Advertisement

ಕೀಟಗಳ ಮಿಲನೋತ್ಸವ

10:15 AM Jul 14, 2019 | Vishnu Das |

ಮಿಲನ ಕ್ರಿಯೆ ವೇಳೆ ಕೀಟಗಳು ತೀರಾ ನಿಶ್ಶಬ್ದತೆ ಬಯಸುತ್ತವೆ. ಇದರ ಫೋಟೋಗ್ರಫಿ ಅಷ್ಟು ಸುಲಭವೂ ಅಲ್ಲ. ನಮ್ಮ ಹೆಜ್ಜೆಯ ಸಪ್ಪಳ, ಅವುಗಳ ಗಮನಕ್ಕೆ ಬಂದರೂ, ಪರಸ್ಪರ ಬೇರ್ಪಡುತ್ತವೆ…

Advertisement

ಪ್ರಕೃತಿಯ ಅದ್ಭುತಗಳಲ್ಲಿ ಮಳೆಯ ಕಾಣ್ಕೆ ಅಪಾರ. ನಿಸರ್ಗದ ಗೂಡೊ ಳಗೆ ಒಂದೊಂದೇ ವಿಸ್ಮಯಗಳು ಘಟಿಸುವುದು ಕೂಡ ಇದೇ ಸಂದರ್ಭದಲ್ಲಿಯೇ. ಅವುಗಳಲ್ಲಿ ಕೀಟಗಳ ಸಂತಾನೋತ್ಪತ್ತಿ ಕ್ರಿಯೆಯೂ ಒಂದು. ಕೀಟಗಳ ಮಿಲನೋತ್ಸವ ನಿಸ ರ್ಗದ ಒಂದು ಸುಂದರ ಪ್ರಕ್ರಿ ಯೆ.

ಗಿಡಮರಗಳ ಸಂದಿಗೊಂದಿಯಲ್ಲಿ ಇರುವ ಪಶುಪಕ್ಷಿ, ಕ್ರಿಮಿಕೀಟಗಳಲ್ಲಿ ಅತ್ಯಂತ ವೇಗದ, ವಿಶಿಷ್ಟ ಚಟುವಟಿಕೆಗಳು ನಮ್ಮ ಗಮನಕ್ಕೆ ಬಾರದೇ ನಡೆದು ಹೋಗಿರುತ್ತವೆ. ಕೀಟಗಳ ಆಕಾರ, ಬಣ್ಣ, ಹಾರಾಟ ಎಲ್ಲವೂ ವಿಚಿತ್ರ. ಕೀಟಗಳ ಅಂದ- ಚೆಂದ ಹೇಗೆ ಭಿನ್ನವಾಗಿರುತ್ತವೆಯೋ ಅವುಗಳ ಮಿಲನ ಕ್ರಿಯೆಯೂ ವೈವಿಧ್ಯಮಯವೇ.

Advertisement

ಮಿಲನೋತ್ಸವ ಸೆರೆಹಿಡಿಯುವ ಫೋಟೋಗ್ರಾಫ‌ರ್‌ಗೆ ಒಂದು ಸೂಕ್ಷ್ಮತೆ ಇರ ಬೇಕು. ಇದ ನ್ನೆಲ್ಲ ಅರಿತೇ, ನಾನು ಆ ದೃಶ್ಯದ ಸೆರೆಗೆ ಹೊರಟಿದ್ದೆ. ಕಣ್ಣಾರೆ “ಫ್ರೇಮ್‌ ಟು ಫ್ರೇಮ್‌’ ಸೆರೆಹಿಡಿದ ಆ ಸಾಹಸವೇ ಒಂದು ರೋಮಾಂಚ ನ. ಕೀಟಗಳು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತವೆ. ಅದ ರಲ್ಲೂ ಮಿಲನ ಕ್ರಿಯೆ ವೇಳೆ ಇವು ತೀರಾ ನಿಶ್ಶಬ್ದತೆ ಬಯಸುತ್ತ ವೆ. ಇದರ ಫೋಟೋಗ್ರಫಿ ಅಷ್ಟು ಸುಲಭವೂ ಅಲ್ಲ. ನಮ್ಮ ಹೆಜ್ಜೆಯ ಸಪ್ಪಳ, ಅವುಗಳ ಗಮನಕ್ಕೆ ಬಂದರೂ, ಪರಸ್ಪರ ಬೇರ್ಪಡುತ್ತವೆ.
ದರೋಡೆ ನೊಣ (ರಾಬರ್‌ ಫ್ಲೈ), ಜೀರಂಗಿ (ಗ್ರೀನ್‌ ಜ್ಯೂವೆಲ್‌ ಬಗ್‌), ಕೆಂಪು ಹತ್ತಿ ತಿಗಣೆ (ರೆಡ್‌ ಕಾಟನ್‌ ಬಗ್‌), ಡ್ರಾಗನ್‌ ಫ್ಲೈ, ಹೆಲಿಕಾಪ್ಟರ್‌ ಚಿಟ್ಟೆ (ಗೋಲ್ಡನ್‌ ಡಾರrಲೆಟ್‌ ಡಮೆಲ್‌ ಫ್ಲೈ), ಸ್ಟ್ರಿಂಕ್‌ ಬಗ್‌, ಬೂದು ಮೂತಿ ಹುಳು (ಆಶ್‌ ವ್ಹೀಲ್‌), ಟೈಗರ್‌ ಮೋತ್ಸ , ನಾಯಿ ಜೀರಂಗಿ, ಪತಂಗಗಳು- ಹೀಗೆ ನೂರಾರು ಜಾತಿಯ ಕೀಟಗಳ ಮಿಲನೋತ್ಸವ ಈ ಮಳೆಗಾಲದ ಸಮಯದಲ್ಲಿ ಬಹು ಸುಂದರವಾಗಿರುತ್ತವೆ. ಇಂಥ ಸಾವಿರಾರು ಜೀವ ಸಂಕುಲಗಳನ್ನು ರಾಣೆಬೆನ್ನೂರು ಅಭಯಾರಣ್ಯವು ತನ್ನ ಒಡಲಲ್ಲಿ ಇಟ್ಟುಕೊಂಡು ಸಂಭ್ರಮಿಸುತ್ತಿದೆ.

ಮಿಲನ ಕ್ರಿಯೆಯಲ್ಲೂ ಒಂದು ಶಿಸ್ತು
ಸಂತಾನೋತ್ಪತ್ತಿ ಎನ್ನುವುದು ಒಂದು ಸಂಕೀರ್ಣ ಪ್ರಕ್ರಿಯೆ. ಅದಕ್ಕಾಗಿ ಕೀಟ ಗಳು ವಿಶಿಷ್ಟ ತಯಾರಿ ನಡೆ ಸು ತ್ತವೆ. ಮೊದಲು ಸೂಕ್ತ ಸ್ಥಳ ಗುರುತಿಸಿಕೊಳ್ಳುತ್ತವೆ. ಪ್ರೌಢಾವಸ್ಥೆಗೆ ಬಂದ ಗಂಡು ಕೀಟಗಳು, ಪ್ರೌಢಾವಸ್ಥೆಗೆ ಬಂದ ಹೆಣ್ಣನ್ನು ಹುಡುಕಿ ಮಿಲನಕ್ಕೆ ಕಾತರಿಸುತ್ತವೆ. ಹೆಣ್ಣನ್ನು ಆಕರ್ಷಣೆ ಮಾಡಲು ಕೆಲವು ಕೀಟಗಳು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಸಾಮಾನ್ಯವಾಗಿ ಕೀಟಗಳು ಆಂತರಿಕ ಗರ್ಭಧಾರಣೆ ನಡೆಸುತ್ತವೆ. ಅಂದರೆ, ಗಂಡು ತನ್ನ ಅಂಗವನ್ನು ಹೆಣ್ಣಿನ ಜನನಾಂಗದಲ್ಲಿ ಸೇರಿಸಿ ವೀರ್ಯವನ್ನು ಸುರಿಸುತ್ತವೆ. ಮಳೆಗಾಲ ಮುಗಿವವರೆಗೂ ಇವುಗಳ ಸಂತಾನೋತ್ಪತ್ತಿ ಕಾಲ. ಕೀಟಗಳು ಕೆಲವೇ ವರ್ಷಗಳು, ಕೆಲವು ತಿಂಗಳು, ದಿನಗಳು ಕಾಲ ಮಾತ್ರ ಬದುಕುತ್ತವೆ.

ಚಿತ್ರ-ಲೇಖನ: ನಾಮದೇವ ಕಾಗದಗಾರ

Advertisement

Udayavani is now on Telegram. Click here to join our channel and stay updated with the latest news.

Next