Advertisement

ಗಾಯಗೊಂಡಿದ್ದ ಪುಟಾಣಿ ಮರಿ ತಾಯಿಯೊಂದಿಗೆ ಅರಣ್ಯ ಸೇರಿತಾ?

09:22 PM Oct 17, 2022 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾಗಾಂಧಿಯವರಿಗೆ ಕಾಣಿಸಿಕೊಂಡಿದ್ದ ತಾಯಿಯೊಂದಿಗೆ ಗಾಯಗೊಂಡಿದ್ದ ಪುಟಾಣಿ ಆನೆ ಮರಿ ಚಿಕಿತ್ಸೆ ನಂತರ ಕಣ್ಗಾವಲಿನಿಂದ ತಪ್ಪಿಸಿಕೊಂಡಿದೆ.

Advertisement

ಉದ್ಯಾನವನದ ಕಬಿನಿ ಹಿನ್ನೀರಿನ ಬಳಿ ಸಫಾರಿಯಲ್ಲಿ ತಾಯಿಯೊಂದಿಗೆ ಗಾಯಗೊಂಡು ಬಳಲಿದ್ದ ಪುಟಾಣಿ ಆನೆಯನ್ನು ಕಂಡ ರಾಹುಲ್ ಗಾಂಧಿಯವರು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿಯವರಿಗೆ ಪತ್ರ ಬರೆದು ಪುಟಾಣಿ ಮರಿಗೆ ಚಿಕಿತ್ಸೆ ಕೊಡಿಸಿ ರಕ್ಷಣೆ ಮಾಡುವಂತೆ ಪತ್ರ ಬರೆದಿದ್ದರು.

ಮುಖ್ಯಮಂತ್ರಿಗಳ ಆದೇಶದಂತೆ ಪುಟಾಣಿ ಮರಿಯನ್ನು ಅ.೬ರಂದು ಪತ್ತೆಮಾಡಿ ಪತ್ತೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು ನಾಗರಹೊಳೆ ವನ್ಯಜೀವಿ ವಿಭಾಗದ ಪಶು ವೈದ್ಯರಿಂದ ಪುಟಾಣಿ ಆನೆ ಮರಿಯ ಸೊಂಡಿಲು ಮತ್ತು ಬಾಲದಲ್ಲಾಗಿದ್ದ ಗಾಯಕ್ಕೆ ಪಶು ವೈದ್ಯರು ಸಹ ಹರಸಾಹಸಪಟ್ಟು ಪುಟಾಣಿಗೆ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆಗೂ ಉತ್ತಮವಾಗಿ ಸ್ಪಂದಿಸಿತ್ತು. ಅರಣ್ಯ ಸಿಬ್ಬಂದಿಗಳು ತಾಯಿ ಮತ್ತು ಪುಟಾಣಿ ಮರಿಯನ್ನು ಜತನದಿಂದ ಕಣ್ಗಾವಲಾಗಿದ್ದರು.

ತಾಯಿ ಆನೆಯ ಹಾಲು ಕುಡಿದು ಚೇತರಿಸಿಕೊಂಡು ತಾಯಿಯೊಂದಿಗೆ ಆಟವಾಡಿಕೊಂಡಿತ್ತು. ಕಳೆದ ಎರಡು ದಿನಗಳಿಂದ ಅರಣ್ಯ ಸಿಬ್ಬಂದಿಗಳ ಕಣ್ಗಾವಲಿನಲ್ಲಿದ್ದ ತಾಯಿಯೊಂದಿಗೆ ಮರಿಯೂ ಕಾಣೆಯಾಗಿದ್ದು, ಇದೀಗ ತಾಯಿ ಮತ್ತು ಮರಿಯ ಹುಡುಕಾಟ ನಡೆದಿದೆ.

ಸಹಜ ಪ್ರಕ್ರಿಯೆ
ವನ್ಯಜೀವಿಗಳು ಅದರಲ್ಲೂ ಆನೆ ಸೂಕ್ಷ್ಮ ಜೀವಿಯಾಗಿದ್ದು, ವಾಸನೆ(ಸಿಂಡು) ತೀಷ್ಣವಾಗಿ ಗ್ರಹಿಸುವ ಆನೆಗಳು ಬೇರೆಡೆಗಳಲ್ಲಿ ಅಷ್ಟಾಗಿ ಒಗ್ಗುವುದಿಲ್ಲ. ಪಳಗಿದ ನಂತರವಷ್ಟೆ ಒಗ್ಗಿಕೊಳ್ಳುತ್ತವೆ. ಸಾಮಾನ್ಯವಾಗಿ ಅರಣ್ಯದೊಳಗಿನ ವನ್ಯಪ್ರಾಣಿಗಳು ಪ್ರಕೃತಿ ದತ್ತವಾಗಿಯೇ ಚಿಕಿತ್ಸೆ ಮಾಡಿಕೊಳ್ಳುತ್ತವೆ. ಈ ಆನೆ ಅರಣ್ಯದೊಳಗಿನ ಆನೆಯಾಗಿದ್ದು, ಬೇರೆ ವಾತಾವರಣದಲ್ಲಿದ್ದ ತಾಯಿ ಆನೆಯು ತನ್ನ ಆವಾಸ ಸ್ಥಾನ ಹುಡುಕಿಕೊಂಡು ಮತ್ತೆ ಕಾಡಿನೊಳಕ್ಕೆ ಹೋಗಿರಬಹುದು.

Advertisement

ಗಾಯಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆಗೂ ಉತ್ತಮವಾಗಿ ಸ್ಪಂದಿಸಿತ್ತು. ಬಹುಷಃ ಬದಲಾದ ವಾತಾವರಣದಿಂದ ಮತ್ತೆ ತನ್ನ ಜಾಗಕ್ಕೆ ತಾಯಿಯೊಂದಿಗೆ ಹೋಗಿರಬಹುದೆನ್ನುತ್ತಾರೆ ಅರಣ್ಯ ಸಿಬ್ಬಂದಿಗಳು.

Advertisement

Udayavani is now on Telegram. Click here to join our channel and stay updated with the latest news.

Next