Advertisement
ಕೊರೊನಾ, ಲಾಕ್‌ಡೌನ್ ಕಾರಣಕ್ಕೆ ಶೈಕ್ಷಣಿಕ ಚಟುವಟಿಕೆ ಅದರಲ್ಲೂ ಭೌತಿಕ ತರಗತಿಯಿಂದ ಹಲವಾರು ತಿಂಗಳು ದೂರ ಇದ್ದ ಕಾರಣಕ್ಕೆ ಮಕ್ಕಳಲ್ಲಿನ ಏಕಾಗ್ರತೆ ಕಡಿಮೆ ಆಗುತ್ತಿದೆ ಎಂಬುದನ್ನು ಮನಗಂಡ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ 10xplus ಯೋಜನೆ ಪ್ರಾರಂಭಿಸಿತು.
ತರಬೇತಿ ಪ್ರಾರಂಭಿಸುತ್ತಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ 10xಟlus ಯೋಜನೆ, ಎಂ.ಎಸ್. ಶಿವಣ್ಣ ತರಬೇತಿ ಕೇಂದ್ರದ ಬಗ್ಗೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಮಾಹಿತಿ ನೀಡಿದರು. ಸಿದ್ಧಗಂಗಾ ವಿದ್ಯಾಸಂಸ್ಥೆ ಕಳೆದ 52 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಾ ಬಂದಿದೆ. ವಿದ್ಯಾರ್ಥಿ ಸಮುದಾಯವನ್ನು ವಿನೂತನ ಪ್ರಯೋಗಗಳಿಗೆ ಸಿದ್ಧಗೊಳಿಸುವ ಜೊತೆಗೆ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ
ಅನಾವರಣಕ್ಕೆ ಸೂಕ್ತ ವೇದಿಕೆ ನೀಡಿ ಪ್ರೋತ್ಸಾಹಿಸುತ್ತಿದೆ. ಅದರ ಭಾಗವಾಗಿ ಇದೀಗ 10xplus ಎಂಬ ಹೊಸ ಆವಿಷ್ಕಾರದೊಂದಿಗೆ ರಾಜ್ಯದ ಎಲ್ಲ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಯೋಜನೆ ಸಿದ್ಧಪಡಿಸಿದೆ. ಸಂಸ್ಥೆಯ ನಿರ್ದೇಶಕ ಡಾ| ಜಯಂತ್‌ರವರು ಹಲವಾರು ವರ್ಷಗಳ ಅಧ್ಯಯನದಿಂದ ವೈಜ್ಞಾನಿಕವಾಗಿ 10xplus ಯೋಜನೆ ರೂಪಿಸಿದ್ದಾರೆ ಎಂದು ತಿಳಿಸಿದರು.
Related Articles
Advertisement
ಸಂಸ್ಥೆಯ ನಿರ್ದೇಶಕ ಡಾ| ಡಿ.ಎಸ್. ಜಯಂತ್ ಮಾತನಾಡಿ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಅ. 28 ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಯೋಜನೆ, ಎಂ.ಎಸ್. ಶಿವಣ್ಣ ತರಬೇತಿ ಕೇಂದ್ರ, 10xplus ಶಿಲಾಫಲಕವನ್ನು ಉದ್ಘಾಟಿಸುವರು. ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಎಂ.ಎಸ್. ಶಿವಣ್ಣ ತರಬೇತಿ ಕೇಂದ್ರದ ಫಲಕ, ಶಾಸಕ ಎಸ್.ಎ. ರವೀಂದ್ರನಾಥ್ 10xplus ಲೋಗೋ, ಎಂ.ಎಸ್. ಶಿವಣ್ಣ ತರಬೇತಿ ಕೇಂದ್ರದಲ್ಲಿ ಸ್ಥಾಪಿಸಲಾಗುವ ಶಿಕ್ಷಣ ಶಿಲ್ಪಿ ಎಂ.ಎಸ್. ಶಿವಣ್ಣನವರ ಮೂರ್ತಿಯನ್ನು ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ|ಎ.ಎಚ್. ಶಿವಯೋಗಿಸ್ವಾಮಿ, ಯೋಜನೆ ಕೈಪಿಡಿ, “ಅಜರಾಮರ’ ಕೃತಿಯನ್ನು ಜಿಲ್ಲಾಧಿಕಾರಿ ಮಹಂತೇಶ ಬೀಳಗಿ ಲೋಕಾರ್ಪಣೆ ಮಾಡುವರು ಎಂದು ಮಾಹಿತಿ ನೀಡಿದರು.