Advertisement

ಐಎನ್‌ಎಸ್‌ ತಿಲ್ಲಾಂಚಾಂಗ್‌ ಲೋಕಾರ್ಪಣೆ

10:59 AM Mar 10, 2017 | Harsha Rao |

ಕಾರವಾರ: ಕ್ಷಿಪ್ರ ಕಾರ್ಯಾಚರಣೆ ಸಾಮರ್ಥ್ಯ ಹೊಂದಿರುವ “ತಿಲ್ಲಾಂಚಾಂಗ್‌’ ಯುದ್ಧನೌಕೆ ಗುರುವಾರ ಐಎನ್‌ಎಸ್‌
ಕದಂಬ ನೌಕಾನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ನೌಕಾಪಡೆಗೆ ಲೋಕಾರ್ಪಣೆ ಮಾಡಲಾಯಿತು.

Advertisement

ಪಶ್ಚಿಮ ನೌಕಾದಳದ ಫ್ಲಾಗ್‌ ಆμàಸರ್‌ ಕಮಾಂಡಿಂಗ್‌ ವೈಸ್‌ ಅಡ್ಮಿರಲ್‌ ಗಿರೀಶ್‌ ಲೂತ್ರಾ ನೌಕೆಯನ್ನು ಲೋಕಾರ್ಪಣೆ ಮಾಡಿ, ಪಶ್ಚಿಮ ಸಮುದ್ರದ ತೀರದ ಸುರಕ್ಷತೆಯಲ್ಲಿ ತಿಲ್ಲಾಂಚಾಂಗ್‌ ಮಹತ್ವದ ಪಾತ್ರ ವಹಿಸಲಿದೆ ಎಂದರು.
ಅದಿತಿ ಪಟ್ನಾಯಕ್‌ “ಐಎನ್‌ಎಸ್‌ ತಿಲ್ಲಾಂಚಾಂಗ್‌’ ಕಮಾಂಡರ್‌ ಆಗಿ ಕಾರ್ಯ ನಿರ್ವಹಿಸಲಿದ್ದು, ಕರಾವಳಿ ಮತ್ತು ಸಮುದ್ರದಲ್ಲಿ ಕಣ್ಗಾವಲು, ನುಸುಳುಕೋರರು ಅಥವಾ ಕಳ್ಳಸಾಗಾಣಿಕೆಗಾರರ ಮೇಲೆ ನಿಗಾ ಮತ್ತು ತಡೆ, ಇಇಝಡ್‌ ನಿಯಂತ್ರಣ, ಕಾನೂನು ಪರಿಪಾಲನೆ ಮಾತ್ರವಲ್ಲದೆ ಮಿಲಿಟರಿಯೇತರ ಕಾರ್ಯಗಳಾದ ರಕ್ಷಣಾ ಕಾರ್ಯಾಚರಣೆ, ಮಾನವೀಯ ನೆರವುಗಳು, ವಿಪತ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳಿಗೆ ಈ ಯುದ್ಧನೌಕೆ ಸನ್ನದ್ಧವಾಗಿರುತ್ತದೆ ಎಂದು ತಿಳಿಸಿದರು.

ಜಿಆರ್‌ಎಸ್‌ಇ ಸಂಸ್ಥೆಯ ಚೇರ್‌ಮನ್‌ ಹಾಗೂ ಮ್ಯಾನೇಜಿಂಗ್‌ ಡೈರೆಕ್ಟರ್‌ ವಿ.ಕೆ.ಸಕ್ಸೇನಾ, ನೌಕಾನೆಲೆಯ ಹಿರಿಯ
ಅಧಿಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next