ಚಿತ್ರದುರ್ಗ: ಕೋಳಿ ಮಾಂಸದ ಉದ್ಯಮ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ. ಇದರಿಂದ ರೈತರಿಗೂ ಲಾಭವಾಗುತ್ತಿಲ್ಲ. ಸರ್ಕಾರಕ್ಕೂತೆರಿಗೆ ಬರುತ್ತಿಲ್ಲ ಎಂದು ಮಧ್ಯ ಕರ್ನಾಟಕ ಕೋಳಿ ಸಾಕಾಣಿಕೆ ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷ ಮಲ್ಲಾಪುರ ದೇವರಾಜ್ ಆರೋಪಿಸಿದರು.
ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಬಹುರಾಷ್ಟ್ರೀಯ ಕಂಪನಿಗಳು ಮಾಡುತ್ತಿರುವ ವಂಚನೆಯಿಂದ ರೈತರು ಹಾಗೂ ಗ್ರಾಹಕರ ಶೋಷಣೆಯಾಗುತ್ತಿದೆ. 13 ರೂ. ಗಳಿಗೆ ವಿತರಣೆ ಮಾಡಬೇಕಾದ ಒಂದು ಕೋಳಿಮರಿಯನ್ನು 50 ರೂ.ಗೆ ಮಾರುತ್ತಿದ್ದಾರೆ. ಮತ್ತೆ 15 ದಿನಗಳ ನಂತರ ಆಹಾರ ನೀಡಿ ಸಾಕಿದಾಗ ಪ್ರತಿ ಕೆಜಿಗೆ 80 ರೂ. ತಗುಲುತ್ತದೆ. ಇದರಿಂದ ಮಧ್ಯವರ್ತಿಗಳು ಹಾಗೂ ಕಂಪನಿಗಳಿಗೆ ಲಾಭವಾಗುವುದೇ ವಿನಃರೈತರಿಗಾಗಲೀ, ಕೋಳಿ ಸಾಕಾಣಿಕೆದಾರರಿಗಾಗಲೀ ಪ್ರಯೋಜನವಿಲ್ಲ ಎಂದರು.
ರೈತರ ಹೆಸರು ಹೇಳಿಕೊಂಡು ಕೋಳಿ ಉದ್ಯಮದಲ್ಲಿತೊಡಗಿರುವ ಬಹುರಾಷ್ಟ್ರೀಯ ಕಂಪನಿಗಳು ಅತ್ತ ಸರ್ಕಾರಕ್ಕೂ ತೆರಿಗೆ ಕಟ್ಟದೆ, ಇತ್ತ ಗ್ರಾಹಕರಿಗೂಅನುಕೂಲ ಮಾಡದೆ ವಂಚಿಸುತ್ತಿದೆ. ಇದರಿಂದ ಕೋಳಿ ಸಾಕಾಣಿಕೆ ಉದ್ಯಮ ಸಂಕಷ್ಟದಲ್ಲಿದೆ. ಈ ಅಕ್ರಮ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಹಾಗೂ ಪಶುಸಂಗೋಪನಾ ಇಲಾಖೆಗೆ ದೂರು ನೀಡಿದ್ದರೂ ಯಾವ ಪ್ರಯೋಜನವೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತ್ತೋರ್ವ ಕೋಳಿ ಸಾಕಾಣೆದಾರ ಕಾಚಾಪುರ ರಂಗಪ್ಪ ಮಾತನಾಡಿ, ಮೆಕ್ಕೆಜೋಳಕ್ಕೂ ಕೋಳಿ ಉದ್ಯಮಕ್ಕೂ ನಂಟಿದೆ. ಮೆಕ್ಕೆಜೋಳದಿಂದಲೇ ಕೋಳಿಗೆ ಆಹಾರ ತಯಾರಿಸಲಾಗುತ್ತಿದೆ. ಹಾಗಾಗಿ ಮೆಕ್ಕೆಜೋಳಬೆಳೆದ ರೈತನಿಗೂ ಬೆಂಬಲ ಬೆಲೆ ಸಿಗುತ್ತಿಲ್ಲ. ಅತ್ತ ಕೋಳಿ ಮಾರಾಟದಲ್ಲಿಯೂ ಲಾಭವಿಲ್ಲ. ಕೋಳಿ ಉದ್ಯಮ ನಿಂತು. ಮೆಕ್ಕೆಜೋಳ ಮಾಫಿಯಾ ತಲೆ ಎತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಹೊರಟಿವೆ. ಸೆಂಟ್ರಲ್ ಪೌಲ್ಟ್ರಿ ಡೆವಲಪ್‌ಮೆಂಟ್ ಆರ್ಗನೈಸೇಷನ್ ಅನ್ವಯ ಕೋಳಿಗಳಿಗೆ ದರ ನಿಗ ಯಾಗಬೇಕು. ವಿಜ್ಞಾನಿಗಳು ಕಂಪನಿಗಳಿಗೆ ಮಾರಾಟವಾಗಿ ರೈತರು ಹಾಗೂ ಕೋಳಿ ಸಾಕಾಣಿಕೆದಾರರನ್ನು ಬಲಿಕೊಡುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಕೋಳಿ ಸಾಕಾಣೆದಾರರಾದ ಲೋಹಿತ್, ಶ್ರೀನಿವಾಸ್, ರಘು ಇದ್ದರು