Advertisement

ಇನ್ಫೋಸಿಸ್‌ ಫೌಂಡೇಶನ್‌ 1.5 ಕೋಟಿ ರೂ. ಸಲಕರಣೆ ವಿತರಣೆ

07:20 AM May 21, 2020 | mahesh |

ಮಂಗಳೂರು: ಇನ್ಫೋಸಿಸ್‌ ಫೌಂಡೇಶನ್‌ ವತಿಯಿಂದ ದ. ಕ. ಜಿಲ್ಲೆಯ ವೆನ್ಲಾಕ್‌ ಆಸ್ಪತ್ರೆ ಮತ್ತು ಪೊಲೀಸ್‌ ಆಯುಕ್ತರ ಕಚೇರಿಗಳಿಗೆ 1.50 ಕೋ. ರೂ. ಮೌಲ್ಯದ ವೈದ್ಯಕೀಯ ಉಪಕರಣಗಳು ಹಾಗೂ ಸಾಮಗ್ರಿಗಳನ್ನು ಬುಧವಾರ ಮಂಗಳೂರಿನಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

Advertisement

ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಇನ್ಫೋಸಿಸ್‌ ಫೌಂಡೇಶನ್‌ ವತಿಯಿಂದ ಕಿಟ್‌ ವಿತರಣೆ ಕಾರ್ಯಕ್ರಮ ನಡೆಯಿತು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ವೆನ್ಲಾಕ್‌ ಆಸ್ಪತ್ರೆಗೆ 76 ಲಕ್ಷ ರೂ. ಮೌಲ್ಯದ 5 ವೆಂಟಿಲೇಟರ್‌, ಪಿಪಿಇ ಕಿಟ್‌, ಥರ್ಮಾಮೀಟರ್‌ ಮತ್ತು ವೈದ್ಯಕೀಯ ಸಲಕರಣೆ, ಪೊಲೀಸ್‌ ಆಯುಕ್ತರ ಕಚೇರಿಗೆ 58 ಲಕ್ಷ ರೂ. ಮೌಲ್ಯದ ಪಿಪಿಇ ಕಿಟ್‌, ಸ್ಯಾನಿಟೈಸರ್ಸ್‌ ಹಾಗೂ 16 ಲಕ್ಷ ರೂ. ವೆಚ್ಚದ 2 ಸಾವಿರ ಡ್ರೈ ರೇಷನ್‌ ಕಿಟ್‌ಗಳನ್ನು ವಿತರಿಸಲಾಯಿತು.

ಇನ್ಫೋಸಿಸ್‌ ಕೇಂದ್ರಿಯ ಮುಖ್ಯಸ್ಥ ವ್ಯಾಸದೇವ ಕಾಮತ್‌, ಇನ್ಫೋಸಿಸ್‌ ಕ್ರಾಂತಿ ಮುಖ್ಯಸ್ಥ ಹರೀಶ್‌, ಜಿಲ್ಲಾ ವ್ಯವಸ್ಥಾಪಕ ಡಾ| ಕಿಶೋರ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ರವೀಂದ್ರ ಕಂಬಳಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್‌ ಕುಂಪಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next