Advertisement

ಷೇರು ಹಿಂಪಡೆಯಲು ಇನ್ಫೋಸಿಸ್‌ ಚಿಂತನೆ?

08:21 AM Feb 08, 2017 | Karthik A |

ಮುಂಬಯಿ: ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ಷೇರುದಾರರಿಂದ 12 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸುವ ಬಗ್ಗೆ ಚಿಂತನೆ ನಡೆಸಿದೆ. ಷೇರುದಾರರು ಈ ಬಗ್ಗೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿಕೊಳ್ಳುತ್ತಿದ್ದರೂ ಕಂಪೆನಿ ಯೋಚಿಸಿರಲಿಲ್ಲ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಸದ್ಯ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಲಾಗಿದೆ. ಇದರಿದಾಗಿ ಷೇರುದಾರರಿಗೆ ಭಾರಿ ಪ್ರಮಾಣದಲ್ಲಿ ನಗದು ಪೂರೈಕೆಯಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿ ಐಟಿ ದಿಗ್ಗಜ 38 ಸಾವಿರ ಕೋಟಿ ರೂ. ನಗದು ಹೊಂದಿದೆ. ಇಂಥದ್ದೊಂದು ವರದಿ ಪ್ರಕಟವಾಗುತ್ತಿದ್ದಂತೆಯೇ ಷೇರು ಪೇಟೆಯಲ್ಲಿ ಇನ್ಫೋಸಿಸ್‌ ಷೇರುಗಳು ಶೇ.1.1ರಷ್ಟು ಏರಿಕೆ ಕಂಡವು.

Advertisement
Advertisement

Udayavani is now on Telegram. Click here to join our channel and stay updated with the latest news.

Next