Advertisement

ಆನಗಳ್ಳಿಯಲ್ಲಿ ವಿಜಯನಗರ ಕಾಲದ ಶಿಲಾ ಶಾಸನ ಪತ್ತೆ

12:45 PM Apr 22, 2019 | keerthan |

ಕುಂದಾಪುರ: ಆನಗಳ್ಳಿಯಲ್ಲಿ ಆಳುಪ ರಾಜಮನೆತನ ಕಾಲದ 1 ಶಿಲಾ ಶಾಸನ ಹಾಗೂ ವಿಜಯನಗರ ರಾಜರ ಕಾಲದ 3 ಒಟ್ಟು 4 ಶಿಲಾ ಶಾಸನ ಪತ್ತೆಯಾಗಿದೆ.

Advertisement

ಈ ಪೈಕಿ ಶ್ರೀ ಲಕ್ಷ್ಮೀ ಚೆನ್ನಕೇಶವ ದೇವಸ್ಥಾನದ ಹೊರ ಪ್ರಕಾರದಲ್ಲಿ ಎರಡು ಶಾಸನವು ಪತ್ತೆಯಾಗಿದ್ದು, ಶಾಸನದ ಕೆಲವೊಂದು ಅಕ್ಷರಗಳು ಸ್ಪಷ್ಟವಾಗಿ ಗೊಚರಿಸುತ್ತಿಲ್ಲ. ಶಾಸನವು ದೇವಸ್ಥಾನದ ಹೊರ ಪ್ರಕಾರದಲ್ಲಿ ಇರುವುದರಿಂದ ವ್ಯವಸ್ಥಿತವಾಗಿ ಸಂಗ್ರಹಿಸಿ ಇಡಲಾಗಿದೆ.

ಇನ್ನೆರಡು ಶಾಸನಗಳು ರಸ್ತೆಯ ಪಕ್ಕ ಇರುವ ಗದ್ದೆಯಲ್ಲಿ ಪತ್ತೆಯಾಗಿದೆ. ಶಾಸನದ ಪ್ರಭಾವಳಿ ಮಾತ್ರವಿದೆ.

ಪ್ರದೀಪ ಕುಮಾರ್‌ ಬಸೂರು, ರಾಘವೇಂದ್ರ ಶೆಟ್ಟಿ ಇಡೂರು, ಎ.ಕಾರ್ತಿಕ್‌ ಶೆಟ್ಟಿ, ಅಕ್ಷಯ್‌ ಕುಮಾರ್‌, ಕಿರಣ್‌ ಅವರ ತಂಡ ಈ ಶಿಲಾಶಾಸನವನ್ನು ಪತ್ತೆ ಹಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next