Advertisement
ಐಎನ್‌ಎಸ್ ಖುಕ್ರಿಯನ್ನು ಡಿ.23ರಂದು ಮುಂಬಯಿಯಲ್ಲಿ ಸೇವೆಯಿಂದ ಹಿಂಪಡೆಯಲಾಯಿತು. ನೌಕೆಯಲ್ಲಿದ್ದ ರಾಷ್ಟ್ರೀಯ ಧ್ವಜ ಮತ್ತು ನೌಕಾ ಧ್ವಜವನ್ನು ಕೆಳಗಿಸಲಾಯಿತು. ರಕ್ಷಣ ಖಾತೆ ಮಾಜಿ ಸಚಿವ ಕೆ.ಸಿ.ಪಂತ್, ನೌಕೆಯ ಮೊದಲ ಕಮಾಂಡಿಂಗ್ ಆಫೀಸರ್ ಸಂಜಯ್ ಭಾಸಿನ್, ನೌಕಾಪಡೆಯ ಹಿರಿಯ ಅಧಿಕಾರಿಗಳು ಹಾಗೂ ಐಎನ್‌ಎಸ್ ಖುಕ್ರಿಯ ನಿವೃತ್ತ ಕಮಾಂಡರ್‌ಗಳು ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದರು.
-ಮುಂಬಯಿಯ ಮಡ್‌ಗಾಂವ್ ಡಾಕ್ ಶಿಪ್ ಬಿಲ್ಡರ್ ನಲ್ಲಿ ನಿರ್ಮಾಣ.
-1986ರಲ್ಲಿ ನಿರ್ಮಾಣ. 1989ರಲ್ಲಿ ನಿಯೋಜನೆ ಇದರ ಮಹತ್ವವೇನು?
ದೇಶೀಯವಾಗಿ ನಿರ್ಮಾಣಗೊಂಡ ಮೊದಲ ಕ್ಷಿಪಣಿ ವಾಹಕ ನೌಕೆಗಳಲ್ಲೊಂದು ಐಎನ್‌ಎಸ್ ಖುಕ್ರಿ 1971ರ ಪಾಕ್-ಭಾರತ ಯುದ್ಧದ ಸಮಯದಲ್ಲಿ ಪಾಕ್ ಪಡೆಯ ದಾಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗಿತ್ತು. ಅದರ ಕಮಾಂಡರ್ ಮಹೇಂದ್ರ ನಾಥ್ ಮುಲ್ಲಾ ಕೂಡ ಅದರೊಂದಿಗೇ ಮುಳುಗಿದ್ದರು. ಅದರ ನೆನಪಿನಲ್ಲಿ ಈ ನೌಕೆಗೆ ಖುಕ್ರಿ ಎಂದು ಹೆಸರಿಡಲಾಗಿತ್ತು.