Advertisement

ಐಎನ್‌ಎಸ್‌ ಕರಂಜ್‌ ಜಲಾಂತರ್ಗಾಮಿ ಭಾರತೀಯ ನೌಕಾ ಪಡೆಗೆ ಸೇರ್ಪಡೆ

11:08 AM Jan 31, 2018 | Team Udayavani |

ಮುಂಬಯಿ : ಸ್ಕಾರ್ಪಿನ್‌ ದರ್ಜೆಯ ಮೂರನೇ ಜಲಾಂತರ್ಗಾಮಿಯಾಗಿ ಐಎನ್‌ಎಸ್‌ ಕರಂಜ್‌ ಅನ್ನು ಮುಂಬಯಿಯ ಮಜಗಾಂವ್‌ ಡಾಕ್‌ ಶಿಪ್‌ ಬಿಲ್ಡರ್‌ಸ್‌ ಲಿಮಿಟೆಡ್‌ ಸಂಸ್ಥೆಯ ಧಕ್ಕೆಯಲ್ಲಿ ಇಂದು ಬುಧವಾರ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ.

Advertisement

ಈ ಹಿಂದಿನ ಕರಂಜ್‌ ಜಲಾಂತರ್ಗಾಮಿಯನ್ನು 1969ರ ಸೆ.4ರಂದು ಭಾರತೀಯ ನೌಕಾಪಡೆಗೆ ಸೇರಿಸಲಾಗಿದ್ದು 2003ರ ಅ.1ರಂದು ಅದನ್ನು ಸೇವೆಯಿಂದ ನಿವೃತ್ತಗೊಳಿಸಲಾಗಿತ್ತು. ಸುಮಾರು 34 ವರ್ಷಗಳ ಕಾಲ ದೇಶ ಸೇವೆಗೈದಿದ್ದ ಈ ಮೊದಲಿನ ಕರಂಜ್‌ 1971ರ ಸಮರ ಕಾರ್ಯಾಚರಣೆಯಲ್ಲೂ ಭಾಗಿಯಾಗಿತ್ತು.

ಅದೇ ಕರಂಜ್‌ ಇಂದು ಹೊಸ ಅವತಾರದಲ್ಲಿ ಮರು ಹುಟ್ಟು ಪಡೆದಿದೆ. ಈ ಹೊಸ ಕರಂಜ್‌ ಇದೇ ಮೊದಲ ಬಾರಿಗೆ ಇಂದು ನೀರಿಗಿಳಿಯುತ್ತಿದ್ದಂತೆಯೇ ಅಥರ್ವ ವೇದದ ಶ್ಲೋಕಗಳನ್ನು ಧಕ್ಕೆಯಲ್ಲಿ ಪಠಿಸಲಾಯಿತು. 

ಅತ್ಯಾಧುನಿಕ ಸಲಕರಣೆ, ಸೌಕರ್ಯ ಮತ್ತು ತಂತ್ರಜ್ಞಾನವನ್ನು ಹೊಂದಿರುವ ಕರಂಜ್‌ ಸ್ಕಾರ್ಪಿಯೋ ಜಲಾಂತರ್ಗಾಮಿ ಅತ್ಯಂತ ನಿಗೂಢ ಚಲನವಲನ ಸಾಮರ್ಥ್ಯವನ್ನು ಹೊಂದಿದೆಯಲ್ಲದೆ ಕರಾರುವಾಕ್‌ ಗುರಿ ನಿರ್ದೇಶಿತ ಶಸ್ತ್ರಾÕಸ್ತ್ರಗಳನ್ನು ಹೊಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next