Advertisement

140 ಕೋಟಿ ವೆಚ್ಚದಲ್ಲಿ ಮೂಲಸೌಲಭ್ಯ

11:15 AM Oct 30, 2019 | Team Udayavani |

ಹುಬ್ಬಳ್ಳಿ: ಡಿಸೆಂಬರ್‌ ಹಾಗೂ ಜನವರಿ ತಿಂಗಳಿನಲ್ಲಿ ಅವಳಿನಗರದಲ್ಲಿ ಮೂಲಸೌಲಭ್ಯಕ್ಕೆ ಸಂಬಂಧಿಸಿ 140 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಶಿರಡಿ ನಗರದ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸ ಕೊಠಡಿ ಹಾಗೂ ಲ್ಯಾಬೊರೇಟರಿ ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಳೆ ಕಾರಣ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಮಳೆ ನಿಂತಿರುವುದರಿಂದ ರಸ್ತೆಗಳಲ್ಲಿನ ಗುಂಡಿಗಳನ್ನು ತುಂಬಲು ಆದ್ಯತೆ ನೀಡಲಾಗುವುದು ಎಂದರು. ರಸ್ತೆಗಳನ್ನು ತಾತ್ಕಾಲಿಕವಾಗಿ ತುಂಬದೇ ಕನಿಷ್ಟ 1 ವರ್ಷ ಬಾಳಿಕೆ ಬರುವ ದಿಸೆಯಲ್ಲಿ ರಸ್ತೆ ಗುಂಡಿಗಳನ್ನು ತುಂಬುವಂತೆ ಸೂಚಿಸಲಾಗುವುದು. ರಸ್ತೆ ಗುಂಡಿ ತುಂಬುವ ಕಾಮಗಾರಿಗೆ ಮೊದಲ ಆದ್ಯತೆ ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಉದ್ಯಾನಗಳು ಹಾಗೂ ನಾಲಾಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯ ವ್ಯಾಪ್ತಿಗೆ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಬರುವುದಿಲ್ಲ. ಲ್ಯಾಮಿಂಗ್ಟನ್‌ ಶಾಲೆಯೊಂದನ್ನು ಮಾತ್ರ ಯೋಜನೆ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಶಿಕ್ಷಣ ಇಲಾಖೆಯ ಬಜೆಟ್‌ನಲ್ಲಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.

ಸ್ಮಾರ್ಟ್‌ ರಸ್ತೆಗಳ ನಿರ್ಮಾಣ ಸ್ವಲ್ಪ ವಿಳಂಬವಾಗಿದೆ. ರಸ್ತೆಗಳ ವಿನ್ಯಾಸದಲ್ಲಿ ಬದಲಾವಣೆ ಮಾಡಿರುವುದರಿಂದ ಆರಂಭ ತಡವಾಗಿದೆ. ಟೆಂಡರ್‌ಶ್ಯೂರ್‌ ರಸ್ತೆಗಳ ವಿನ್ಯಾಸ ಮಾಡಿದ್ದ ಸ್ವಾತಿ ರಾಮನಾಥನ್‌ ಅವರಿಗೆ ಸ್ಮಾರ್ಟ್‌ ರಸ್ತೆಗಳ ವಿನ್ಯಾಸ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.

ಸಿಆರ್‌ಎಫ್‌ ಕಾಮಗಾರಿ ಬಾಕಿ ಇವೆ. ಹಲವು ಕಾರಣಗಳಿಂದಾಗಿ ಕಾಮಗಾರಿ ಆರಂಭ ವಿಳಂಬವಾಗುತ್ತಿದೆ. ಕೆಲವು ಟೆಂಡರ್‌ ಹಂತಕ್ಕೆ ಬಂದಿದ್ದು, ಶೀಘ್ರ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಮುಖ 7 ರಸ್ತೆಗಳಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಪೂರ್ಣಗೊಂಡರೆ ಅವಳಿ ನಗರದ ಪ್ರಮುಖ ರಸ್ತೆಗಳು ಪರಿಪೂರ್ಣ ಕಾಂಕ್ರೀಟ್‌ ರಸ್ತೆಗಳಾಗಲಿವೆ ಎಂದು ಹೇಳಿದರು.

Advertisement

ನಗರೋತ್ಥಾನ ಯೋಜನೆ ಅನುದಾನ ಫೆಬ್ರವರಿಗೆ ಬರುವ ನಿರೀಕ್ಷೆಯಿದ್ದು, ಅದು ಬಂದ ನಂತರ ಕಾಮಗಾರಿ ಆರಂಭಿಸಲಾಗುವುದು. ಫ್ಲ ಓವರ್‌ ಆರಂಭಿಸುವ ಹಾಗೂ ಬಿಆರ್‌ಟಿಎಸ್‌ ಉದ್ಘಾಟನೆ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದೆ ಎಂದರು.

ಶಿರಡಿ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಉಪನ್ಯಾಸ ಕೊಠಡಿ ಹಾಗೂ ಲ್ಯಾಬೋರೇಟರಿನಿರ್ಮಿಸಲಾಗುತ್ತಿದೆ. ಇಲ್ಲಿ ವಿದ್ಯಾರ್ಥಿ ವಸತಿ ನಿಲಯ ನಿರ್ಮಿಸಬೇಕೆಂಬ ಬೇಡಿಕೆಯಿದೆ. ಇಲ್ಲಿ ಹಾಸ್ಟೆಲ್‌ ಮಾಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಿ.ಬಿ. ಕಲ್ಯಾಣಶೆಟ್ಟರ, ರಘು ಅಕ್ಮಂಚಿ, ವಸಂತ ಮುಂಡರಗಿ, ನಳಿನಿ ಬೆಂಗೇರಿ, ವೈ.ಎಂ. ಭಜಂತ್ರಿ, ವಾಣಿಶೀ ಬಾರಕೇರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next