ಶಹಾಬಾದ: ಮನುಷ್ಯ ಜೀವನದಲ್ಲಿ ಹುಟ್ಟಿದ ಮೇಲೆ ಏನನ್ನಾದರೂ ಸಾ ಧಿಸಬೇಕು. ಅಂದಾಗ ಬದುಕು ಸಾರ್ಥಕವಾಗುತ್ತದೆ. ಅಂತಹ ಸಾರ್ಥಕ ಬದುಕು ಸಾಗಿಸಿದವರು ಸಂತೋಷಕುಮಾರ ಇಂಗಿನಶೆಟ್ಟಿ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಇಂಗಿನಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ನಗರದ ಶ್ರೀರಾಮ ವೃತ್ತದಲ್ಲಿ ಸಂತೋಷಕುಮಾರ ಇಂಗಿನ ಶೆಟ್ಟಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವೀರಶೈವ ಸಮಾಜದ ಅಧ್ಯಕ್ಷರಾಗಿ ಯಾವುದೇ ಜವಾಬ್ದಾರಿ ಕೊಟ್ಟರೂ, ಅದನ್ನು ಸಮರ್ಪಕವಾಗಿ ನಿಭಾಯಿಸುವ ಶಕ್ತಿ ಅವರಿಗೆ ಇತ್ತು. ತಮ್ಮ ಸಂಘಟನಾ ಚಾತುರ್ಯದಿಂದ ಸ್ವಲ್ಪ ದಿನದಲ್ಲೇ ಪಕ್ಷದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದರು. ಸಮಾಜದ ಹಿತಕ್ಕಾಗಿ ತಮ್ಮ ತನು, ಮನ, ಧನವನ್ನು ಶ್ರೀಗಂಧದಂತೆ ಸವೆಸಿದ್ದರು. ಅವರ ಜೀವಿತಾವಧಿಯಲ್ಲಿ ಬಡವರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಮುಂದಾಗುತ್ತಿದ್ದರು. ಎಲ್ಲ ಸಮುದಾಯದವರನ್ನು ಅಪ್ಪಿಕೊಳ್ಳುವ ವಿಶಾಲ ಮನೋಭಾವ ಹೊಂದಿದ್ದರು ಎಂದರು.
ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಡಾ| ರಶೀದ್ ಮರ್ಚಂಟ್, ತಾಪಂ ಮಾಜಿ ಸದಸ್ಯ ನಿಂಗಣ್ಣ ಹುಳಗೋಳಕರ್, ಬಿಜೆಪಿ ಹಿರಿಯ ಮುಖಂಡ ಕನಕಪ್ಪ ದಂಡಗುಲಕರ್, ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ, ಮಾಜಿ ಅಧ್ಯಕ್ಷ ವಿಜಯಕುಮಾರ ಮುತ್ತಟ್ಟಿ, ನಗರಸಭೆ ಸದಸ್ಯ ರವಿ ರಾಠೊಡ, ಅಣ್ಣಪ್ಪ ದಸ್ತಾಪುರ, ನಾಗರಾಜ ಮೇಲಗಿರಿ, ಮಲ್ಲಿಕಾರ್ಜುನ ವಾಲಿ,ಬಸವರಾಜ ಮದ್ರಿಕಿ, ಬಸವರಾಜ ಗೊಳೇದ್, ಮೀರ ಅಲಿ ನಾಗೂರೆ, ಪ್ರಕಾಶ ರೆಡ್ಡಿ, ಶರಣು ಜೇರಟಗಿ, ಡಾ| ಅಹ್ಮದ್ ಪಟೇಲ್, ಮೃತ್ಯುಂಜಯ ಹಿರೇಮಠ, ದಿಲೀಪ ನಾಯಕ ಇತರರು ಇದ್ದರು.