Advertisement

Raichur; ಪ್ರಧಾನಿ ಮೋದಿಯಿಂದ ಕೋಲಿ ಸಮಾಜಕ್ಕೆ ಅನ್ಯಾಯ: ಕಮಕನೂರು

02:39 PM Feb 09, 2024 | Team Udayavani |

ಕಲಬುರಗಿ: ಕೆಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ಅವರಿಂದ ಕೋಲಿ ಸಮಾಜಕ್ಕೆ ಅನ್ಯಾಯವಾಗಿದೆ. ಕಳೆದ ಐದು ವರ್ಷಗಳಿಂದ ರಾಜ್ಯಕ್ಕೆ ಬಂದಾಗ ಕೋಲಿ ಸಮಾಜ ಯಾದ್ ರಖೊಂಗಾ ಎಂದು ಕೋಲಿ ಸಮಾಜವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ರಾಜ್ಯ ಕೋಲಿ ಸಮಾಜ ನಾಯಕ, ಎಂಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಆರೋಪಿಸಿದರು.

Advertisement

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಐದು ವರ್ಷದಲ್ಲಿ ಬಿಜೆಪಿ ‌ಕೇಂದ್ರ ಮತ್ತು ರಾಜ್ಯದಲ್ಲೂ ಅಧಿಕಾರದಲ್ಲಿತ್ತು. ಆದರೂ 6-7 ಬಾರಿ ರಾಜ್ಯದಿಂದ ಮತ್ತು ನಮ್ಮ ಸಮಾಜದ ಪ್ರಮುಖರು ಕೇಂದ್ರ ಮಂತ್ರಿಗಳ ಬಳಿ ಹೋಗಿ‌ ಮನವಿ ನೀಡಿದರೂ ಏನು ಪ್ರಯೋಜನವಾಗಿಲ್ಲ. ಪ್ರತಿ ಬಾರಿ ಮನವಿ ಕೊಟ್ಟಗಲೂ ಎ.ಜಿ.ಜನರಲ್ ಕಚೇರಿಯಿಂದ ಫೈಲ್ ವಾಪಸ್ಸು ಕಳಿಸಿ ಮಿನಿಟ್ಸ್  ಕೇಳಿದ್ದು, ಗಂಗಾಮತ ಹೆಸರಲ್ಲಿ ಎಸ್ಟಿ‌ ಕೇಳಬೇಡಿ. ತಾಂತ್ರಿಕವಾಗಿ‌ ಕೊಡಲು ಸಾಧ್ಯವಿಲ್ಲ. ಕೋಲಿ, ಕಬ್ಬಲಿಗ, ಕಬ್ಬೇರು, ಬೆಸ್ತ್ ಹೆಸರಲ್ಲಿ ಬನ್ನಿ ಎಂದು ಹೇಳಿದಾಗಲೂ ಹಿಂದಿನ ಸರಕಾರ ಕಿವಿಗೊಟ್ಟು ಕೇಳಲಿಲ್ಲ. ಬರೀ ‌ಫೈಲ್ ಕೊಂಡೊಯ್ಯುವ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಆದ್ದರಿಂದ ಈಗ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿದೆ. ಮೊದಲ ಬಾರಿಗೆ ಕುಲಶಾಸ್ತ್ರೀಯ ಅಧ್ಯಯನ ವರದಿ ಕಳಿಸಿತ್ತು. ಆದರೆ, ಮುಂದೆ ಅಧಿಕಾರಕ್ಕೆ ಬಂದ ಬಹಳ ಬಿಜೆಪಿ ಹೆಸರಲ್ಲಿ‌ ಬಂಧುಗಳನ್ನು ದಾರಿ ತಪ್ಪಿಸುತ್ತಲೇ ಬರುತ್ತಿದ್ದಾರೆ ಎಂದರು.

ಈಗ ಸಮಯ ಬದಲಾಗಿದೆ. ಫೆ.25 ರಂದು ರಾಜ್ಯಮಟ್ಟದ ಸಮಾವೇಶ ಮಾಡಿ ರಾಜ್ಯದಿಂದ ಕೋಲಿ, ಬೆಸ್ತ, ಕಬ್ಬಲಿಗ ಹಾಗೂ ಅಂಬಿಗ ಎನ್ನುವ ಹೆಸರಲ್ಲಿ ಎಸ್ಟಿ ಫೈಲ್ ಮರು ತಿದ್ದುಪಡಿ ಮಾಡಿ ಕಳಿಸಲು ಒತ್ತಾಯ ಮಾಡಲಾಗುವುದು. ಆದ್ದರಿಂದ ರಾಜ್ಯದ ಮೂಲೆ ಮೂಲೆಗಳಿಲಿಂದ ಕೋಲಿ‌ಸಮಾಜದ ಬಂಧುಗಳು ಆಗಮಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆಯಲ್ಲಿ‌ರಾಜ್ಯಾಧ್ಯಕ್ಷ ಮೋಹನ್ ಕುಮಾರ, ತಿಪ್ಪಣ್ಣ ರೆಡ್ಡಿ, ಸಾಯಿಬಣ್ಣ ಬೋರಬಂಡ, ಶಾಂತಪ್ಪ ಪಾಟೀಲ ಬೀದರ್ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next