ಪ್ಯಾರಿಸ್: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿ ಅಭಿಯಾನದ ಮೊದಲ ದಿನವೇ ಭಾರತಕ್ಕೆ ನೋವಿನ ಕ್ಷಣ ಎದುರಾಯಿತು. ಪದಕ ಗೆಲ್ಲುವ ಅವಕಾಶವಿದ್ದರೂ ನಿಶಾ ದಹಿಯಾ ಬಲಗೈಯ ತೀವ್ರ ತೀವ್ರ ನೋವಿನಿಂದಾಗಿ ಪಂದ್ಯವನ್ನು ಬಿಟ್ಟುಕೊಟ್ಟರು. ನೋವಿಗೆ ತುತ್ತಾಗಿದ್ದರೂ ಜಿದ್ದಿಗೆ ಬಿದ್ದು ಹೋರಾಡಿ ಭಾರೀ ಮೆಚ್ಚುಗೆ ಪಡೆದರು. ಸೋಲಿನ ಬಳಿಕ ಕಣ್ಣೀರಿಟ್ಟರು.
ಅರ್ಹತಾ ಸುತ್ತಿನ ಪಂದ್ಯದಲ್ಲಿ ನಿಶಾ ಉಕ್ರೇನ್‌ನ ಸೋವಾ ರಿಜ್ಕೋ ಟೆಟಿಯಾನಾ ವಿರುದ್ಧ 6-4 ಅಂಕಗಳ ಅಂತರದಿಂದ ಜಯಗಳಿಸಿ ಕ್ವಾರ್ಟರ್ ಫೈನಲ್‌ಗೆ ಬಂದಿದ್ದರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಕೊರಿಯಾದ ಪಾಕ್ ಸೋಲ್ ಗಮ್ ಅವರನ್ನು ಎದುರಿಸಿದ ನಿಶಾ 6 ಅಂಕಗಳ ಮುನ್ನಡೆ ಸಾಧಿಸಿದ್ದರು. 2 ಅಂಕ ಬಿಟ್ಟುಕೊಟ್ಟ ಬಳಿಕ ಮತ್ತೆರಡು ಅಂಕ ಗಳಿಸಿ 8-2 ಅಂತದಿಂದ ಮುನ್ನಡೆ ಗಳಿಸಿಕೊಂಡರು.ನಂತರ ದುರಂತ ಎಂಬಂತೆ ಬಲಗೈನ ತೀವ್ರ ನೋವಿಗೆ ಗುರಿಯಾಗಿ 3 ಬಾರಿ ಚಿಕಿತ್ಸೆ ಪಡೆದುಕೊಂಡರು.
ಛಲ ಬಿಡದೇ ಹೋರಾಡಿದ ನಿಶಾ ಕೊನೆಯ 30 ಸೆಕೆಂಡ್‌ಗಳಲ್ಲಿ ರಿ 8 ಅಂಕಗಳನ್ನು ಬಿಟ್ಟುಕೊಟ್ಟು ಪಂದ್ಯವನ್ನೂ 10-8 ಅಂಕಗಳ ಅಂತರದಿಂದ ಬಿಟ್ಟುಕೊಟ್ಟರು. ನಿಶಾ ಗಾಯದ ಲಾಭದಿಂದಾಗಿ ಪಾಕ್ ಸೋಲ್ ಗಮ್ ಸುಲಭವಾಗಿ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದರು. ನಿಶಾ ಸೆಮಿಫೈನಲ್ ಪ್ರವೇಶಿಸಿದ್ದಾರೆ ಒಂದು ಪದಕ ಖಚಿತವಾಗುತ್ತಿತ್ತು.
ಇದನ್ನೂ ಓದಿ: Olympics; ಲಕ್ಷ್ಯ ಸೇನ್ ಕಂಚು ಕಸಿದುಕೊಂಡ ‘ನೋವು’: ಭಾರಿ ನಿರಾಸೆ
1 ಅಂಕದಿಂದ ತಪ್ಪಿದ ಕಂಚು
ಸ್ಕೀಟ್ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಶೂಟರ್‌ಗಳಾದ ಮಹೇಶ್ವರಿ ಚೌಹಾಣ್-ಅನಂತ್‌ಜೀತ್ ಸಿಂಗ್ ನರೂಕಾ 1 ಅಂಕದಿಂದ ಕಂಚಿನ ಪದಕ ತಪ್ಪಿಸಿಕೊಂಡರು. ಚೀನ ವಿರುದ್ಧ 43-44 ಅಂತರದ ಸೋತರು.
ಭಾನುವಾರ ನಡೆದ ಅರ್ಹತಾ ಸುತ್ತಿನಲ್ಲಿ 146 ಅಂಕಗಳನ್ನು ಗಳಿಸಿ 4ನೇ ಸ್ಥಾನ ಪಡೆದುಕೊಂಡಿದ್ದ ಭಾರತ ತಂಡ ಕಂಚಿನ ಪದಕದ
ಹೋರಾಟದಲ್ಲಿ ಆರಂಭದಿಂದಲೂ ಉತ್ತಮ ಪೈಪೋಟಿ ನೀಡಿತು. 4ನೇ ಸುತ್ತಿನಲ್ಲಿ ನರೂಕ 1 ಅಂಕ ಬಿಟ್ಟುಕೊಟ್ಟ ಕಾರಣ ಹಿನ್ನಡೆ ಅನುಭವಿಸಿತು. ಕ ಚೀನಾದ ಶೂಟರ್‌ಗಳಾದ ಯಿಟಿಂಗ್ ಜಿಯಾಂಗ್-ಜಿಯಾನ್ಲಿನ್ ಲ್ಯು ಎಲ್ಲಾ ಅಂಕಗಳನ್ನು ಗಳಿಸಿಕೊಂಡು 44 ಅಂಕ ಸಂಪಾದಿಸಿ ಪದಕ ಗೆದ್ದರು.