Advertisement

ನೌಕಾಪಡೆಗೆ “ವಗೀರ್‌ ‘ಬಲ: ವಿಶೇಷತೆಗಳೇನು ?

09:28 PM Jan 23, 2023 | Team Udayavani |

ಕಡಲಾಳದಲ್ಲಿ ಶತ್ರುಗಳ ಹಿಮ್ಮೆಟ್ಟಿಸುವ ನೂತನ ಜಲಾಂತರ್ಗಾಮಿ ನೌಕೆ ಐಎನ್‌ಎಸ್‌ ವಗೀರ್‌ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ. ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕೆಗಳ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಾಣ ವಾಗಿರುವ ಕಲ್ವರಿ ದರ್ಜೆಯ 5ನೇ ಜಲಾಂತರ್ಗಾಮಿ ನೌಕೆ ಇದಾಗಿದ್ದು, ಇದರ ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆಯ ಬಲ ಹೆಚ್ಚಿದಂತಾಗಿದೆ.

Advertisement

ವಗೀರ್‌ ಎಂಬ ಪದದ ಅರ್ಥವೇನು?
ವಗೀರ್‌ ಎಂದರೆ ಸ್ಯಾಂಡ್‌ ಶಾರ್ಕ್‌ ಎನ್ನುವ ಅರ್ಥವಿದೆ. ಅದು ರಹಸ್ಯವಾಗಿ-ನಿರ್ಭೀತಿಯಿಂದ ಎದುರಾಳಿಯನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯದ ಪ್ರತೀಕ. 1973ರಿಂದ 3 ದಶಕಗಳವರೆಗೆ ಸೇವೆ ಸಲ್ಲಿಸಿ, ನಂತರ 2001ರ ಜನವರಿ 2007ರಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ, ಈ ಹಿಂದಿನ ಜಲಾಂತರ್ಗಾಮಿ ನೌಕೆಯ ಹೆಸರನ್ನೇ ಕಲ್ವರಿಯ ಹೊಸ ಆವೃತ್ತಿಗೆ ಅದೇ ಹೆಸರನ್ನು ಇರಿಸಲಾಗಿದೆ.

ವಿಶೇಷತೆಗಳೇನು ?
24 ತಿಂಗಳ ಅವಧಿಯಲ್ಲಿ ನಿರ್ಮಾಣಗೊಂಡ ನೌಕೆ
50 ದಿನಗಳವರೆಗೆ ಜಲಾಂತರಾಳದಲ್ಲಿ ಇರಬಲ್ಲದು
8 ನೌಕಾಧಿಕಾರಿಗಳು, 35 ಸಿಬ್ಬಂದಿಗೆ ಅವಕಾಶ
2 ವರ್ಷದಲ್ಲಿ ಸೇರ್ಪಡೆಗೊಳ್ಳುತ್ತಿರುವ 3ನೇ ನೌಕೆ
ಗೈಡೆಡ್‌ ಟಾರ್ಪಿಡೋ, ಸೆನ್ಸರ್‌ಗಳ ಅಳವಡಿಕೆ
ಚೀನಾ ಸಾಗರ ಉಪಟಳಕ್ಕೆ ಬಾಣ

ಫ್ರಾನ್ಸ್‌ ಸಂಸ್ಥೆಯ ಸಹಯೋಗದಲ್ಲಿ ಮುಂಬೈನಲ್ಲಿ ನಿರ್ಮಾಣ
ಗುಪ್ತಚರ, ಕಣ್ಗಾವಲು, ವಿಚಕ್ಷಣ ಕಾರ್ಯಾಚರಣೆಗಳಿಗೆ ಸಹಕಾರಿ
ಶತ್ರುದಾಳಿ ಹಿಮ್ಮೆಟ್ಟಿಸಬಲ್ಲ ಪ್ರಬಲ ಕ್ಷಿಪಣಿ ಸಜ್ಜಿತ ಜಲಾಂತರ್ಗಾಮಿ

16-ನೌಕಾಪಡೆಯಲ್ಲಿರುವ ಜಲಾಂತರ್ಗಾಮಿಗಳು

Advertisement

1-ಪಡೆಯಲ್ಲಿರುವ ಪರಮಾಣು ಸಜ್ಜಿತ ಜಲಾಂತರ್ಗಾಮಿ

 

Advertisement

Udayavani is now on Telegram. Click here to join our channel and stay updated with the latest news.

Next