Advertisement

ಬಿಜೆಪಿ ಶಾಸಕ ದಡೆಸಗೂರುರಿಂದ ಅನ್ಯಾಯ: ಗದ್ದಲ ಎಬ್ಬಿಸಿದ ಮಹಿಳಾ ಅಧಿಕಾರಿ

03:20 PM Jun 06, 2022 | Team Udayavani |

ಬೆಂಗಳೂರು : ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಡೆಸಗೂರು ಅವರ ಶಾಸಕ ಭವನದ ಕೊಠಡಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಮಾತಿ‌ನ ಚಕಮಕಿ ನಡೆಸಿ ಗದ್ದಲ ಎಬ್ಬಿಸಿದ ಘಟನೆ ಸೋಮವಾರ ನಡೆದಿದೆ.

Advertisement

ಶಾಸಕರ ಕೊಠಡಿಗೆ ದಿಢೀರ್ ಪ್ರವೇಶ ಮಾಡಿದ ಮಹಿಳಾ ಅಧಿಕಾರಿ, ದಡೆಸಗೂರು ಅನ್ಯಾಯ ಮಾಡಿದ್ದಾರೆ. ತನಗೆ ನ್ಯಾಯ ಕೊಡಿಸುವಂತೆ ಗದ್ದಲ ಎಬ್ಬಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಶಾಸಕರ ಭವನದ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.

ಗದ್ದಲದ ಹಿನ್ನೆಲೆಯಲ್ಲಿ ಬಸವರಾಜ ದಡೆಸಗೂರು ಶಾಸಕರ ಭವನದಿಂದ ಬೀಗ ಹಾಕಿಕೊಂಡು ಹೊರಟು ಹೋಗಿದ್ದಾರೆ. ಮಹಿಳೆಯನ್ನೂ ಪೊಲೀಸರು ಸ್ಥಳದಿಂದ ಹೊರಗೆ ಕಳುಹಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಮಹಿಳಾ ಅಧಿಕಾರಿ ಮತ್ತು ಶಾಸಕರ ನಡುವೆ ಸಂಘರ್ಷ ನಡೆಯುತ್ತಿತ್ತು ಎಂದು ತಿಳಿದು ಬಂದಿದ್ದು, ಈ ಹಿಂದೆ ಇಬ್ಬರ ನಡುವಿನ ಸಂಭಾಷಣೆಯ ಆಡಿಯೊ ವೈರಲ್ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next