Advertisement

ಇನ್ಫೋಸಿಸ್‌ಗೆ 56.8 ಕೋಟಿ ರೂ. ದಂಡ

09:48 AM Dec 19, 2019 | Team Udayavani |

ಕ್ಯಾಲಿಫೋರ್ನಿಯಾ: ದೇಶದ ಪ್ರತಿಷ್ಠಿತ ಸಾಫ್ಟ್ವೇರ್‌ ಕಂಪೆನಿ ಇನ್ಫೋಸಿಸ್‌ ಗೆ ಕ್ಯಾಲಿಫೋರ್ನಿಯಾ ಸರಕಾರ ಭಾರಿ ಪ್ರಮಾಣದ ದಂಡ ವಿಧಿಸಿದೆ. ವೀಸಾ ನಿಯಮ ಉಲ್ಲಂಘನೆ ಮತ್ತು ತೆರಿಗೆ ವಂಚಿಸಿದ ಕಾರಣಕ್ಕೆ ಕ್ಯಾಲಿಫೋರ್ನಿಯಾ ಸರಕಾರಕ್ಕೆ 56.8 ರೂ. ಕೋಟಿ ದಂಡ ಕಟ್ಟಬೇಕಿದೆ.

Advertisement

ನಕಲಿ ವೀಸಾ ಉಪಯೋಗಿಸಿ ಕಂಪನಿ ತನ್ನ ಕೆಲಸಗಾರರನ್ನು ಕ್ಯಾಲಿಫೋರ್ನಿಯಾಗೆ ಕರೆದುಕೊಂಡು ಬಂದಿದ್ದು, ಕ್ಯಾಲಿಫೋರ್ನಿಯಾ ಸರಕಾರದ ತೆರಿಗೆ ನೀತಿಯನ್ನು ಉಲ್ಲಂಘಿಸುವುದರೊಂದಿಗೆ ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಂಡಿದೆ ಎಂದು ಅಟರ್ನಿ ಜನರಲ್‌ ಕಚೇರಿ ಆರೋಪಿಸಿದೆ.

ಈ ಹಿನ್ನಲೆ ಕ್ಯಾಲಿಫೋರ್ನಿಯಾ ಅಟರ್ನಿ ಜನರಲ್‌ ಕಚೇರಿ, ಕಂಪನಿ ವಂಚನೆ ಮಾಡಿದೆ ಎಂದು ಆರೋಪ ಮಾಡಿದ್ದು, ಇನ್ಫೋಸಿಸ್‌ ಲಿಮಿಟೆಡ್‌, ಬಿಸಿನೆಸ್‌ ಕನ್ಸಲ್ಟಿಂಗ್‌, ಇನ್ಫಾರ್ಮೇಷನ್‌ ಟೆಕ್ನಾಲಜಿ ಎಂಡ್‌ ಔಟ್‌ ಸೋರ್ಸಿಂಗ್‌ ಕಂಪನಿ ಮತ್ತು ಅದರ ಅಂಗ ಸಂಸ್ಥೆ, ಇನ್ಫೋಸಿಸ್‌ ಬಿಪಿಎಂ ಲಿಮಿಟೆಡ್‌ ಸಂಸ್ಥೆಗಳಿಗೆ ಅಧಿಕ ಮೊತ್ತದ ದಂಡ ವಿಧಿಸಿದೆ.

ಪ್ರಕರಣ ಏನು ?
ಕ್ಯಾಲಿಫೋರ್ನಿಯಾದಲ್ಲಿರುವ ಇನ್ಫೋಸಿಸ್‌ ಕಂಪನಿಯಲ್ಲಿ ಸುಮಾರು 500 ಮಂದಿ ಕಾರ್ಮಿಕರಿದ್ದು, 2006 ರಿಂದ 2017ರ ಮಧ್ಯೆ ಕಂಪನಿ ಕೆಲಸಗಾರರಿಗೆ ಎಚ್‌-1ಬಿ ವೀಸಾ ನೀಡುವ ಬದಲು ಬಿ-1 ವೀಸಾ ಕೊಟ್ಟಿದೆ. ಎಚ್‌-1ಬಿ ವೀಸಾ ನೀಡಿದರ ಪರಣಾಮ ರಾಜ್ಯ ತೆರಿಗೆ ಜತೆಗೆ ಉದ್ಯೋಗಿಗಳಿಗೆ ಕಂಪನಿಯು ಸ್ಥಳೀಯ ವೇತನ ಕೂಡ ನೀಡಬೇಕಾಗುತ್ತದೆ. ಇದರಲ್ಲಿ ಕೂಡ ಕಂಪನಿ ಮೋಸ ಮಾಡಿದೆ ಎಂದು ಆರೋಪಿಸಿದೆ.

ಹಿಂದೆ ಒಮ್ಮೆಯೂ ದಂಡ ಪಾವತಿಸಿತ್ತು
ಈ ಹಿಂದೆ 2017 ರಲ್ಲಿ ಫೆಡರಲ್‌ ಅಧಿಕಾರಿಗಳಿಗೆ ತಪ್ಪು ಮಾಹಿತಿಯ ದಾಖಲೆಗಳನ್ನು ನೀಡಿರುವ ಆರೋಪದ ತಪ್ಪೋಪಿಕೊಂಡಿದ್ದ ಸಮಸ್ಯೆ ಬಗೆಹರಿಸಲು ನ್ಯೂಯಾರ್ಕ್‌ ಗೆ 1 ಮಿಲಿಯನ್‌ ಡಾಲರ್‌ ಪಾವತಿಸಲು ಇನ್ಫೋಸಿಸ್‌ ಒಪ್ಪಿಕೊಂಡಿತ್ತು. ಮಾಜಿ ಇನ್ಫೋಸಿಸ್‌ ಉದ್ಯೋಗಿ ಜಾಕ್‌(ಜಾಯ್) ಪಾಲ್ಮರ್‌ 2017 ರಲ್ಲಿ ಇನ್ಫೋಸಿಸ್‌ ವಿರುದ್ಧ ದೂರು ನೀಡಿದಾಗ ಕ್ಯಾಲಿಫೋರ್ನಿಯಾ ಇನ್ಫೋಸಿಸ್‌ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಂಡಿತ್ತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next