Advertisement
ಆಶ್ಚರ್ಯ ಆಗ್ತಿದ್ಯಾ! ಎಂದೂ ಪತ್ರ ಬರೆಯದ ಮಗ ಯಾಕಿಂದು ದಿಢೀರನೆ ಇಷ್ಟುದ್ದ ಕಾಗದ ಬರೆದಿ¨ªಾನೆ ಎಂದು? ಯಾಕೋ ಗೊತ್ತಿಲ್ಲ, ಇವತ್ತು ನನ್ನೊಳಗಿನ ಮಗ ನಿನ್ನನ್ನು ಬಹಳ ನೆನಪಿಸಿಕೊಳ್ತಾ ಇದ್ದಾನೆ. ಈ ಉಕ್ಕಿ ಬಂದ ಪ್ರೀತಿಯನ್ನು ಅಲೆಗಳಲ್ಲಿ ತೇಲಿಸುವ ಬದಲು ಪದಗಳಲ್ಲಿ ಹಿಡಿದಿಡುವ ಮನಸ್ಸಾಯಿತು ಅಷ್ಟೆ.ಗಂಡು ಮಗುವೊಂದು ಬೇಕೆಂಬ ಹಂಬಲದಿಂದ ಹುಟ್ಟಿದವನು ನಾನು, ಹಾಗಾಗಿ ನನ್ನನ್ನು ಎತ್ತಿ ಆಡಿಸುವಾಗ ನಿನ್ನ ಪ್ರೀತಿ ಸಹಜಕ್ಕಿಂತಲೂ ಹೆಚ್ಚಿತ್ತೇನೋ. ನೀ ಹೇಳಿದ ನೆನಪು; ಹುಟ್ಟುವಾಗ ನನಗೆ ತಲೆತುಂಬ ಗುಂಗುರು ಕೂದಲು, ಕೆಂಪು ಬಿಳಿ ಬಣ್ಣ, ಅಗಲ ಮುಖ, ಮಲಗಿದರೆ ತೊಟ್ಟಿಲು ತುಂಬುತ್ತಿತ್ತು.
ಶಾಲೆಗೆ ಹೋಗಲಾರೆ ಎಂದು ಅತ್ತು ಹಠ ಹಿಡಿದಾಗ ಒತ್ತಾಯಿಸಿ ಉಳಿದ ಮಕ್ಕಳೊಂದಿಗೆ ಕಳುಹಿಸಿದ್ದೆ. ಅಕಸ್ಮಾತ್ ಬಿದ್ದು ಕೈ ಮುರಿದುಕೊಂಡಾಗ ಮನೆಯಲ್ಲೇ ನನಗೆ ಎಲ್ಲಾ ಪಾಠ ಕಲಿಸಿದ್ದೆ. ಆಟ ಆಡುವಾಗ ಬಿದ್ದು ಮಂಡಿ ಗಾಯ ಮಾಡಿಕೊಂಡು ಬಂದಾಗ ಬೈದು ಔಷಧಿ ಹಚ್ಚಿದ್ದೆ. ತೋಟದಲ್ಲೊಮ್ಮೆ ಆಡುವಾಗ ಬಂಡಾರ ಮಡಿಕಿ ಹುಳ ನನ್ನನ್ನು ಮುತ್ತಿದ್ದು, ನನ್ನ ನೋವಿನ ಅಳುವನ್ನು ನೀ ನೋಡಲಾರದೆ ಸೊಂಟದಲ್ಲಿ ಎತ್ತಿಕೊಂಡು ಕೆಲಸದವಳ ಬಳಿ ಓಡಿ ಹೋಗಿ ನನ್ನ ತಲೆಗೆ ಗಟ್ಟಿಯಾಗಿ ಹಿಡಿದಿದ್ದ ಹುಳವನ್ನ ಕಿತ್ತೆಸೆದಿದ್ದು. ಯಾವ ತಾಯಿ ತಾನೇ ತನ್ನ ಮಕ್ಕಳ ನೋವನ್ನು ಸಹಿಸಿಯಾಳು ಹೇಳು? ಅಮ್ಮಾ, ನಿನ್ನಿಂದ ನಾನು ಹಲವಾರು ವಿಚಾರಗಳನ್ನು ಕಲಿತಿದ್ದೇನೆ. ಆದರೆ ನಿನ್ನ ಸಹನೆ ಮತ್ತು ಮುಗ್ಧತೆ ಮಾತ್ರ ನನಗೆ ಬರಲೇ ಇಲ್ಲ. ನೀವೇನೋ ನಾವು ಮಗುವಾಗಿ¨ªಾಗ ನಮ್ಮನ್ನು ಬಾಚಿ ತಬ್ಬಿ ಮುದ್ದಿಸ್ತೀರಾ, ಅದೇ ಮಗು ತನ್ನ ತೊದಲು ಬಾಯಿಂದ ಅಮ್ಮ.. ಎಂದಾಗ ಸ್ವರ್ಗವನ್ನೇ ಕಾಣಿ¤àರಾ. ಪ್ರತೀದಿನ ಮಕ್ಕಳ ಲಾಲನೆ ಪಾಲನೆಯಲ್ಲಿ ಮುಳುಗಿ ಅವರ ಬೇಕು ಬೇಡಗಳನ್ನು ಪೂರೈಸುವುದರಲ್ಲಿ ಖುಷಿಯನ್ನು ಕಾಣುತ್ತೀರಿ. ಅದೇ ಮಕ್ಕಳು ಬೆಳೆದು ಒಳ್ಳೆಯ ಉದ್ಯೋಗಕ್ಕೆ ತೆರಳಲು ಆರಂಭಿಸಿದಾಗ ಬಂಧು ಬಳಗದವರ ಬಳಿ ಮತ್ತೆ ನಿಮ್ಮ ಮಕ್ಕಳನ್ನೇ ಹೊಗಳಿ ನಿಮ್ಮ ಪ್ರೀತಿಯ ಭಾರವನ್ನು ಹಗುರ ಮಾಡಿಕೊಳ್ಳುತ್ತೀರಿ. ಇವತ್ತು ಈ ಪತ್ರ ಬರೆಯುವ ನಿರ್ಧಾರ ನನ್ನ ಮನಸ್ಸನ್ನು ತಿಳಿ ಮಾಡಿತು ಅಮ್ಮ.
Related Articles
Advertisement
-ಇಂತಿ ನಿನ್ನ ಪ್ರೀತಿಯ ಮಗ