Advertisement

ಮೂಲ ಸೌಕರ್ಯ ಪರಿಶೀಲನೆ

05:50 PM Jun 13, 2022 | Team Udayavani |

ಆಲಮಟ್ಟಿ: ಮಂಜಪ್ಪ ಹರ್ಡೇಕರ ಖಾಸಗಿ ಪದವಿ ಮಹಾವಿದ್ಯಾಲಯಕ್ಕೆ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ಥಳೀಯ ಪರಿಶೀಲನಾ ತಂಡ ಭೇಟಿ ನೀಡಿತು.

Advertisement

ಇತ್ತೀಚೆಗೆ ಬೆಳಗಾವಿಯ ಎಲ್‌ ಐಸಿಯ ಮುಖ್ಯಸ್ಥ ಡಾ| ಆನಂದ ಹೊಸೂರ ನೇತೃತ್ವದಲ್ಲಿ ಗುಂಡಣ್ಣ ಕಲಬುರ್ಗಿ, ಫಕ್ಕೀರಪ್ಪ ಸೊಲಗದ ಆಗಮಿಸಿ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆದಿತ್ತು. ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ರಾ.ಚ. ವಿವಿ ತನ್ನದೇ ಅದ ಮಾನದಂಡಗಳನ್ನು ರಚಿಸಿ ಅವುಗಳ ಅನುಷ್ಠಾನಕ್ಕೆ ಮುಂದಾಗಿದೆ. ಶಿಕ್ಷಣ ನೀತಿ ನೀಡುವ ಗುರಿ ಸಾಧಿಸಲು ಪ್ರಾಮುಖ್ಯತೆ ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ಎಲ್‌ಐಸಿ ಕಮಿಟಿ ಸದಸ್ಯರು ಆಗಮಿಸಿ ಕಾಲೇಜಿನ ವಾಸ್ತವಿಕ ಸ್ಥಿತಿ ಪರಿಶೀಲಿಸಿದರು.

ವರ್ಗ ಕೋಣೆಗಳತ್ತ ತೆರಳಿದ ತಂಡವು ಸೆಮಿನಾರ ಹಾಲ್‌, ಗ್ರಂಥಾಲಯ, ಪುಸ್ತಕಗಳ ಮಾಹಿತಿ ಸೇರಿದಂತೆ ಮೂಲ ಸೌಲಭ್ಯಗಳ ಪರಿಶೀಲನೆ ನಡೆಸಿತು. ಹಸಿರು ತೋರಣದಲ್ಲಿ ತಲೆ ಎತ್ತಿರುವ ಕಾಲೇಜು ಭವ್ಯ ಕಟ್ಟಡ, ವಿಸ್ತಾರವಾದ ಆಟದ ಮೈದಾನ ಕಂಡು ಮೆಚ್ಚುಗೆ ಸೂಚಿಸಿತು.

ಸಂಸ್ಥೆ ಅಧ್ಯಕ್ಷರಾಗಿರುವ ತೋಂಟದ ಡಾ| ಸಿದ್ದರಾಮ ಸ್ವಾಮಿಗಳು ಸಂಸ್ಥೆ ವತಿಯಿಂದ ಎಲ್‌ಐಸಿ ಕಮಿಟಿ ಚೇರಮನ್‌ ಸೇರಿದಂತೆ ಎಲ್ಲ ಸದಸ್ಯರಿಗೆ ಸನ್ಮಾನಿದರು. ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ವಿಜಯಪುರ ಷಣ್ಮುಖಾರೂಢ ಮಠದ ಅಭಿನವ ಸಿದ್ದಾರೂಢ ಸ್ವಾಮೀಜಿ, ಎನ್‌. ಕೆ.ಕುಂಬಾರ, ಸುರೇಶಗೌಡ ಪಾಟೀಲ, ಪ್ರಾಚಾರ್ಯ ಎಚ್‌.ಎನ್‌.ಕೆಲೂರ, ಪಿ.ಎ.ಹೇಮಗಿರಿಮಠ, ಜಿ.ಎಂ. ಕೋಟ್ಯಾಳ, ಎಸ್‌.ಐ.ಗಿಡ್ಡಪ್ಪಗೋಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next