‌ ಇನ್‌ಸೈಡರ್‌ ಎಂಬ ಟ್ವೀಟ್‌ ಖಾತೆಯಿಂದ ರವಿವಾರ ಮುಂಜಾನೆಯೇ ಪಂದ್ಯದ ಫ‌ಲಿತಾಂಶಗಳನ್ನು ಮೊದಲೇ ಊಹಿಸಿ ಟ್ವೀಟ್‌ಗಳನ್ನು ಮಾಡಲಾಗಿತ್ತು. ಆತ ಮಾಡಿರುವ ಅಷ್ಟೂ ಟ್ವೀಟ್‌ಗಳು ಸತ್ಯವಾಗಿರುವುದು ಅಚ್ಚರಿಯಾಗಿದೆ.

ಈ ಬಗ್ಗೆ ಕ್ರಿಕೆಟ್‌ ಇನ್‌ಸೈಡರ್‌ ಖಾತೆಯಿಂದ ಬಂದ ಸ್ಪಷ್ಟನೆ ಹೀಗಿದೆ: “ನಾನು ಕೇವಲ ಫ‌ಲಿತಾಂಶದ ಊಹೆ ಮಾಡಿದ್ದೇ ನಷ್ಟೆ. ಅದು ಸತ್ಯವಾಗಿದೆ. ಇದಕ್ಕೆ ಅದೃಷ್ಟವೇ ಕಾರಣ ಹೊರತು ಮತ್ತೇನಿಲ್ಲ. ಪಂದ್ಯ ಫಿಕ್ಸ್‌ ಆಗಿದೆ ಎಂಬುದೆಲ್ಲ ಸುಳ್ಳು. ಮುಂಬರುವ ಚಾಂಪಿಯನ್ಸ್‌ ಟ್ರೋಫಿಗೂ ಈ ಊಹೆಗಳನ್ನು ಮುಂದುರಿಸಲಿದ್ದೇನೆ’.

ಆದರೆ 2013ರ ಐಪಿಎಲ್‌ ಹಗರಣದ ಅನಂತರ ಜನರು ಪಂದ್ಯಗಳನ್ನು ಫಿಕ್ಸಿಂಗ್‌ ದೃಷ್ಟಿಯಿಂದ ನೋಡುತ್ತಿರುವು ದರಿಂದ ಕ್ರಿಕೆಟ್‌ ಇನ್‌ಸೈಡರ್‌ ಸರಣಿ ಟ್ವೀಟ್‌ಗಳು ಭಾರೀ ಸುದ್ದಿ ಮಾಡಿವೆ. ರವಿವಾರ ರಾತ್ರಿ 8 ಗಂಟೆಯಿಂದ ಅಂತಿಮ ಪಂದ್ಯ ಶುರುವಾಗಿದೆ. ಅಂದು ಬೆಳಗ್ಗೆ 3.46ರಿಂದ 4.17 ನಿಮಿಷದ ಅವಧಿಯಲ್ಲಿ ಟ್ವೀಟ್‌ಗಳು ಪ್ರಕಟವಾಗಿವೆ. 

ಇವು ಇನ್‌ಸೈಡರ್‌ ಟ್ವೀಟ್‌ಗಳು… 
1.ಟಾಸ್‌ ಗೆಲುವು ಮುಖ್ಯವಲ್ಲ, ಮೊದಲು ಬೌಲಿಂಗ್‌ ಮಾಡುವುದು ಪುಣೆ. ಒಂದು ವೇಳೆ ಪುಣೆ ಟಾಸ್‌ ಗೆದ್ದರೆ ಬೌಲಿಂಗ್‌, ಮುಂಬೈ ಟಾಸ್‌ ಗೆದ್ದರೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳುತ್ತದೆ. 2. ಮುಂಬೈ ಮೊದಲು ಬ್ಯಾಟಿಂಗ್‌ ಮಾಡಿ 120ರಿಂದ 130 ರನ್‌ ಗಳಿಸಲಿದೆ, 3. ಕೊನೆಯ ಓವರ್‌ನಲ್ಲಿ ಮುಂಬೈ ಟ್ರೋಫಿ ಗೆಲ್ಲಲಿದೆ, 4. ಸ್ಮಿತ್‌ ಅತಿ ಹೆಚ್ಚು  ರನ್‌ ಗಳಿಸುತ್ತಾರೆ, 5. ಪೊಲಾರ್ಡ್‌ ಒಂದೇ ಸಿಕ್ಸರ್‌ ಬಾರಿಸುತ್ತಾರೆ, 6. ಪಂದ್ಯದಲ್ಲಿ ಯಾವುದೇ ನೋಬಾಲ್‌ಗ‌ಳು ದಾಖಲಾಗುವುದಿಲ್ಲ, 7. ಪಾರ್ಥಿವ್‌ 10 ರನ್‌ ಒಳಗೆ ಔಟಾಗುತ್ತಾರೆ, 8. ತ್ರಿಪಾಠಿ ಕೂಡ 10 ರನ್‌ ಒಳಗೆ ಔಟಾಗುತ್ತಾರೆ. ಇವೆಲ್ಲವೂ ನಿಜವಾಗಿವೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next