Advertisement

ಶಾಸನ ಸಾಹಿತ್ಯ ಸಿರಿ ಸಾಹಿತ್ಯ ಅಕಾಡೆಮಿ ಹೆಜ್ಜೆ

10:54 AM Mar 16, 2021 | Team Udayavani |

ಬೆಂಗಳೂರು: ಶಾಸನಗಳಲ್ಲಿರುವ ಗದ್ಯ ರೂಪದ ಸಾಹಿತ್ಯವನ್ನು ಸಾಹಿತ್ಯಾಸಕ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹೆಜ್ಜೆಯಿರಿಸಿದೆ.

Advertisement

ಶಾಸನ ಸಾಹಿತ್ಯದ ಕುರಿತ “ಶಾಸನ ಸಾಹಿತ್ಯ ಸಿರಿ’ಎಂಬ ಬೃಹತ್‌ ಸಂಪುಟಗಳನ್ನು ಪ್ರಕಟಿಸುವನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ಇದರಿಂದಾಗಿ ಯುವ ಉತ್ಸಾಹಿ ಸಂಶೋಧಕರಿಗೆ ಮತ್ತು ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಶಾಸನ ಸಾಹಿತ್ಯದ ತಿರುಳು ತಿಳಿಯಲಿದೆ. ಶಾಸನಗಳಲ್ಲಿಇತಿಹಾಸವಷ್ಟೇ ಇಲ್ಲ. ಇದರ ಜತೆ ಉತ್ತಮವಾದ ಪಂದ್ಯಗಳಿವೆ. ಅವುಗಳನ್ನು ಗುರುತಿಸಿಛಂದೋಬದ್ಧವಾಗಿ ವಿನ್ಯಾಸಗೊಳಿಸಿ, ಸಾಹಿತ್ಯರೂಪದ ಪುಸ್ತಕ ಮಾಡಬೇಕು ಎಂಬ ಕಾರ್ಯ ಇದಾಗಿದೆ.

ಈ ಹಿಂದೆ ಆರ್‌.ನರಸಿಂಹಚಾರ್‌ ಅವರು 1923ರಲ್ಲಿ “ಶಾಸನ ಪಂದ್ಯ ಮಂಜರಿ’ ಎಂಬ ಶೀರ್ಷಿಕೆಯಡಿ ಪುಸ್ತಕ ಪ್ರಕಟಣೆ ಮಾಡಿದ್ದಾರೆ. ಅದೇ ರೀತಿಯ ಪುಸ್ತಕವನ್ನು ಸಮಗ್ರ ರೂಪದಲ್ಲಿ ಸಾಹಿತ್ಯಾಸಕ್ತರಿಗೆ ಕಟ್ಟಿಕೊಡಬೇಕು ಎಂಬ ನಿಟ್ಟಿನಲ್ಲಿ ಸಾಹಿತ್ಯ ಅಕಾಡೆಮಿ ಮುಂದಾಗಿದೆ. ನಾಡಿನ ಹಿರಿಯ ಸಂಶೋಧಕ ಡಾ. ದೇವರ ಕೊಂಡಾರೆಡ್ಡಿ ಅವರು “ಶಾಸನ ಸಾಹಿತ್ಯ ಸಿರಿಸಂಪುಟ’ಯೋಜನೆಯ ಸಂಪಾದಕರಾಗಿದ್ದಾರೆ. ಹಿರಿಯ ವಿದ್ವಾಂಸ ಬಿ.ರಾಜಶೇಖರಪ್ಪ, ಎಸ್‌. ಕೆ.ಕೊಪ್ಪದ್‌, ಪರವಶಿವಮೂರ್ತಿ, ಸೀತಾರಾಮಜಾಗೀರ್‌ದಾರ್‌, ಡಾ.ಮಂಜುನಾಥ್‌ ಅವರಿಗೆ ಯೋಜನೆಯ ಉತ್ಸುವಾರಿ ನೀಡಲಾಗಿದೆ ಎಂದು ಅಕಾಡೆಮಿ ಅಧಿಕಾರಿಗಳು ಮಾಹಿತಿ ನೀಡಿದರು.

500 ಪುಟಗಳ ಹತ್ತು ಸಂಪುಟ: ರಾಜ್ಯಾದ್ಯಂತ 30 ಸಾವಿರಕ್ಕೂ ಅಧಿಕ ಶಿಲಾಶಾಸನಗಳುದೊರೆತಿವೆ. ಅವುಗಳಲ್ಲಿರುವ ಸಾಹಿತ್ಯವನ್ನು ಒಟ್ಟುಗೂಡಿಸುವ ಕೆಲಸ ಈಗಾಗಲೇ ನಡೆದಿದೆ.ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಶಾಸನ ಪಂದ್ಯಗಳು ಸಿಗಲಿವೆ. ಆದರೆ ಇತರ ಕಡೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ದೊರೆಯಲಿವೆ. ಅವುಗಳನ್ನು ಒಟ್ಟುಗೂಡಿಸಿ ಸಂಪುಟ ರೂಪಕ್ಕೆ ತರುವ ಆರಂಭಿಕ ಕಾರ್ಯನಡೆದಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್‌ ಹೇಳಿದ್ದಾರೆ.

ಶಾಸನಗಳಲ್ಲಿ ಐತಿಹಾಸಿಕ ಅಂಶಗಳಷ್ಟೇ ಇಲ್ಲ. ಮೌಲೀಕ ಸಾಹಿತ್ಯವೂ ಇದರಲ್ಲಿ ಅಡಗಿದೆ.ಶಾಸನಗಳಲ್ಲಿರುವ ಪಂದ್ಯಗಳಿಗೆ ಸಾಹಿತ್ಯ ರೂಪನೀಡಬೇಕು ಎಂಬ ದೃಷ್ಟಿಯಿಂದ ಅಕಾಡೆಮಿ”ಶಾಸನ ಸಾಹಿತ್ಯ ಸಿರಿ” ಶೀರ್ಷಿಕೆಯಡಿ ಬೃಹತ್‌ ಸಂಪುಟ ಹೊರತರಲು ಮುಂದಾಗಿದೆ. ಓಲೆಗರಿಯಲ್ಲಿರುವ ಕವಿರಾಜಮಾರ್ಗದಿಂದ ಪಂಪಭಾರತದ ವರೆಗಿನ ಎಲ್ಲಾ ಸಾಹಿತ್ಯಕ್ಕೆ ಪುಸ್ತಕ ರೂಪ ನೀಡಲಾಗಿದೆ. ಹಾಗೆಯೇ ಜಾನಪದ ಸಾಹಿತ್ಯವೂ ಸಂಪಾದನೆಆಗಿದೆ. ಶಾಸನಗಳಲ್ಲಿ ಬಹಳ ದೊಡ್ಡ ಪ್ರಮಾಣದ ಸಾಹಿತ್ಯವಿದೆ. ಆದರೆ, ಅದು ಸಾಹಿತ್ಯದ ವಸ್ತುವಾಗಿ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. ಶಾಸನ ಸಾಹಿತ್ಯವನ್ನು ಅಧ್ಯಯನ ಮಾಡುವವರಿಗೆ ಇದು ವಿಶ್ಲೇಷಣೆ ಮತ್ತಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.

Advertisement

“ಶಾಸನ ಸಾಹಿತ್ಯ ಸಿರಿ’ಯೋಜನೆ ವೆಚ್ಚ 60 ಲಕ್ಷ ರೂ.ಆಗಿದೆ. ಒಂದು ವರ್ಷದೊಳಗೆ ಈ ಕಾರ್ಯ ಪೂರ್ತಿಗೊಳ್ಳುವ ನಿರೀಕ್ಷೆಯಿದೆ. ಶಾಸನಸಾಹಿತ್ಯವನ್ನು ಸಾಹಿತ್ಯರೂಪದಲ್ಲಿ ನೀಡುವ ಕೆಲಸ ವಾಗಿದೆ. ಇತಿಹಾಸವನ್ನುಬಿಟ್ಟು ಸಾಹಿತ್ಯ ರೂಪವನ್ನು ಸಂಪಾದನೆ ಮಾಡಿ ಓದುಗರಿಗೆ ನೀಡಲಾಗುವುದು.ಸಾಹಿತ್ಯ ವಿದ್ಯಾರ್ಥಿಗಳಿಗೆ ಜೀವನಮೌಲ್ಯಗಳ ಜತೆಗೆ ವ್ಯಕ್ತಿ ಚಿತ್ರಗಳನ್ನು ಅರಿಯಲು ಸಹಾಯವಾಗಲಿದೆ. ಕರಿಯಪ್ಪ, ಅಕಾಡೆಮಿ ರಿಜಿಸ್ಟ್ರಾರ್‌

 

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next