Advertisement

ಕೊಲೆಯಾದ ಪುಣೆ ಇನ್ಫಿ ಟೆಕ್ಕಿಯ ಕೊನೆ ಮಾತು ಬಹಿರಂಗ!

03:45 AM Feb 07, 2017 | Team Udayavani |

ಪುಣೆ: “ನನ್ನ ಕೆಲಸದ ಸ್ಥಳಕ್ಕೆ ಯಾರೋ ಬಂದಿದ್ದಾರೆ. ನಾನು ಮತ್ತೆ ಕರೆ ಮಾಡುತ್ತೇನೆ’ ಇದು ಕಳೆದ ತಿಂಗಳು ಕೊಲೆಯಾಗಿದ್ದ ಇನ್ಫೋಸಿಸ್‌ ಸಾಫ್ಟ್ವೇರ್‌ ಎಂಜಿನಿಯರ್‌ ರಸಿಲಾ ರಾಜು ಅವರ ಕೊನೆಯ ಮಾತು.

Advertisement

ಕಳೆದ ತಿಂಗಳ 29ರಂದು ಕಚೇರಿಯಲ್ಲಿ  ಕೊಲೆಯಾದ ರಸೀಲಾ ತನ್ನ ಸೋದರ ಸಂಬಂಧಿ ಅಂಜಲಿ ನಂದಕುಮಾರ್‌ ಎಂಬುವರೊಂದಿಗೆ ಫೋನ್‌ನಲ್ಲಿ ಹೀಗೆ ಹೇಳಿದ್ದರು. ಕಲ್ಲಿಕೋಟೆ ಮೂಲದ ರಸಿಲಾ  ಮತ್ತೆ ಕೆಲವು ದಿನಗಳಲ್ಲಿ ಬೆಂಗಳೂಧಿರಿಗೆ ವರ್ಗಾಧಿವಣೆಧಿಯಾಗಲಿದ್ದರು. ಆದರೆ ಕಚೇರಿಯಲ್ಲಿ ತಮ್ಮ ಬಾಸ್‌ ತಮಗೆ ಹೆಚ್ಚು ಕೆಲಸ ನೀಡುತ್ತಾರೆ ಮತ್ತು ತಮ್ಮ ವಿರುದ್ಧ ನಡೆದುಕೊಳ್ಳುತ್ತಿರುವುದಾಗಿ ಆಗಾಗ್ಗೆ ತಮ್ಮ ಸಂಬಂಧಿಗಳೊಂದಿಗೆ ಅವರು ಹೇಳುತ್ತಿದ್ದರು. 

“ಫೆಬ್ರವರಿ ಮೊದಲ ವಾರದಲ್ಲಿ ನನಗೆ ಬೆಂಗಳೂರಿಗೆ ವರ್ಗಾವಣೆ ಸಿಗಬಹುದು. ನನ್ನ ಇಂದಿನ ಕೆಲಸದ ಸಲ್ಲಿಕೆಯೊಂದಿಗೆ ಇದು ನಿರ್ಧಾರವಾಗಲಿದೆ. ಯಾರೋ ನನ್ನ ಕೆಲಸದ ಸ್ಥಳಕ್ಕೆ ಬಂದಿದ್ದಾರೆ, ನಾನು ಮತ್ತೆ ಕರೆಮಾಡುತ್ತೇನೆ’ ಎಂದು ಕೊನೆಯದಾಗಿ ಹೇಳಿದ್ದರು. ಆ ಬಳಿಕ ಕಚೇರಿಯ 9ನೇ ಮಹಡಿಯ ಕೋಣೆಯಲ್ಲಿ ರಸೀಲಾ ಶವವಾಗಿ ಪತ್ತೆಯಾಗಿದ್ದರು.  ಪ್ರಕರಣದಲ್ಲಿ ಅಸ್ಸಾಂ ಮೂಲದ ಬಹ್‌ಬೆನ್‌ ಸೈಕಾ ಎಂಬ ಸೆಕ್ಯೂರಿಟಿ ಗಾರ್ಡ್‌ನನ್ನು ಪೊಲೀಸರು ಬಂಧಿಸಿದ್ದು, ಆತ ಕೃತ್ಯ ಒಪ್ಪಿಕೊಂಡಿದ್ದ. ತನ್ನನ್ನು ಕೆಟ್ಟದ್ದಾಗಿ ನೋಡಿದ್ದಕ್ಕೆ ರಸೀಲಾ ದೂರು ನೀಡುವುದಾಗಿ ಹೇಳಿದ್ದರಿಂದ ಕೃತ್ಯವೆಸಗಿದ್ದಾಗಿ ಹೇಳಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next