Advertisement

ಬಿಜೆಡಿ ಶಾಸಕನಿಂದ ಜೂ. ಇಂಜಿನಿಯರ್‌ಗೆ ಬಸ್ಕಿ ತೆಗೆವ ಶಿಕ್ಷೆ: ತನಿಖೆಯಲ್ಲಿ ದೃಢ

02:36 PM Jun 11, 2019 | Team Udayavani |

ಭುವನೇಶ್ವರ : ಕಳಪೆ ಕಾಮಗಾರಿಗಾಗಿ ಕ್ಷಮೆಯಾಚಿಸಲು ನಡು ರಸ್ತೆಯಲ್ಲೇ ಬಸ್ಕಿ ತೆಗೆಯಲು ಬಲವಂತಪಡಿಸುವ ಮೂಲಕ ನೂತನ ಚುನಾಯಿತ ಬಿಜೆಡಿ ಶಾಸಕ, ಪಿಡಬ್ಲ್ಯುಡಿ ಇಲಾಖೆಯ ಜೂ.ಇಂಜಿನಿಯರ್‌ ನನ್ನು ಅವಮಾನಿಸಿದರೆಂಬ ಪ್ರಕರಣವು ತನಿಖೆಯಲ್ಲಿ ದೃಢ ಪಟ್ಟಿದೆ ಎಂದು ಇಂದು ಸೋಮವಾರ ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ.

Advertisement

ಪಟ್ನಾಗಢ BJD ಶಾಸಕ ಸರೋಜ್‌ ಕುಮಾರ್‌ ವೆ‌ುಹರ್‌ ಅವರು ಬೋಲಂಗೀರ್‌ ಜಿಲ್ಲೆಯಲ್ಲಿ ಜೂನಿಯರ್‌ ಇಂಜಿನಿಯರ್‌ಗೆ ರಸ್ತೆಯಲ್ಲೇ ಬಸ್ಕಿ ತೆಗೆಯುವಂತೆ ಮಾಡಿದ್ದ ವಿಡಿಯೋ ಕಳೆದ ವಾರ ವೈರಲ್‌ ಆಗಿತ್ತು. ಜಿಲ್ಲಾಧಿಕಾರಿಗಳು ಈ ಘಟನೆಯ ಬಗ್ಗೆ ವರದಿ ಕೇಳಿದ್ದರು.

ಪಟ್ನಾಗಢ ಉಪ ವಿಭಾಗೀಯ ಆಯುಕ್ತರು ಈ ಬಗ್ಗೆ ನಡೆಸಿದ ತನಿಖೆಯಲ್ಲಿ BJD ಶಾಸಕ ಜೂನಿಯರ್‌ ಇಂಜಿನಿಯರ್‌ಗೆ ಸಾರ್ವಜನಿಕರ ಮುಂದೆ ಬಸ್ಕಿ ತೆಗೆಯುವಂತೆ ಬಲಪಡಿಸಿದ ಘಟನೆ ದೃಢ ಪಟ್ಟಿತು.

‘ಘಟನೆ ಕುರಿತ ವರದಿ ನನ್ನ ಕೈಸೇರಿದೆ. ಅದನ್ನು ಮುಂದಿನ ಕ್ರಮಕ್ಕಾಗಿ ಸರಕಾರಕ್ಕೆ ಕಳುಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಅರಿಂದಮ್‌ ಡಕುವಾ ಮಾಧ್ಯಮಕ್ಕೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next