Advertisement

ಸೋಂಕಿತಳ ವಿಚಾರಣೆ ನಡೆಸಿದ ಪೊಲೀಸ್‌ ಅಧಿಕಾರಿಗಳು ಕ್ವಾರಂಟೈನ್‌ಗೆ

07:14 AM May 21, 2020 | Lakshmi GovindaRaj |

ಶಿವಮೊಗ್ಗ: ಕೊರೊನಾ ಸೋಂಕಿತಳ(ಪೇಷೆಂಟ್‌ ನಂಬರ್‌ 1,304) ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಹಿರಿಯ ಪೊಲೀಸ್‌ ಅಧಿ ಕಾರಿಗಳು ಸೇರಿ ಹಲವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಹೀಗಾಗಿ ಜಯಪ್ರಕಾಶ್‌ ಅವರನ್ನು  ನೂತನ  ಹೆಚ್ಚುವರಿ ಪೊಲೀಸ್‌ ಅಧಿಧೀಕ್ಷಕರನ್ನಾಗಿ ನೇಮಕ ಮಾಡಿ, ಪೊಲೀಸ್‌ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

Advertisement

ಡಿವೈಎಸ್‌ಪಿಗಳಾದ ಟಿ.ವೆಂಕಟೇಶ್‌, ಎಂ.ಕಲ್ಯಾಣ್‌ ಕುಮಾರ್‌, ನಿರಂಜನ ರಾಜೇ ಅರಸ್‌,   ಟಿ.ಮಹದೇವ ಹಾಗೂ ಇನ್ಸ್‌ಪೆಕ್ಟರ್‌ ಗಳಾದ ಆರ್‌.ಜಿ. ಚನ್ನೇಗೌಡ, ಆರ್‌.ರಮೇಶ್‌, ಎಂ.ಎಸ್‌. ದೀಪಕ್‌, ಜಿ.ಕೆ. ಮಧುಸೂದನ್‌, ನಿತ್ಯಾನಂದ ಪಂಡಿತ್‌, ಸಿಐಡಿ ಘಟಕದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಎಂ. ಗೋವಿಂದರಾಜು ಮತ್ತು ಕಿರಣ್‌  ಕುಮಾರ್‌ ಬಿ.ನಾಯಕ್‌ ಅವರನ್ನು ಶಿವಮೊಗ್ಗ ಜಿಲ್ಲೆಗೆ ನಿಯೋಜಿಸಲಾಗಿದ್ದು, ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ.

ಇವರಿಗೆಲ್ಲ ಕೋವಿಡ್‌ 19 ಕರ್ತವ್ಯಕ್ಕೆ ನಿಯೋಜನೆ ಎಂದು ತಿಳಿಸಲಾಗಿದೆ. ಈ ನಡುವೆ  ಅ ಧಿಕಾರಿಗಳು ಕ್ವಾರಂಟೈನ್‌ಗೆ ಹೋಗುವಂತಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ಕೇಂದ್ರ ಕಚೇರಿಯನ್ನು ಮಂಗಳವಾರ ಸಂಪೂರ್ಣ ಸ್ಯಾನಿಟೈಜೇಷನ್‌ ಮಾಡಲಾಗಿದೆ. ಜಿಲ್ಲಾ ಪೊಲೀಸ್‌ ಕೇಂದ್ರ ಕಚೇರಿಗೆ ಸಿಬ್ಬಂದಿ ಎಂದಿನಂತೆ  ಕರ್ತವ್ಯಕ್ಕೆ ಹಾಜರಾಗಿದ್ದಾರೆ.  ಸಿಬ್ಬಂದಿಯನ್ನೂ ತಪಾಸಣೆಗೊಳಪಡಿಸಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next