Advertisement

ಮುಂದಿನ 12 ತಿಂಗಳಲ್ಲಿ 25 ಸಾವಿರ ಎಂಜಿನಿಯರಿಂಗ್‌ ಪದವೀಧರರ ನೇಮಕ : ಇನ್ಫೋಸಿಸ್‌

11:06 PM Apr 15, 2021 | Team Udayavani |

ನವದೆಹಲಿ: ಮುಂದಿನ ಒಂದು ವರ್ಷದ ಅವಧಿಯಲ್ಲಿ ಇನ್ಫೋಸಿಸ್‌ 25 ಸಾವಿರ ಮಂದಿ ನೂತನ ಎಂಜಿನಿಯರಿಂಗ್‌ ಪದವೀಧರರನ್ನು ನೇಮಿಸಲು ನಿರ್ಧರಿಸಿದೆ.

Advertisement

ಕಳೆದ 1 ವರ್ಷದ ಅವಧಿಯಲ್ಲಿ ಇನ್ಫೋಸಿಸ್‌ 19 ಸಾವಿರ ನೂತನ ಎಂಜಿನಿಯರಿಂಗ್‌ ಪದವೀಧರರನ್ನು ನೇಮಕ ಮಾಡಿಕೊಂಡಿತ್ತು ಎಂದು ಮುಖ್ಯ ನಿರ್ವಹಣಾ ಅಧಿಕಾರಿ ಯು.ಬಿ.ಪ್ರವೀಣ್‌ ರಾವ್‌ ಹೇಳಿದ್ದಾರೆ.

ಕಳೆದ ವರ್ಷ ಒಟ್ಟು 21 ಸಾವಿರ ಮಂದಿಯನ್ನು ಕಾಲೇಜುಗಳಿಂದ ನೇಮಕ ಮಾಡಿತ್ತು. ಈ ಪೈಕಿ 19 ಸಾವಿರ ಮಂದಿ ಭಾರತೀಯರೇ ಆಗಿದ್ದಾರೆ. ಪ್ರಸಕ್ತ ವರ್ಷ 25 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಈ ಪೈಕಿ 1 ಸಾವಿರ ಮಂದಿ ಇತರ ರಾಷ್ಟ್ರಗಳಿಗೆ ಸೇರಿದವರಾಗಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಚೀನಾ ಚಿತಾವಣೆಗಳಿಗೆ ಭಾರತ ಬಗ್ಗುವುದಿಲ್ಲ : ಬಿಪಿನ್‌ ರಾವತ್

Advertisement

Udayavani is now on Telegram. Click here to join our channel and stay updated with the latest news.

Next