Advertisement

ಕೆಲ ವರ್ಷಗಳ ನಿರೀಕ್ಷೆಗೆ ಫಲ : ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕಾರ್ಯಾರಂಭ

04:04 PM Aug 01, 2022 | Team Udayavani |

ಹುಬ್ಬಳ್ಳಿ: ಇನ್ಫೋಸಿಸ್ ಹುಬ್ಬಳ್ಳಿಯಲ್ಲಿ ಸೋಮವಾರದಿಂದ ಕಾರ್ಯಾರಂಭ ಮಾಡಿದಿದ್ದು, ಕೆಲ ವರ್ಷಗಳ ನಿರೀಕ್ಷೆಗೆ ಫಲದೊರೆತಂತಾಗಿದೆ.

Advertisement

ಕಳೆದೊಂದು ತಿಂಗಳಿನಿಂದ ಆನ್ ಲೈನ್ ಅಭಿಯಾನ ಆರಂಭವಾಗಿತ್ತಲ್ಲದೆ, ಸ್ಟಾರ್ಟ್ ಇನ್ಫೋಸಿಸ್ ಹುಬ್ಬಳ್ಳಿ ವೃತ್ತಿಪರರ ತಂಡದಿಂದ ಅಭಿಯಾನ, ಒತ್ತಡ ಶುರುವಾಗಿತ್ತು.ಸೋಮವಾರದಿಂದ ಇನ್ಫೋಸಿಸ್ ಕಾರ್ಯಾರಂಭ ಮಾಡಿತು.ಮೊದಲ ದಿನ ಬೆಳಿಗ್ಗೆ ಸುಮಾರು 45 ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸಕ್ಕೆ ಹಾಜರಾದರೆಂದು ಮೂಲಗಳು ತಿಳಿಸಿವೆ.

ಇನ್ಫೋಸಿಸ್ ಹುಬ್ಬಳ್ಳಿ ಯಲ್ಲಿ 2018 ರಲ್ಲಿಯೇ ಕಟ್ಟಡ ನಿರ್ಮಾಣ ಮಾಡಿದ್ದರೂ, ಕಾರ್ಯಾರಂಭ ಮಾಡಿರಲಿಲ್ಲ.

ಸ್ಟಾರ್ಟ್ ಇನ್ಫೋಸಿಸ್ ಹುಬ್ಬಳ್ಳಿ ವೃತ್ತಿಪರ ತಂಡದವರು, ಐಬಿಎಂಆರ್ ಕಾಲೇಜು ವಿದ್ಯಾರ್ಥಿಗಳು ಇನ್ನಿತರರು ಕಚೇರಿ ಮುಂದೆ ಸೇರಿ ಇನ್ಫೋಸಿಸ್ ಕಾರ್ಯಾರಂಭನ್ನು ಸ್ವಾಗತಿಸಿದರಲ್ಲದೆ, ಸಿಹಿ ಹಂಚಿ ಸಂಭ್ರಮಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next