Advertisement

ಅಮೆಜಾನ್‌ನ ವಿಶ್ವದಲ್ಲೇ ಅತಿ ದೊಡ್ಡ ಕಚೇರಿ ಹೇಗಿದೆ ಗೊತ್ತಾ?

10:33 AM Sep 20, 2019 | Sriram |

ಹೈದಾರಬಾದ್‌: ಕೆಲಸಗಾರರಿಗೆ ಕೆಲಸ ಮಾಡುವ ಸ್ಥಳ ಅತಿ ಮುಖ್ಯ. ಅಲ್ಲಿ ಪೂರಕ ವಾತಾವರಣ ಸೃಷ್ಟಿಸುವುದು ಕಂಪೆನಿ ಕೆಲಸ. ಈ ಉದ್ದೇಶ ಇಟ್ಟುಕೊಂಡು ಹೈದರಾಬಾದ್‌ನಲ್ಲಿ ಆನ್‌ಲೈನ್‌ ದೈತ್ಯ ಅಮೆಜಾನ್‌ ತನ್ನ ಕಚೇರಿ ನಿರ್ಮಾಣ ಮಾಡಿದ್ದು, ವಿಶ್ವದಲ್ಲೇ ಅತಿ ದೊಡ್ಡ ಕಚೇರಿ ಇದಾಗಿದೆ. ಅಲ್ಲಿನ ವಿಶೇಷಗಳು ಹಲವಾರಿವೆ.

Advertisement

ಸವಿಸ್ತಾರವಾದ ಕಟ್ಟಡ
ಹೈದಾರಬಾದ್‌ನ ಬಿಸಿನೆಸ್‌ ಹಬ್‌ ಆಗಿರುವ ಗಚಿಬೌಲಿ ಪ್ರದೇಶದಲ್ಲಿ ತಲೆ ಎತ್ತಿದ ಅಮೆಜಾನ್‌ 15 ಸಾವಿರ ಜನರಿಗೆ ಆಶ್ರಯ ನೀಡುವಷ್ಟು ದೊಡ್ಡ ಕಟ್ಟಡ ಹೊಂದಿದೆ. ಸುಮಾರು 9.5 ಎಕರೆ ಪ್ರದೇಶದಲ್ಲಿ ಇದು ವ್ಯಾಪಿಸಿದೆ.


ಕಲೆ ಸಂಸ್ಕೃತಿಗೆ ನೆಲೆ
ಅಮೆಜಾನ್‌ ಕಾರ್ಯಾಲಯದಲಲಿ 12 ಮಹಡಿಗಳಿದ್ದು, ಪ್ರತಿಯೊಂದರಲ್ಲಿಯೂ ಭಾರತದ ಆಚಾರ-ವಿಚಾರಗಳನ್ನು ಸಾರುವ, ಕಲೆ-ಸಂಸ್ಕೃತಿ ನೆಲೆಯನ್ನು ಪ್ರತಿಬಿಂಬಿಸುವ ಚಿತ್ತಾರಗಳನ್ನು ಬಿಡಲಾಗಿದೆ.

ಆಟ ಆಡಬಹುದು!
ಕಚೇರಿ ಹೊರೆ, ಖಾಸಗಿ ಬದುಕಿನ ಹೊರೆ ಸಿಬಂದಿಯನ್ನು ಕಾಡಬಹುದು. ಇದರಿಂದ ಅವರು ಹೊರಬರುವಂತೆ ಂಆಡಲು ಕಚೇರಿ ಕಟ್ಟಡದ ಒಳಗಡೆಯೇ, ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಶ್ರಾಂತಿ ಬೇಕೆನಿಸಿದಾಗ ವಿಶ್ರಾಂತಿ ಪಡೆದುಕೊಳ್ಳಬಹುದು. ಆಟ ಆಡಬೇಕು ಅನ್ನಿಸಿದಾಗ ಕ್ರಿಕೆಟ್‌ ಹಾಗೂ ಬ್ಯಾಡ್ಮಿಂಟನ್‌, ಒಳಾಂಗಣ ಕ್ರೀಡೆಗಳು, ಯೋಗ ಮಾಡಲೂ ಅವಕಾಶವಿದೆ.

ಮನೆ ರುಚಿಯ ಖಾದ್ಯಗಳು
ಅಮೆಜಾನ್‌ ಕಂಪನಿಯಲ್ಲಿ ದೇಶದ ನಾನಾ ಭಾಗದ ಜನರು ಕಾರ್ಯನಿರ್ವಹಿಸುತ್ತಿದ್ದು, ಅವರ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ವಿಭಿನ್ನವಾಗಿರುತ್ತದೆ. ಈ ಹಿನ್ನಲೆಯಲ್ಲಿ ಕಂಪನಿ ಕೆಲಸಗಾರರ ಮನದಿಂಗಿತ ಅರಿತು, ವಿವಿಧ ಪ್ರದೇಶದ ಖಾದ್ಯಗಳನ್ನು ಮನೆ ರುಚಿಯಲ್ಲಿ ಆಹಾರ ಕೇಂದ್ರಗಳಲ್ಲಿ ಸಿಗುವಂತೆ ಮಾಡಿದೆ.

ಗೋಡೆಯಲ್ಲಿ ಸಾಧಕರ ಮಾತುಗಳು
ಕಂಪನಿ ಒಳಗೆ ಕಾಲಿಡುತ್ತಿದಂತೆ ಸಾಧಕರ ಯಶೋಗಾಥೆಯನ್ನು ಸಾರುವ ಸ್ಫೂರ್ತಿದಾಯಕ ಮಾತುಗಳನ್ನು ಬರೆಯಲಾಗಿದೆ. ಗ್ರಾಹಕರ ಸಂತೃಪ್ತಿ ನಿನ್ನ ಅಂತಿಮ ಗುರಿಯಾಗಿರಲಿ, ತ್ವರಿತವಾಗಿ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ನಿನ್ನದಾಗಲಿ, ಏನೇ ಎದುರಾದರೂ ದಿಟ್ಟಿಸಿ ನಿಲ್ಲುವೇ ಅನ್ನುವ ಪ್ರವೃತ್ತಿ ಬೆಳೆಯಲಿ ಇತ್ಯಾದಿ ಮಾತುಗಳು ಗೋಡೆಯಲ್ಲಿದ್ದು ಸಿಬಂದಿಯ ಕಣ್ಣಿಗೆ ಬೀಳುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next