Advertisement

ಪ್ರಧಾನಿಗೆ ಸ್ವಾಗತ ಕೋರಿದ್ದ ಹಿಂದಿ ಫ್ಲೆಕ್ಸ್ ಗಳಿಗೆ ಮಸಿ ಬಳಿದ ಕರವೇ

07:14 PM Jun 19, 2022 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿ ಅಳವಡಿಸಲಾಗಿದ್ದ ನೂರಾರು ಹಿಂದಿ ಫ್ಲೆಕ್ಸ್ ಗಳಿಗೆ ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾನುವಾರ ಸಂಜೆ ಮೈಸೂರು ರಸ್ತೆಯಲ್ಲಿ ಮಸಿ ಬಳಿದು ಪ್ರತಿಭಟಿಸಿದ ಘಟನೆ ನಡೆದಿದೆ.

Advertisement

ಮೈಸೂರು ರಸ್ತೆಯಲ್ಲಿ ಸಚಿವ ಮುನಿರತ್ನ ನಾಯ್ಡು ಮತ್ತು ಬೆಂಬಲಿಗರು ಹಿಂದಿ ಭಾಷೆಯ ಫ್ಲೆಕ್ಸ್ ಗಳನ್ನು ಅಳವಡಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ, ಕರವೇ ಯುವ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್ ನೇತೃತ್ವದಲ್ಲಿ ಕಾರ್ಯಕರ್ತರು ಫ್ಲೆಕ್ಸ್ ಗಳಿಗೆ ಮಸಿ ಬಳಿದರು. ಪೊಲೀಸರು ಅಡ್ಡಿ ಪಡಿಸಿದರೂ ಸಹ ಫ್ಲೆಕ್ಸ್ ಗಳಿಗೆ ಮಸಿ ಬಳಿಯಲಾಯಿತು.

ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ಕಾರ್ತಿಕ್, ಪದ್ಮನಾಭನಗರ ಕ್ಷೇತ್ರದ ಅಧ್ಯಕ್ಷ ನಿತೀಶ್ ಮನು ಗೌಡ ಸೇರಿದಂತೆ ಪ್ರಮುಖರು ಈ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡು, ಕರ್ನಾಟಕದಲ್ಲಿ ಹಿಂದಿ ಹೇರಿಕೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.

ನೂರಾರು ಹಿಂದಿ ಫ್ಲೆಕ್ಸ್ ಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಸಿ ಬಳಿದ ಬಳಿಕ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗಿದ್ದು,ಮಸಿ ಬಳಿದ ಕರವೇ ಯುವಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್ ಸೇರಿದಂತೆ ಹಲವು ಕರವೇ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿಯೊಳಗೆ ಒಂದೇ ಒಂದು ಹಿಂದಿ ಫ್ಲೆಕ್ಸ್ ಉಳಿದಿದ್ದರೂ, ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಧರ್ಮರಾಜ್ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next