ಲಂಡನ್: ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವಿನ ಅಭಿಯಾನ ಆರಂಭಿಸಿದ ಇಂಗ್ಲೆಂಡಿಗೆ ಆಘಾತವೊಂದು ಎದುರಾಗಿದೆ. ಪ್ರಧಾನ ವೇಗಿ ಕ್ರಿಸ್ ವೋಕ್ಸ್ ಗಾಯಾಳಾಗಿ ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದಾರೆ.
ಗುರುವಾರದ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಸಿಲುಕಿದ ವೋಕ್ಸ್ ಕೇವಲ 2 ಓವರ್ ಎಸೆಯುವಷ್ಟ ರಲ್ಲಿ ಡ್ರೆಸ್ಸಿಂಗ್ ರೂಮ್‌ಗೆ ವಾಪಸಾಗಿ ದ್ದರು. ಅನಂ ತರ ಅಂಗಳದಲ್ಲಿ ಕಾಣಿಸಿ ಕೊಂಡಿರಲಿಲ್ಲ. ಇದೀಗ ವೈದ್ಯರು ಅವರಿಗೆ ವಿಶ್ರಾಂತಿ ಸೂಚಿಸಿದ್ದಾರೆ.
ನೋವಿನ ಸಮಸ್ಯೆಯಿಂದಾಗಿಯೇ ವೋಕ್ಸ್ ದಕ್ಷಿಣ ಆಫ್ರಿಕಾ ಎದುರಿನ ಮೊದಲೆರಡು ಏಕದಿನ ಪಂದ್ಯ ಗಳಿಂದ ಹೊರಗುಳಿದಿದ್ದರು. ಹೀಗಿರುವಾಗ ಬಾಂಗ್ಲಾ ವಿರುದ್ಧ ಅವರನ್ನು ಆಡಿಸಬೇಕಿತ್ತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಾಯಕ ಮಾರ್ಗನ್, “ಇಲ್ಲ. ಅವರು ಸಂಪೂರ್ಣ ಫಿಟ್‌ನೆಸ್ ಹೊಂದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲೂ ಆಡಿದ್ದರು. ಹೀಗಾಗಿ ಬಾಂಗ್ಲಾ ವಿರುದ್ಧ ಆಡಿಸಿದ್ದರಲ್ಲಿ ಅವಸರವೇನೂ ಕಾಣುತ್ತಿಲ್ಲ…’ ಎಂದಿದ್ದಾರೆ.
ಇಂಗ್ಲೆಂಡ್ ಪ್ರಬಲ ಏಕದಿನ ತಂಡವನ್ನು ಹೊಂದಿದ್ದರೂ ಪ್ರಧಾನ ಆಟಗಾರರ ಫಿಟ್‌ನೆಸ್ ಸಮಸ್ಯೆಯಿಂದ ಮುಕ್ತವಾಗಿಲ್ಲ. ಶತಕದ ಇನ್ನಿಂಗ್ಸ್ ವೇಳೆ ಜೋ ರೂಟ್ ಮಂಡಿನೋವಿಗೆ ಒಳಗಾಗಿದ್ದಾರೆ. ಬೆನ್ ಸ್ಟೋಕ್ಸ್ ಕೂಡ ಪೂರ್ತಿ ಕ್ಷಮತೆ ಹೊಂದಿಲ್ಲ.
ಇಂಗ್ಲೆಂಡ್ ಇನ್ನು ಪ್ರಬಲ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಪಂದ್ಯಗಳನ್ನಾಡಲಿದೆ.