Advertisement

ಆರು ಸಾಧಕರಿಗೆ ಇನ್ಫೋಸಿಸ್‌ ಸೈನ್ಸ್‌ ಫೌಂಡೇಶನ್‌ ಪ್ರಶಸ್ತಿ

01:50 AM Nov 08, 2019 | mahesh |

ಬೆಂಗಳೂರು: ಇನ್ಫೋಸಿಸ್‌ ವಿಜ್ಞಾನ ಫೌಂಡೇಶನ್‌ (ಐಎಸ್‌ಎಫ್) 2019ನೇ ಸಾಲಿನ ಇನ್ಫೋಸಿಸ್‌ ಪ್ರಶಸ್ತಿಯ ವಿಜೇತರ ಹೆಸರುಗಳನ್ನು ಪ್ರಕಟಿಸಲಾಗಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ| ಮುಗೇಶ್‌ ಭೌತ ವಿಜ್ಞಾನ ವಿಭಾಗದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ಚಿನ್ನದ ಪದಕ, ಫ‌ಲಕ ಮತ್ತು 1,00,000 ಅಮೆರಿಕನ್‌ ಡಾಲರ್‌ (ಅದಕ್ಕೆ ಸಮನಾದ ಭಾರತೀಯ ನಗದು)ನ್ನು ಒಳಗೊಂಡಿರುತ್ತದೆ.

Advertisement

ಎಂಜಿನಿಯರಿಂಗ್‌, ಕಂಪ್ಯೂಟರ್‌ ವಿಜ್ಞಾನ ಕ್ಷೇತ್ರದಲ್ಲಿ ಮುಂಬಯಿನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ಪೀಠದ ಪ್ರಾಧ್ಯಾಪಕಿ ಸುನೀತಾ ಸುರವಗಿ, ಮಾನವಿಕ ಶಾಸ್ತ್ರ ಕ್ಷೇತ್ರದಲ್ಲಿ ಮಂಡಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮಾನವಿಕ ಶಾಸ್ತ್ರ ಮತ್ತು ಸಮಾಜ ವಿಜ್ಞಾನ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರೊಫೆಸರ್‌ ಮನು ವಿ.ದೇವದೇವನ್‌, ಜೀವ ವಿಜ್ಞಾನ ಕ್ಷೇತ್ರದಲ್ಲಿ ಹೈದರಾಬಾದ್‌ನ ಸೆಂಟರ್‌ ಫಾರ್‌ ಸೆಲ್ಯುಲರ್‌ ಆ್ಯಂಡ್‌ ಮಾಲಿಕ್ಯುಲರ್‌ ಬಯಾಲಜಿಯ (ಸಿಸಿಎಂಬಿ) ಮುಖ್ಯ ವಿಜ್ಞಾನಿ ಡಾ| ಮಂಜುಳಾ ರೆಡ್ಡಿ, ಗಣಿತ ವಿಜ್ಞಾನ ಕ್ಷೇತ್ರದಲ್ಲಿ ಇಟಿಎಚ್‌ ಜ್ಯೂರಿಚ್‌ನ ಗಣಿತ ವಿಭಾಗದ ಪ್ರೊ| ಸಿದ್ಧಾರ್ಥ ಮಿಶ್ರಾ, ಭೌತಶಾಸ್ತ್ರ ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್‌ ಜಿ.ಮುಗೇಶ್‌, ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ ಜಾನ್ಸ್‌ ಹಾಪ್‌ ಕಿನ್ಸ್‌ ನ ಕ್ರೀಯೇಗರ್‌ ಸ್ಕೂಲ್‌ ಆಫ್ ಆರ್ಟ್ಸ್ ಆ್ಯಂಡ್‌ ಸೈನ್ಸ್‌ ನ ಆಂಥ್ರೋಪಾಲಜಿ ವಿಭಾಗದ ಪ್ರೊ| ಆನಂದ್‌ ಪಾಂಡಿಯನ್‌ ಅವರಿಗೆ “ಇನ್ಫೋಸಿಸ್‌ ಪ್ರಶಸ್ತಿ-2019′ ಲಭಿಸಿದೆ.

ಮುಂದಿನ ವರ್ಷದ ಜ. 7ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಮರ್ಥ್ಯ ಸೇನ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಇನ್ಫೋಸಿಸ್‌ ಸೈನ್ಸ್‌ ಫೌಂಡೇಶನ್‌ನ ಅಧ್ಯಕ್ಷ ಮತ್ತು ಇನ್ಫೋಸಿಸ್‌ ಲಿಮಿಟೆಡ್‌ನ‌ ಸಹ ಸಂಸ್ಥಾಪಕ ಎಸ್‌.ಡಿ. ಶಿಬುಲಾಲ್‌ ತಿಳಿಸಿದರು.

ಮೂಲಭೂತ ಸಂಶೋಧನೆಯ ಮಹತ್ವವನ್ನು ವಿವರಿಸಿದ ಇನ್ಫೋಸಿಸ್‌ ಸೈನ್ಸ್‌ ಫೌಂಡೇಶನ್‌ನ ಟ್ರಸ್ಟಿ , ಇನ್ಫೋಸಿಸ್‌ ಸಂಸ್ಥಾಪಕರಾದ ಎನ್‌.ಆರ್‌. ನಾರಾಯಣ ಮೂರ್ತಿ, ನಾವು ನಮ್ಮ ಯುವಕರಿಗೆ ಮೂಲಭೂತ ಸಂಶೋಧನೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next