Advertisement

30 ವರ್ಷ ಸೇವೆ ಸಲ್ಲಿಸಿದ ಐಎನ್‌ಎಸ್‌ ವಿರಾಟ್‌ಗೆ ಇಂದು ವಿದಾಯ

11:48 AM Mar 06, 2017 | Team Udayavani |

ಹೊಸದಿಲ್ಲಿ : ಭಾರತೀಯ ನೌಕಾಪಡೆಗೆ 30 ವರ್ಷಗಳ ಅತ್ಯಮೂಲ್ಯ ಸೇವೆಯನ್ನು ಸಲ್ಲಿಸಿರುವ ಐಎನ್‌ಎಸ್‌ ವಿರಾಟ್‌ ಗೆ ವಿದಾಯ ಹೇಳುವ ಮುಹೂರ್ತ ಇಂದು ಒದಗಿದೆ.

Advertisement

ಈ ಮೊದಲು ಬ್ರಿಟನ್‌ನ ರಾಯಲ್‌ ನೇವಿಯೊಂದಿಗೆ ಇದ್ದ ಐಎನ್‌ಎಸ್‌ ವಿರಾಟ್‌ ಭಾರತೀಯ ನೌಕಾ ಪಡೆಯ ಎರಡನೇ ಬೃಹತ್‌ ಸಮರ ನೌಕೆಯಾಗಿದ್ದು ಇಂದು ಅದನ್ನು ಸೇವೆಯಿಂದ ಮುಕ್ತಗೊಳಿಸಲಾಗುತ್ತಿದೆ. 

ಐಎನ್‌ಎಸ್‌ ವಿರಾಟ್‌ 27 ಬಾರಿ ವಿಶ್ವ ಪರ್ಯಟನೆ ಮಾಡಿದೆ. ಬರೋಬ್ಬರಿ 11 ಲಕ್ಷ ಕಿ.ಮೀ. ದೂರವನ್ನು ಕ್ರಮಿಸಿದೆ. ಭಾರತೀಯ ನೌಕಾ ಪಡೆ ಕಳೆದ 30 ವರ್ಷಗಳಲ್ಲಿ ಕೈಗೊಂಡಿರುವ ಹಲವಾರು ಸೇನಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿರುವ ಐಎನ್‌ಎಸ್‌ ವಿರಾಟ್‌, ಆಪರೇಶನ್‌ ಪವನ್‌ ಮತ್ತು ಪರಾಕ್ರಮ್‌ ಆ ಪೈಕಿ ಪ್ರಮುಖವಾಗಿವೆ. ಮುಂಬಯಿಯಿಲ್ಲ ಇಂದು ಸೋಮವಾರ ಐಎನ್‌ಎಸ್‌ ವಿರಾಟ್‌ ವಿದಾಯ ಕಾರ್ಯಕ್ರಮ ನಡೆಯಲಿದ್ದು ಸುಮಾರು 21 ಮಾಜಿ ಕಮಾಂಡರ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. 

ಐಎನ್‌ಎಸ್‌ ವಿರಾಟ್‌ ನೌಕೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಪ್ರಸ್ತಾವವದಲ್ಲಿ ಆಂಧ್ರ ಪ್ರದೇಶ ಸರಕಾರ ಆಸಕ್ತಿ ತೋರಿತ್ತು. ಆದರೆ ಅದಕ್ಕೆ ಸುಮಾರು 1,000 ಕೋಟಿ ರೂ. ಖರ್ಚು ತಗಲುವುದೆಂಬ ಕಾರಣ ಆಸಕ್ತಿ ಕಮರಿ ಹೋಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next