Advertisement

ಕೆಲಸ ಬಿಟ್ಟ 6 ತಿಂಗಳು ಪ್ರತಿಸ್ಪರ್ಧಿ ಕಂಪೆನಿ ಸೇರಲು ಇನ್ಫೋಸಿಸ್‌ ನಿರ್ಬಂಧ

10:04 PM Apr 21, 2022 | Team Udayavani |

ಹೊಸದಿಲ್ಲಿ: ಐಟಿ ಉದ್ಯೋಗಿಗಳೇ ಗಮನವಿಟ್ಟು ಕೇಳಿ… ನೀವೇನಾದರೂ ಈಗ ಕೆಲಸ ಮಾಡುತ್ತಿರುವ ಕಂಪೆನಿಗೆ ರಾಜೀನಾಮೆ ನೀಡಿದರೆ ಮುಂದಿನ 6 ತಿಂಗಳು ಮನೆಯಲ್ಲೇ ಇರಬೇಕಾಗುತ್ತದೆ!

Advertisement

ಹೌದು. ಉದ್ಯೋಗಿಗಳು ಒಂದು ಕಂಪೆನಿ ತೊರೆದರೆ, ಮುಂದಿನ 6 ತಿಂಗಳ ಕಾಲ ಪ್ರತಿಸ್ಪರ್ಧಿ ಕಂಪೆನಿಗೆ ಸೇರುವಂತಿಲ್ಲ ಎಂಬ ಹೊಸ ನಿಯಮವನ್ನು ಐಟಿ ದಿಗ್ಗಜ ಇನ್ಫೋಸಿಸ್‌ ಜಾರಿ ಮಾಡಿದೆ. ಪ್ರತಿಭಾ ಪಲಾಯನವನ್ನು ತಪ್ಪಿಸುವ ಸಲುವಾಗಿ ಕಂಪೆನಿ ಈ ತಂತ್ರದ ಮೊರೆ ಹೋಗಿದೆ.

ಸಾಫ್ಟ್ವೇರ್‌ ಮತ್ತು ಬಿಪಿಒ ಕ್ಷೇತ್ರದಲ್ಲಿ ಕಂಪೆನಿಯಿಂದ ಕಂಪೆನಿಗೆ ಹಾರುವವರ ಸಂಖ್ಯೆ ಹೆಚ್ಚಳವಾಗಿದ್ದು, ಅದಕ್ಕೆ ಕಡಿವಾಣ ಹಾಕುವ ಸಲುವಾಗಿ “ಉದ್ಯೋಗಿಗಳ ಆಫ‌ರ್‌ ಲೆಟರ್‌’ನಲ್ಲೇ ಈ ಷರತ್ತನ್ನು ವಿಧಿಸಲಾಗುತ್ತಿದೆ. ಇನ್ಫೋಸಿಸ್‌ನ ಈ ಕ್ರಮಕ್ಕೆ ಉದ್ಯೋಗಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಬಿಪಿಒ ಮತ್ತು ಐಟಿ ಉದ್ಯೋಗಿಗಳ ಸಂಘ, ನೇಸೆಂಟ್‌ ಇನ್ಫಾರ್ಮೇಷನ್‌ ಟೆಕ್ನಾಲಜಿ ಎಂಪ್ಲಾಯೀಸ್‌ ಸೆನೇಟ್‌(ನೈಟ್ಸ್‌) ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿದೆ.

ಆಯ್ಕೆಗೆ ಕತ್ತರಿ! :

ಆಫ‌ರ್‌ ಲೆಟರ್‌ನಲ್ಲಿ “ರಾಜೀನಾಮೆಗೆ ಮುನ್ನ 12 ತಿಂಗಳ ಕಾಲ ನೀವು ಯಾವ ಕ್ಲೈಂಟ್‌ಗಳೊಂದಿಗೆ ಕೆಲಸ ಮಾಡಿದ್ದೀರೋ, ಅದೇ ಕ್ಲೈಂಟ್‌ಗಳನ್ನು ಹೊಂದಿರುವ ಬೇರೆ ಪ್ರತಿಸ್ಪರ್ಧಿ ಕಂಪೆನಿಯಲ್ಲಿ ಮುಂದಿನ 6 ತಿಂಗಳ ಕಾಲ ಕೆಲಸಕ್ಕೆ ಸೇರುವಂತಿಲ್ಲ’ ಎಂದು ನಮೂದಿಸಲಾಗಿದೆ. ಈ ಮೂಲಕ ಉದ್ಯೋಗಿಗಳ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿಯಲಾಗಿದೆ. ಟಿಸಿಎಸ್‌, ಆ್ಯಕ್ಸೆಂಚರ್‌, ಐಬಿಎಂ, ಕಾಗ್ನೆ„ಜೆಂಟ್‌, ವಿಪ್ರೋ, ಟೆಕ್‌ ಮಹೀಂದ್ರಾ, ಜೆನ್‌ಪ್ಯಾಕ್ಟ್  ಮತ್ತು ಎಚ್‌ಸಿಎಲ್‌ಗ‌ಳನ್ನು ಪ್ರತಿಸ್ಪರ್ಧಿ ಕಂಪೆನಿಗಳೆಂದು ನಮೂದಿಸಲಾಗಿದೆ.

Advertisement

ಕೆಲಸ ಬಿಟ್ಟವರು :

ಜನವರಿಯಿಂದ ಮಾರ್ಚ್‌ವರೆಗಿನ 3 ತಿಂಗಳಲ್ಲಿ ಶೇ.17.4ರಷ್ಟು ಉದ್ಯೋಗಿಗಳು ಟಿಸಿಎಸ್‌ ಕಂಪೆನಿ ತೊರೆದಿದ್ದಾರೆ. ಇನ್ಫೋಸಿಸ್‌ನ 80 ಸಾವಿರಕ್ಕೂ ಹೆಚ್ಚು ಮಂದಿ (ಶೇ.27.7) ಕೆಲಸ ಬಿಟ್ಟಿದ್ದಾರೆ.

ಇನ್ಫೋಸಿಸ್‌ ಸ್ಪಷ್ಟನೆಯೇನು? :

ಜಗತ್ತಿನ ಬಹುಭಾಗಗಳಲ್ಲಿ ಇಂಥದ್ದೊಂದು ನಿಯಮವನ್ನು ಅನುಸರಿಸಲಾಗುತ್ತದೆ. ಮಾಹಿತಿಗಳ ಗೌಪ್ಯತೆ ಕಾಪಾಡಿಕೊಳ್ಳಲು, ಗ್ರಾಹಕರೊಂದಿಗಿನ ಸಂಪರ್ಕ ಮತ್ತು ಇತರೆ ನ್ಯಾಯಯುತ ಉದ್ದಿಮೆ ಹಿತಾಸಕ್ತಿಗಳ ಸಂರಕ್ಷಣೆಗಾಗಿ ಈ ನಿಯಮ ಮಾಡಲಾಗಿದೆ. ಕಂಪೆನಿಗೆ ಸೇರುವ ಮೊದಲೇ ಪ್ರತಿಯೊಬ್ಬರಿಗೂ ಈ ನಿಯಮದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಇನ್ಫೋಸಿಸ್‌ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next