ಬೆಳ್ಮಣ್: ಅಂತರ್ಜಲ ಹೆಚ್ಚುವಿಕೆಗೆ ಕೃಷಿ ಚಟುವಟಿಕೆಗಳು ಪೂರಕವಾಗಿದ್ದು ಇತ್ತೀಚೆಗಿನ ದಿನಗಳಲ್ಲಿ ಕೃಷಿಕರು ಹಲವಾರು ಕಾರಣಗಳಿಂದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅದರಲ್ಲೂ ಕಾರ್ಮಿಕರ ಸಮಸ್ಯೆಯಿಂದ ತಮ್ಮ ಫಲವತ್ತಾದ ಕೃಷಿಭೂಮಿ ಹಡೀಲು ಬಿಡುತ್ತಿರುವ ಈ ಕಾಲಘಟ್ಟದಲ್ಲಿ ಇನ್ನಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಮಾಜಿಕ ಕಳಕಳಿಯಿಯಿಂದ ರಿಯಾಯಿತಿ ದರದಲ್ಲಿ ಗದ್ದೆ ಉಳುಮೆ ಮಾಡಿಕೊಡುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಹೇಳಿದರು.
ರವಿವಾರ ಇನ್ನಾ ಗ್ರಾ.ಪಂ. ಸಭಾಭವನನದಲ್ಲಿ ಇನ್ನಾ ಗ್ರಾ.ಪಂ. ಹಾಗೂ ಸ್ಥಳೀಯ ವಿಕಾಸ ಭಾರತ ಟ್ರಸ್ಟ್ ಸಹಕಾರದೊಂದಿಗೆ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್‌ನ ನೇತೃತ್ವದಲ್ಲಿ ನಡೆಯಲಿರುವ ರಿಯಾಯಿತಿ ದರದಲ್ಲಿ ಗದ್ದೆ ಉಳುಮೆ ಮಾಡಿಕೊಡುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇನ್ನಾ ಗ್ರಾ.ಪಂ. ಅಧ್ಯಕ್ಷ ಕುಶ ಆರ್. ಮೂಲ್ಯ ಆಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ತಂತ್ರಿ, ವಿಕಾಸ ಭಾರತ ಟ್ರಸ್ಟ್‌ನ ಅಧ್ಯಕ್ಷ ಇನ್ನಾ ಪ್ರದೀಪ್ ಶೆಟ್ಟಿ, ಇನ್ನದಗುತ್ತು ಶಂಕರ ಶೆಟ್ಟಿ, ಅಮರನಾಥ ಶೆಟ್ಟಿ, ಪ್ರವೀಣ್ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಜಯ ಎಸ್. ಕೋಟ್ಯಾನ್, ಹಾಗೂ ನೂರಾರು ಕೃಷಿಕರು ಉಪಸ್ಥಿತರಿದ್ದರು.
ಪಂಚಾಯತ್ ಸದಸ್ಯ ಹೆಲನ್ ಡಿ;’ಸೋಜಾ ಸ್ವಾಗತಿಸಿ, ಯೋಜನೆಯ ಸಂಘಟಕ ಕಾಂಜರಕಟ್ಟೆ ದೀಪಕ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಗುತ್ತುವಿನ ದೇವರ ಬಾಕಿಮಾರುಗದ್ದೆಯಲ್ಲಿ ಉಳುಮೆ ಪ್ರಾರಂಭಿಸಿ ಈ ವಿನೂತನ ಕೃಷಿ ಆಂದೋಲ ನಕ್ಕೆ ಚಾಲನೆ ನೀಡಲಾಯಿತು.
ರೈತರು ಪ್ರಯೋಜನ ಪಡೆಯಿರಿ
ಸಂಯೋಜಕ ಇನ್ನಾ ದೀಪಕ್ ಕೋಟ್ಯಾನ್ ಮಾತನಾಡಿ, ಇನ್ನಾ ಗ್ರಾ.ಪಂ. ವ್ಯಾಪ್ತಿಯ ಎಲ್ಲ ಕೃಷಿಕರು ಕೃಷಿಯತ್ತ ಆಕರ್ಷಿತರಾಗಬೇಕೆಂಬ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ. ರೈತರು ಗಂಟೆಗೆ ಕೇವಲ 500 ರೂ. ಪಾವತಿಸಿ ಈ ಟ್ರಾಕ್ಟರ್ ಸೇವೆ ಬಳಸಿಕೊಳ್ಳಬಹುದು. ಉಳಿದ ಹಣವನ್ನು ಟ್ರಸ್ಟ್ ಭರಿಸಲಿದ್ದು, ಜಮೀನನ್ನು ಬಂಜರು ಬಿಟ್ಟ ರೈತರು ಈ ಯೋಜನೆಯ ಪ್ರಯೋಜನ ಪಡೆಯಬೇಕು ಎಂದರು.