ಉಳ್ಳಾಲ : ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡುವುದರೊಂದಿಗೆ
ಮುಂದಿನ ದಿನಗಳಲ್ಲಿ ರಾಷ್ಟ್ರ ಆಂತಾರಾಷ್ಟ್ರೀಯ ಕುಸ್ತಿಪಟುಗಳಾಗಿ ರಾಜ್ಯಕ್ಕೆ ಹೆಸರು ತರುವ ಕಾರ್ಯ ಆಗಬೇಕು ಎಂದು ಆಹಾರ, ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಕೊಲ್ಯ ಸೋಮೇಶ್ವರದ ನಾಗಮಂಡಲ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಪ್ರಾರಂಭಗೊಂಡ ವೀರರಾಣಿ ಅಬ್ಬಕ್ಕ ಉತ್ಸವದ -2018ರ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಕುಸ್ತಿ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಎಂಎಸ್ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಕುಸ್ತಿ ಪಂದ್ಯಾಟಕ್ಕೆ ಚಾಲನೆ ನೀಡಿದರು. ಉತ್ಸವ ಸಮಿತಿ ಉಸ್ತುವಾರಿ ದಿನಕರ ಉಳ್ಳಾಲ್, ಜಿಲ್ಲಾ ಪಂಚಾಯತ್ ಸದಸ್ಯೆ ಧನ ಲಕ್ಷ್ಮೀ ಗಟ್ಟಿ, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಞಿಮೋನು, ಸದಸ್ಯ ಬಾಝಿಲ್ ಡಿ’ಸೋಜಾ, ಮುಖಂಡರಾದ ಸೀತಾರಾಮ ಬಂಗೇರ, ಆನಂದ ಅಸೈಗೋಳಿ, ತಾರಾನಾಥ್ ರೈ, ದೇವಕಿ ಉಳ್ಳಾಲ್, ತೋನ್ಸೆ ಪುಷ್ಕಳ್ ಕುಮಾರ್, ತ್ಯಾಗಂ ಹರೇಕಳ, ಮೋಹನ್ ಶಿರ್ಲಾಲ್, ರಾಧಾಕೃಷ್ಣ ರೈ, ಅಬ್ದುಲ್ ಅಝೀಝ್ ಹಕ್, ಭಾಸ್ಕರ ರೈ ಕುಕ್ಕುವಳ್ಳಿ ಲಕ್ಷ್ಮೀ ನಾರಾಯಣ್ ಹರೇಕಳ ಉಪಸ್ಥಿತರಿದ್ದರು.