ಪುಣೆ: ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಓರ್ವಳನ್ನು ಶನಿವಾರ ರಾತ್ರಿ ಪುಣೆ ಹೊರವಲಯದಲ್ಲಿರುವ ಹೋಟೆಲ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಮಹಿಳೆಯ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಉತ್ತರಪ್ರದೇಶದ ಮೂಲದ ವಂದನಾ ದ್ವಿವೇದಿ ಎನ್ನಲಾಗಿದೆ ಈಕೆ ಪುಣೆಯ ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಪಿಂಪ್ರಿ ಚಿಂಚ್‌ವಾಡ್‌ನ ಹಿಂಜೆವಾರಿ ಪ್ರದೇಶದ ಓಯೋ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹೋಟೆಲ್‌ಗೆ ಆಗಮಿಸಿದ ವೇಳೆ ಹೋಟೆಲ್ ಕೊಠಡಿಯಲ್ಲಿ ರಕ್ತದ ಮಡುವಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಬಳಿಕ ಪೊಲೀಸರು ಹೋಟೆಲ್ ನ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ ವೇಳೆ ಮಹಿಳೆಯ ಜೊತೆ ಓರ್ವ ವ್ಯಕ್ತಿ ಇರುವುದು ಬೆಳಕಿಗೆ ಬಂದಿದೆ ಬಳಿಕ ತನಿಖೆ ನಡೆಸಿದ ವೇಳೆ ಆಕೆಯ ಗೆಳೆಯ ರಿಷಬ್ ನಿಗಮ್ ಎಂದು ಗೊತ್ತಾಗಿದ್ದು ಈತನೂ ಉತ್ತರ ಪ್ರದೇಶದ ಮೂಲದವನಾಗಿದ್ದಾನೆ ಎನ್ನಲಾಗಿದೆ. ಪೊಲೀಸರು ನಗರದ ಸುತ್ತ ನಖಾಬಂಧಿ ನಡೆಸಿ ರಿಷಬ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇವರಿಬ್ಬರ ನಡುವೆ ಪರಸ್ಪರ ಸಂಬಂಧವಿದ್ದು, ಜಗಳವೇ ಕೊಲೆಗೆ ಕಾರಣ ಎಂಬುದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ. ಈ ದುರಂತ ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ರಿಷಬ್ ನಿಗಮ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಲ್ಲದೆ ವಂದನಾ ಮತ್ತು ರಿಷಭ್ ಇಬ್ಬರ ಹೆಸರಿನಲ್ಲಿ ಹೋಟೆಲ್ ರೂಂ ಬುಕ್ಕಿಂಗ್ ಮಾಡಲಾಗಿದೆ. ಹಾಗಾಗಿ ರಿಷಬ್ ನಮ್ಮ ಪ್ರಮುಖ ಶಂಕಿತನಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಶಾಲ್ ಹಿರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Elephant: ಅಂಬೇವಾಡಿ, ಬರ್ಚಿ ರಸ್ತೆಯಲ್ಲಿ ಕಾಡಾನೆ ಹಾವಳಿ; ಬೆಳೆ ನಾಶ, ಭಯದಲ್ಲಿ ಗ್ರಾಮಸ್ಥರು