Advertisement
2015ರ ನವೆಂಬರ್ 16ರಂದು ಆಗಿನ ಕೇಂದ್ರ ಸಚಿವ ಸುರೇಶ ಪ್ರಭು ಅವರು ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ತಳ ಅಂತಸ್ತು ಮತ್ತು ಎರಡು ಮಹಡಿಗಳ ಮೂಲ ಯೋಜನೆಯಲ್ಲಿ ಈಗ ತಳ ಅಂತಸ್ತು ಮಾತ್ರ ನಿರ್ಮಾಣಗೊಂಡಿದೆ. ಪೀಠೊಪಕರಣ ಸೇರಿ ಒಟ್ಟು 2.96 ಕೋ.ರೂ. ಮೊತ್ತದ ಯೋಜನೆ ಇದು.
Related Articles
ನಾಯಕತ್ವ, ಸಂದರ್ಶನ ಎದುರಿ ಸುವ ಬಗೆ, ಸಮೂಹ (ತಂಡ) ಕಾರ್ಯ, ಸಂವಹನ ಕಲೆ ಮೊದಲಾದ ತರಬೇತಿಗಳಿರುತ್ತವೆ. ಮುಂದೆ ಮೆಕಟ್ರಾನಿಕ್ಸ್ (ಮೆಕ್ಯಾನಿಕಲ್ ಮತ್ತು ಮಾಹಿತಿ ತಂತ್ರಜ್ಞಾನ ಸಮ್ಮಿ ಳಿತ) ತರಬೇತಿಯನ್ನು ನೀಡುವ ಯೋಜನೆ ಇದೆ. ಅದಕ್ಕೆ ಕೆಲವೊಂದು ಯಂತ್ರೋಪಕರಣಗಳು ಅಗತ್ಯ ವಾಗಿರುವುದರಿಂದ ಆರಂಭಕ್ಕೆ ಸ್ವಲ್ಪ ಕಾಲಾವಕಾಶ ಹಿಡಿಯಬಹುದು.ಮೊದಲ ಮತ್ತು ಎರಡನೇ ಮಹಡಿ ಯನ್ನು ತಲಾ 1.28 ಕೋ.ರೂ. ವೆಚ್ಚದಲ್ಲಿ ನಿರ್ಮಿಸುವ ಪ್ರಸ್ತಾವವಿದೆ.
Advertisement
ಕೊಂಕಣ ರೈಲ್ವೇ ಸಾಕಾರಗೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿದ ಜಾರ್ಜ್ ಫೆರ್ನಾಂಡಿಸ್ ಹೆಸರಿನಲ್ಲಿ ಮಡಗಾಂವ್‌ನಲ್ಲಿ ಸುರಂಗ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸ ಲಾಗಿದ್ದು, ಅಲ್ಲಿ ಎಂಜಿನಿಯರುಗಳಿಗೆ ಸುರಂಗ ತಂತ್ರಜ್ಞಾನ ತರಬೇತಿ ನೀಡಲಾಗುತ್ತಿದೆ. ಮಧು ದಂಡವತೆ ಸ್ಮರಣಾರ್ಥ ಮಹಾರಾಷ್ಟ್ರದಲ್ಲಿ ಒಂದು ಸಂಸ್ಥೆಯನ್ನು ಆರಂಭಿಸುವುದಾಗಿ ಹೇಳಲಾಗಿದ್ದರೂ ಅದಿನ್ನೂ ಆರಂಭ ವಾಗಿಲ್ಲ.
ರಾಮಕೃಷ್ಣ ಹೆಗಡೆ ಕೌಶಲ ಅಭಿವೃದ್ಧಿ ಕೇಂದ್ರದ ಕಟ್ಟಡ ಮಾರ್ಚ್ ಅಂತ್ಯದೊಳಗೆ ಉದ್ಘಾಟನೆಯಾಗಲಿದೆ. ಸದ್ಯ ಲಘು ಕೌಶಲ ಅಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತಿದೆ. ಮುಂದಿನ ಹಂತದ ಕಟ್ಟಡ ಪೂರ್ಣಗೊಂಡ ಬಳಿಕ ವಸತಿ ಸೌಲಭ್ಯ ಸಹಿತ ತರಬೇತಿಯನ್ನು ನೀಡುವ ಇರಾದೆ ಇದೆ.– ಬಿ.ಬಿ. ನಿಕಮ್, ಪ್ರಾದೇಶಿಕ ವ್ಯವಸ್ಥಾಪಕರು, ಕೊಂಕಣ ರೈಲ್ವೇ, ಕಾರವಾರ